ಬೆಂಗಳೂರು: ಟ್ವಿಟ್ಟರ್ನಲ್ಲಿ ತಮ್ಮ ನೋವನ್ನು ಹೊರಹಾಕಿದ ಮಾಜಿ ಸಿಎಂ ಸಿದ್ದರಾಮಯ್ಯ, ತಮ್ಮ ಅಧಿಕಾರ ಅವಧಿಯಲ್ಲಿ ಮಾಡಿದ ಕೆಲಸಕ್ಕೆ ಬೆಲೆ ಸಿಗದಿರುವುದಕ್ಕೆ ಟ್ವೀಟ್ ಮೂಲಕ ಬೇಸರ ವ್ಯಕ್ತಪಡಿಸಿದ್ದಾರೆ.
ಟ್ವೀಟ್ ಮೂಲಕ ತಮ್ಮ ಬೇಸರ ಹೊರಹಾಕಿದ ಸಿದ್ದರಾಮಯ್ಯ! - ಸಿದ್ದರಾಮಯ್ಯ
ಬಡವರು, ದಲಿತರ ಪರ ನಾನು ಧ್ವನಿ ಎತ್ತುತ್ತೇನೆ. ನಾನು ಧ್ವನಿ ಎತ್ತುವುದಕ್ಕೇ ಟಾರ್ಗೆಟ್ ಆಗ್ತಿದ್ದೇನೆ ಎಂದು ಪ್ರಸಕ್ತ ರಾಜಕಾರಣದ ಬಗ್ಗೆ ಟ್ವೀಟ್ ಮೂಲಕ ಪರೋಕ್ಷವಾಗಿ ನೋವು ತೋಡಿಕೊಂಡಿದ್ದಾರೆ ಎನ್ನಲಾಗುತ್ತಿದೆ.
ಸಿದ್ದರಾಮಯ್ಯ
ಬಡವರು, ಶೋಷಿತರು ಮತ್ತು ದಮನಿತರ ಪರ ಕೆಲಸ ಮಾಡಿದರೆ ಕಷ್ಟ, ಅಂತವರನ್ನು ವರ್ತಮಾನ ಕ್ರೂರವಾಗಿ ನಡೆಸಿಕೊಳ್ಳುತ್ತದೆ. ಆದರೆ ಇತಿಹಾಸ ಮಾತ್ರ ನೆನಪಿನಲ್ಲಿಟ್ಟುಕೊಳ್ಳುತ್ತೆ ಎನ್ನುವ ಮಾತು ಅರಸು ವಿಷಯದಲ್ಲಿ ನಿಜ ಅಲ್ಲ, ಅದೊಂದು ಸಾರ್ವಕಾಲಿಕ ಸತ್ಯ ಎನ್ನುವುದು ಮತ್ತೆ ಮತ್ತೆ ಅನುಭವಕ್ಕೆ ಬರುತ್ತಿದೆ ಎಂದು ಹೇಳಿಕೊಂಡಿದ್ದಾರೆ.
ಬಡವರು, ದಲಿತರ ಪರ ನಾನು ಧ್ವನಿ ಎತ್ತುತ್ತೇನೆ. ನಾನು ಧ್ವನಿ ಎತ್ತುವುದಕ್ಕೇ ಟಾರ್ಗೆಟ್ ಆಗ್ತಿದ್ದೇನೆ ಎಂದು ಪ್ರಸಕ್ತ ರಾಜಕಾರಣದ ಬಗ್ಗೆ ನೋವು ತೋಡಿಕೊಂಡಿದ್ದಾರೆ ಎನ್ನಲಾಗುತ್ತಿದೆ.