ಬೆಂಗಳೂರು: ಸ್ಯಾಂಡಲ್ವುಡ್ಗೆ ಡ್ರಗ್ಸ್ ನಂಟು ಆರೋಪ ಪ್ರಕರಣದಡಿ ಸದ್ಯ ಜೈಲಿನಲ್ಲಿರುವ ನಟಿ ಸಂಜನಾ ಗಲ್ರಾನಿಗೆ ಇಂದು ಜೀವನದಲ್ಲೇ ಮರೆಯಲಾಗದ ದಿನವಾಗಿದೆ. ಇಂದು ನಟಿ ಸಂಜನಾ ಗಲ್ರಾನಿ ಅವರ ಹುಟ್ಟುಹಬ್ಬವಾಗಿದ್ದು, ಈ ದಿನವನ್ನು ಪರಪ್ಪನ ಅಗ್ರಹಾರ ಜೈಲಿನಲ್ಲಿಯೇ ಕಳೆಯುವ ಪರಿಸ್ಥಿತಿ ನಿರ್ಮಾಣವಾಗಿದೆ.
ಸಂಜನಾ ಗಲ್ರಾನಿ ಹುಟ್ಟುಹಬ್ಬ... ಜೈಲಲ್ಲಿ ಸಿಬ್ಬಂದಿ ಜೊತೆ ಅಳಲು ತೋಡಿಕೊಂಡ ನಟಿ - bangalore latest news
ಇಂದು ನಟಿ ಸಂಜನಾ ಗಲ್ರಾನಿ ಅವರ ಹುಟ್ಟುಹಬ್ಬವಾಗಿದ್ದು, ಈ ದಿನವನ್ನು ಪರಪ್ಪನ ಅಗ್ರಹಾರ ಜೈಲಿನಲ್ಲಿಯೇ ಕಳೆಯುವ ಪರಿಸ್ಥಿತಿ ನಿರ್ಮಾಣವಾಗಿದೆ. ತಮ್ಮ ಹಳೆಯ ದಿನಗಳನ್ನು ನೆನಪು ಮಾಡಿಕೊಂಡು ಜೈಲಿನ ಸಿಬ್ಬಂದಿ ಜೊತೆ ಅಳಲು ತೋಡಿಕೊಂಡಿದ್ದಾರೆ.
ಈವರೆಗೆ ಸಂಜನಾ ಮನೆಯಲ್ಲಿ ಮತ್ತು ಅಭಿಮಾನಿಗಳ ಜೊತೆ ಹೊರಗಡೆ ಹೈಫೈ ಪಾರ್ಟಿ ಆಯೋಜಿಸಿ ಸಂಭ್ರಮಾಚರಣೆ ಮಾಡುತ್ತಿದ್ದರು. ಆದ್ರೆ ಈ ಬಾರಿ ಜೈಲಿನಲ್ಲಿರುವ ಕಾರಣ ಜೈಲು ನಿಯಮಗಳನ್ನು ಪಾಲಿಸುತ್ತಾ ಸಮಯ ಕಳೆಯಬೇಕಾಗಿದೆ. ಜೈಲಿನ ನಿಯಮಗಳ ಪ್ರಕಾರ ಹುಟ್ಟುಹಬ್ಬ ಆಚರಣೆ ಮಾಡುವ ಆಗಿಲ್ಲ. ಅಭಿನಂದನೆಗಳ ಸುರಿಮಳೆ ಇಲ್ಲ, ಹೊಸ ಉಡುಪು ಇಲ್ಲ. ಜೈಲು ಸೇರುವಾಗ ಪೋಷಕರು ಕೊಟ್ಟ ಉಡುಗೆಗಳನ್ನೇ ಧರಿಸುವ ಸ್ಥಿತಿ ನಿರ್ಮಾಣವಾಗಿದೆ.
ಸಂಜನಾ ಹುಟ್ಟುಹಬ್ಬದ ಎರಡು ದಿನ ಮೊದಲೇ ನನ್ನ ಬರ್ತ್ ಡೇ ಇದೆ ಎಂದು ಸಾಮಾಜಿಕ ಜಾಲತಾಣದಲ್ಲಿ ತಿಳಿಸುತ್ತಿದ್ದರು. ಉದ್ಯಮಿಗಳು, ರಾಜಕಾರಣಿಗಳ ಮಕ್ಕಳು , ಸಿನಿ ನಟ-ನಟಿಯರು, ಫ್ರೆಂಡ್ಸ್ ಹೀಗೆ ಹೆಚ್ಚಿನವರು ವಿಶ್ ಮಾಡುತ್ತಿದ್ದರು. ಸದ್ಯ ಇದನ್ನು ನೆನಪು ಮಾಡಿಕೊಂಡು ಜೈಲಿನ ಸಿಬ್ಬಂದಿ ಜೊತೆ ಅಳಲು ತೋಡಿಕೊಂಡಿದ್ದಾರೆ.