ಬೆಂಗಳೂರು: ಮೈತ್ರಿ ಸರ್ಕಾರದಲ್ಲಿ ರಾಜೀನಾಮೆ ಪರ್ವ ಜೋರಾಗಿದ್ದು, ಅದಕ್ಕೆ ಪ್ರತಿಯಾಗಿ ಕಾಂಗ್ರೆಸ್ ಮತ್ತು ಜೆಡಿಎಸ್ನ ಎಲ್ಲಾ ಸಚಿವರು ರಾಜೀನಾಮೆ ನೀಡುವ ಮೂಲಕ ಮತ್ತೆ ಸಚಿವ ಸಂಪುಟ ರಚನೆ ಮಾಡಲು ನಿರ್ಧರಿಸಲಾಗಿದೆ.
ಮುಂಬೈಗೆ ಹೊರಟಿದ್ದ ಶಂಕರ್ ಮನವೊಲಿಸುವಲ್ಲಿ ಡಿಕೆಶಿ ವಿಫಲ ಯತ್ನ
ಮುಂಬೈಗೆ ಹೊರಟ ಶಾಸಕ ಶಂಕರ್ ಮನವೊಲಿಸಲು ಸಚಿವ ಡಿ.ಕೆ.ಶಿವಕುಮಾರ್ ಕೂಡ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ತೆರಳಿದ್ದು, ಅವರನ್ನು ಓಲೈಸುವ ಪ್ರಯತ್ನ ವಿಫಲವಾಗಿದೆ.
ಒಂದು ಕಡೆ ಸಿಎಂ ಕುಮಾರಸ್ವಾಮಿ ಜೆಡಿಎಸ್ ಶಾಸಕರನ್ನು ಹೊರಗೆ ಕಳುಹಿಸದೇ ಕೊಡಗಿನಲ್ಲಿರುವ ರೆಸಾರ್ಟ್ಗೆ ಕಳುಹಿಸಲು ಮುಂದಾದ್ರೆ, ಕಾಂಗ್ರೆಸ್ ಕೂಡ ತನ್ನ ಶಾಸಕರನ್ನು ರೆಸಾರ್ಟ್ನಲ್ಲಿಡಲು ಪ್ಲಾನ್ ಮಾಡಿದೆ. ಇದರ ನಡುವೆ ರಾಜೀನಾಮೆ ಕೊಟ್ಟು ಮುಂಬೈಗೆ ಹೊರಡಲು ಬಂದ ಶಂಕರ್ ಅವರನ್ನು ಮನವೊಲಿಸಲು ಸಚಿವ ಡಿ.ಕೆ.ಶಿವಕುಮಾರ್ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದವರೆಗೂ ಬಂದರೂ ಯಾವುದೇ ಪ್ರಯೋಜನವಾಗಲಿಲ್ಲ.
ಅಲ್ಲದೇ ಶಂಕರ್ರನ್ನು ಮುಂಬೈ ವಿಮಾನಕ್ಕೆ ಹತ್ತಿಸಲು ಯಡಿಯೂರಪ್ಪನವರ ಪಿಎ ಸಂತೋಷ್ ಆಗಮಿಸಿದ್ದು, ಭಾರಿ ಕುತೂಹಲ ಸೃಷ್ಟಿಸಿದೆ. ಇನ್ನು ಸಂತೋಷ್ ಮಾಧ್ಯಮಗಳನ್ನು ಕಂಡು ಓಡಿ ಹೋಗಿ ಕಾರು ಹತ್ತಿ ಹೊರಟೇ ಹೋದರು ಎನ್ನಲಾಗಿದೆ. ಇನ್ನು ಡಿ.ಕೆ.ಶಿವಕುಮಾರ್ ಕೂಡ ನವದೆಹಲಿಯತ್ತ ಪ್ರಯಾಣ ಬೆಳೆಸಿದ್ದು ಸಾಕಷ್ಟು ಕುತೂಹಲ ಮೂಡಿಸಿದೆ.