ಕರ್ನಾಟಕ

karnataka

By

Published : Feb 13, 2021, 4:59 PM IST

ETV Bharat / state

ಆರೋಗ್ಯ ವೃದ್ಧಿಗೆ ದಾಳಿಂಬೆ ರಾಮಬಾಣ: ಹೊಸ ಉತ್ಪನ್ನ ಹೊರತಂದ ವಿಜ್ಞಾನಿಗಳು

ದಾಳಿಂಬೆ ಬೀಜಗಳಿಂದ ತಯಾರಿಸಿದ ಎಣ್ಣೆಯ ಸೇವನೆಯಿಂದ ಕೊಬ್ಬಿನಾಂಶ ಕಡಿಮೆಯಾಗುತ್ತದೆ. ಕೂದಲು ಉದುರುವ ಸಮಸ್ಯೆ ಇರುವವರು ತಲೆಗೆ ಹಚ್ಚಿಕೊಳ್ಳಬಹುದು, ಹೃದಯ ಸಂಬಂಧಿ ಕಾಯಿಲೆಗಳಿರುವರಿಗೆ ಈ ಎಣ್ಣೆ ರಾಮಬಾಣವಾಗಿದೆ.

scientists-who-brought-out-the-new-product-from-pomegranate
ಹೊಸ ಉತ್ಪನ್ನ ಹೊರತಂದ ವಿಜ್ಞಾನಿಗಳು

ಬೆಂಗಳೂರು: ದಾಳಿಂಬೆ ಹಣ್ಣಿನ ಬೀಜ ಮತ್ತು ಸಿಪ್ಪೆಯಿಂದ ಎಣ್ಣೆ, ಬಿಸ್ಕತ್, ಮುಖ ಶುಭ್ರಗೊಳಿಸುವ ಪೌಡರ್, ಮೌತ್ ಫ್ರೆಶ್​​​​ನರ್​​ ಸೇರಿದಂತೆ ಆರೋಗ್ಯಕ್ಕೆ ನೆರವಾಗುವಂಥ ಉತ್ಪನ್ನಗಳನ್ನು ಸೊಲ್ಲಾಪುರದ ರಾಷ್ಟ್ರೀಯ ದಾಳಿಂಬೆ ಸಂಶೋಧನಾ ಸಂಸ್ಥೆ (NRCP) ಅಭಿವೃದ್ಧಿಪಡಿಸಿದೆ.

ಹೆಸರಘಟ್ಟದ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ ಅವರಣದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ತೋಟಗಾರಿಕಾ ಮೇಳದ ಆಕರ್ಷಣೆಯಲ್ಲಿ ಸೊಲ್ಲಾಪುರದ ರಾಷ್ಟ್ರೀಯ ದಾಳಿಂಬೆ ಸಂಶೋಧನಾ ಸಂಸ್ಥೆ ಅಭಿವೃದ್ಧಿ ಪಡಿಸಿದ ದಾಳಿಂಬೆ ಹಣ್ಣಿನಿಂದ ಮಾಡಿದ ಉತ್ಪನ್ನಗಳು ಜನರ ಗಮನ ಸೆಳೆದವು.

ಆರೋಗ್ಯ ವೃದ್ಧಿಗೆ ದಾಳಿಂಬೆ ರಾಮಬಾಣ: ಹೊಸ ಉತ್ಪನ್ನ ಹೊರತಂದ ವಿಜ್ಞಾನಿಗಳು

ಸಾಮಾನ್ಯವಾಗಿ ದಾಳಿಂಬೆ ಹಣ್ಣನ್ನು ತಿಂದ ಮೇಲೆ ಸಿಪ್ಪೆಯನ್ನು ಕಸಕ್ಕೆ ಎಸೆಯುತ್ತೇವೆ. ಮಾರುಕಟ್ಟೆಯಲ್ಲಿ ಆಕರ್ಷಕವಾಗಿ ಕಾಣುವ ದೊಡ್ಡ ಗಾತ್ರದ ಮತ್ತು ಬಣ್ಣದಿಂದ ಕೂಡಿರುವ ದಾಳಿಂಬೆ ಹಣ್ಣುಗಳು ಗ್ರಾಹಕರನ್ನು ಸೆಳೆಯುತ್ತವೆ. ಉಳಿದ ದಾಳಿಂಬೆ ಹಣ್ಣುಗಳಿಗೆ ಮಾರುಕಟ್ಟೆ ಇರುವುದಿಲ್ಲ, ಇಂತಹ ದಾಳಿಂಬೆ ಹಣ್ಣುಗಳಿಂದ ಮೌಲ್ಯವರ್ಧಿತ ಉತ್ಪನ್ನಗಳನ್ನು ತಯಾರಿಸುವ ಬಗ್ಗೆ ಸೊಲ್ಲಾಪುರದ ರಾಷ್ಟ್ರೀಯ ದಾಳಿಂಬೆ ಸಂಶೋಧನಾ ಸಂಸ್ಥೆ ಸಂಶೋಧನೆ ನಡೆಸಿದ್ದು, ಅದರ ಫಲವಾಗಿ ದಾಳಿಂಬೆ ಬೀಜದಿಂದ ಎಣ್ಣೆ, ಬಿಸ್ಕತ್, ದಾಳಿಂಬೆ ವೈನ್, ದಾಳಿಂಬೆ ಜ್ಯೂಸ್ ತಯಾರಿಸಲಾಗಿದೆ. ದಾಳಿಂಬೆ ಸಿಪ್ಪೆಯಿಂದ ಸೌಂದರ್ಯವರ್ಧಕ ಮತ್ತು ಆರೋಗ್ಯವರ್ಧಕ ಉತ್ಪನ್ನಗಳನ್ನ ಮಾಡಲಾಗಿದೆ.

ದಾಳಿಂಬೆ ಬೀಜಗಳಿಂದ ತಯಾರಿಸಿದ ಎಣ್ಣೆಯ ಸೇವನೆಯಿಂದ ಕೊಬ್ಬಿನಾಂಶ ಕಡಿಮೆಯಾಗುತ್ತದೆ. ಕೂದಲು ಉದುರುವ ಸಮಸ್ಯೆ ಇರುವವರು ತಲೆಗೆ ಹಚ್ಚಿಕೊಳ್ಳಬಹುದು, ಹೃದಯ ಸಂಬಂಧಿ ಕಾಯಿಲೆಗಳಿರುವವರಿಗೆ ಈ ಎಣ್ಣೆ ರಾಮಬಾಣವಾಗಿದೆ.

10 ಎಣ್ಣೆ ಮಾತ್ರೆಗಳಿರುವ ಶೀಟ್ 30 ರೂಪಾಯಿ ನಿಗದಿ ಮಾಡಲಾಗಿದೆ. ದಾಳಿಂಬೆ ಬೀಜದಿಂದ ಮಾಡಿರುವ ಬಿಸ್ಕತ್ ನಲ್ಲಿ ನಾರಿನಾಂಶ ಹೆಚ್ಚು ಇರುವುದರಿಂದ ಜೀರ್ಣಕ್ರಿಯೆ ಸುಗಮವಾಗಲಿದೆ, ದಾಳಿಂಬೆ ಸಿಪ್ಪೆಯಿಂದ ಮಾಡಿದ ಪೌಡರ್ ಸೇವನೆಯಿಂದ ಕರುಳಿನ ಸಮಸ್ಯೆ ನಿವಾರಣೆಯಾಗಲಿದೆ, ಸಿಪ್ಪೆಯಿಂದ ಮಾಡಿದ ಪೌಡರ್​ನಿಂದ ಸೌಂದರ್ಯವರ್ಧಕಗಳ ತಯಾರಿಕೆ ಮಾಡಲಾಗುತ್ತಿದೆ.

ಬಾಯಿಯ ದುರ್ವಾಸನೆ ಹೋಗಲಾಡಿಸಲು ಮೌತ್ ಫ್ರೆಶನರ್ ಅನ್ನು ಕೂಡ ಬೀಜದಿಂದ ತಯಾರಿಸಲಾಗಿದೆ. ದಾಳಿಂಬೆ ಎಣ್ಣೆಗೆ ಭಾರೀ ಬೇಡಿಕೆ ಇದ್ದು ಒಂದು ಲೀಟರ್ ದಾಳಿಂಬೆ ಎಣ್ಣೆ ತೆಗೆಯಲು 6 ಕೆಜಿ ದಾಳಿಂಬೆ ಹಣ್ಣು ಬೇಕಿದ್ದು, ಇದರಿಂದ ಒಂದು ಲೀಟರ್ ದಾಳಿಂಬೆ ಎಣ್ಣೆಯ ಬೆಲೆ 5,200 ರೂಪಾಯಿ ಆಗುತ್ತದೆ. ದಾಳಿಂಬೆ ಎಣ್ಣೆ ಹಾಗೂ ಮಾತ್ರೆಗೆ ಇತ್ತೀಚೆಗಷ್ಟೇ ಪೇಟೆಂಟ್ ಪಡೆಯಲಾಗಿದೆ.

ಇದನ್ನೂ ಓದಿ:ಮೀಸಲಾತಿ ಹೋರಾಟಗಳಿಂದ ಕಂಗೆಟ್ಟ ಕೇಂದ್ರ.. ಸಂದಿಗ್ಧ ಸ್ಥಿತಿಗೆ ಸಿಲುಕಿಸದಂತೆ ರಾಜ್ಯ ಸರ್ಕಾರಕ್ಕೆ ತಾಕೀತು!?

ABOUT THE AUTHOR

...view details