ಬೆಂಗಳೂರು: ಚಿಕುನ್ ಗುನ್ಯಾ ಚಿಕಿತ್ಸೆಗೆಂದು ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿಯಲ್ಲಿ ಕೊರೊನಾ ಸೋಂಕು ದೃಢ ಪಟ್ಟಿದ್ದು, ಆಸ್ಪತ್ರೆಯನ್ನು ಸೀಲ್ಡೌನ್ ಮಾಡಲಾಗಿದೆ.
ಚಿಕುನ್ ಗುನ್ಯಾ ಚಿಕಿತ್ಸೆಗೆ ಬಂದ ವ್ಯಕ್ತಿಯಲ್ಲಿ ಕೊರೊನಾ ಪಾಸಿಟಿವ್ - Mangal Nursing Home in Yeshwanthpur
ಯಶವಂತಪುರದಲ್ಲಿ 2 ನೇ ಕೋವಿಡ್ ಪ್ರಕರಣ ದೃಢಪಟ್ಟಿದ್ದು, ಚಿಕುನ್ ಗುನ್ಯಾ ಚಿಕಿತ್ಸೆಗೆಂದು ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿಯಲ್ಲಿ ಕೊರೊನಾ ವೈರಸ್ ಕಂಡುಬಂದಿದೆ.
ಯಶವಂತಪುರದ ಮಂಗಲ್ಸ್ ನರ್ಸಿಂಗ್ ಹೋಮ್ನಲ್ಲಿ ವ್ಯಕ್ತಿ ಚಿಕುನ್ ಗುನ್ಯಾ ಚಿಕಿತ್ಸೆಗೆಂದು ಬಂದಿದ್ದರು. ಮೂರು ದಿನ ಅಡ್ಮಿಟ್ ಆಗಿ ಚಿಕಿತ್ಸೆ ಪಡೆದಿದ್ದರು. ನಿನ್ನೆ ಡಿಸ್ಚಾರ್ಜ್ ಕೂಡಾ ಆಗಿದ್ದರು. ಆದರೆ ಈ ವೇಳೆ ಕೊರೊನಾ ಪರೀಕ್ಷೆ ನಡೆಸಿದಾಗ ವ್ಯಕ್ತಿಯ ವರದಿ ಪಾಸಿಟಿವ್ ಬಂದಿದೆ.
ಈ ಹಿನ್ನಲೆ ಆಸ್ಪತ್ರೆಯ ಎಲ್ಲರನ್ನೂ ಪ್ರಥಮ ಸಂಪರ್ಕಿತರೆಂದು ಗುರುತಿಸಿ ಹೋಟೆಲ್ ಕ್ವಾರಂಟೈನ್ ಮಾಡಲಾಗಿದೆ. ಆಸ್ಪತ್ರೆಯಿಂದ ಇತರೆ ರೋಗಿಗಳನ್ನೂ ಸ್ಥಳಾಂತರ ಮಾಡಲಾಗಿದೆ. ವ್ಯಕ್ತಿಯ ಟ್ರಾವೆಲ್ ಹಿಸ್ಟರಿ ನೋಡಿದಾಗ ಬೆಂಗಾಲದಿಂದ ಬಂದಿರುವುದು ತಿಳಿದುಬಂದಿದೆ. ಯಶವಂತಪುರದಲ್ಲಿ ಎರಡನೇ ಕೊರೊನಾ ಪ್ರಕರಣ ಇದಾಗಿದೆ.