ಬೆಂಗಳೂರು: ಬನ್ನೇರುಘಟ್ಟ ರಸ್ತೆಯ ಹುಳಿಮಾವಿನಲ್ಲಿರುವ ಮಾತಾ ಶ್ರೀ ವೈಷ್ಣೋದೇವಿ ದೇವಸ್ಥಾನದಲ್ಲಿ 19ನೇ ಶ್ರೀ ವೈಷ್ಣೋಮಾ ಮಹೋತ್ಸವ ಶನಿವಾರ ಆರಂಭವಾಯಿತು. ದೇವಸ್ಥಾನದ ರಥೋತ್ಸವಕ್ಕೆ ವಿಜಯನಗರದ ಶಾಸಕ ಎಂ ಕೃಷ್ಣಪ್ಪ, ಸುಬ್ರಮಣ್ಯ ಶರ್ಮ ಸ್ವಾಮೀಜಿ, ದೇವಸ್ಥಾನದ ಟ್ರಸ್ಟಿ ರಾಕೇಶ್ ದುಗ್ಗಲ್, ಪೂಜ ದುಗ್ಗಲ್ ಚಾಲನೆ ನೀಡಿದರು. ಈ ವೇಳೆ ಉತ್ಸವ ಮೂರ್ತಿಯ ಜೊತೆಯಲ್ಲಿ ಸಹಸ್ರಾರು ಮಹಿಳೆಯರು ಕಳಸ ಹೊತ್ತು ಪ್ರಮುಖ ರಾಜಬೀದಿಯಲ್ಲಿ ಸಾಗಿದರು.
ಬಳಿಕ ಮಾತನಾಡಿದ ದೇವಸ್ಥಾನದ ಟ್ರಸ್ಟಿ ರಾಕೇಶ್ ದುಗ್ಗಲ್, ವೈಷ್ಣೋದೇವಿ ದೇವಸ್ಥಾನ ಕತ್ರಾದ ತ್ರಿಕುಟ ಬೆಟ್ಟದ 1700 ಮೀಟರ್ ಎತ್ತರದಲ್ಲಿ ನೆಲೆಗೊಂಡಿದೆ. ಅಲ್ಲಿಗೆ ವಯಸ್ಸಾದವರಿಗೆ, ಮಕ್ಕಳಿಗೆ ಹೋಗಲು ಸ್ವಲ್ಪ ಕಷ್ಟ. ಹಾಗಾಗಿ ಅಲ್ಲಿ ಹೋಗಲು ಸಾಧ್ಯವಾಗದೇ ಇರುವವರಿಗೆ ಬೆಂಗಳೂರಿನಲ್ಲಿ ಮೂಲ ಮಾದರಿಯ ವೈಷ್ಣೋದೇವಿಯ ಮೂರ್ತಿ ಸ್ಥಾಪಿಸಲಾಗಿದೆ. ಇದು ರಾಜ್ಯದಲ್ಲಿಯೇ ಮೊದಲ ದೇವಸ್ಥಾನ ಎಂದು ಹೇಳಿದರು.