ಬೆಂಗಳೂರು:ಸ್ಯಾಂಡಲ್ವುಡ್ಗೆ ಡ್ರಗ್ಸ್ ನಂಟು ಆರೋಪ ಪ್ರಕರಣ ಬೆನ್ನತ್ತಿರುವ ಐಎಸ್ಡಿ ಕಿರುತೆರೆ ನಟ-ನಟಿಯರಿಗೆ ನೋಟಿಸ್ ನೀಡಿ ಇಂದು ಕೂಡ ವಿಚಾರಣೆ ನಡೆಸಲು ನಿರ್ಧರಿಸಿದೆ.
ಎನ್ಸಿಬಿ ಅಧಿಕಾರಿಗಳು ಬಂಧಿಸಿದ್ದ ಅನಿಕಾ ಹೇಳಿಕೆ ಮೇರೆಗೆ ಸ್ಯಾಂಡಲ್ವುಡ್ ಡ್ರಗ್ಸ್ ಜಾಲದ ವಿಚಾರ ಬೆಳಕಿಗೆ ಬಂದಿತ್ತು. ಇದರ ಬೆನ್ನತ್ತಿದ್ದ ಸಿಸಿಬಿ ಸ್ಟಾರ್ ನಟಿಯರಿಬ್ಬರು ಸೇರಿದಂತೆ ಹಲವು ಡ್ರಗ್ಸ್ ಪೆಡ್ಲರ್ಗಳನ್ನು ಬಂಧಿಸಿ ವಿಚಾರಣೆ ನಡೆಸುತ್ತಿದೆ. ಇನ್ನೊಂದೆಡೆ ಡ್ರಗ್ಸ್ ವಿರುದ್ಧ ಸಮರ ಸಾರಿರುವ ಐಎಸ್ಡಿ ಕೂಡ ಎಡಿಜಿಪಿ ಭಾಸ್ಕರ್ ರಾವ್ ನೇತೃತ್ವದಲ್ಲಿ ಕಾರ್ಯಾಚರಣೆಗಿಳಿದಿದೆ.
ನಟ ಲೂಸ್ ಮಾದ, ಮಾಜಿ ಕ್ರಿಕೆಟಿಗ ಎನ್.ಸಿ.ಅಯ್ಯಪ್ಪ, ನಟಿ ರಶ್ಮಿತಾ ಚಂಗಪ್ಪ, ಖಾಸಗಿ ವಾಹಿನಿ ಅಸೋಸಿಯೇಟ್ ಪ್ರೊಡ್ಯೂಸರ್ ನಿಶ್ಚಿತಾ ಶರತ್ ಬಳಿಕ ಬ್ರಹ್ಮಗಂಟು ಸೀರಿಯಲ್ ಖ್ಯಾತಿಯ ನಟಿ ಗೀತಾ ಭಾರತಿ ಭಟ್ ಹಾಗೂ ಗಟ್ಟಿಮೇಳ ಖ್ಯಾತಿಯ ಅಭಿಶೇಕ್ ದಾಸ್ ಅವರ ದೀರ್ಘ ವಿಚಾರಣೆ ನಡೆಸಿ ಇವರ ಹೇಳಿಕೆಯಾಧಾರದ ಮೇರೆಗೆ ಇಂದು ಹಲವು ಮಂದಿಯನ್ನು ವಿಚಾರಣೆಗೆ ಒಳಪಡಿಸಲಿದ್ದಾರೆ.
ಸದ್ಯ ಐಎಸ್ಡಿ ಕೇರಳದ ಮೂಲದ ಡ್ರಗ್ಸ್ ಪೆಡ್ಲರ್ಗಳಾದ ಡ್ಯಾನಿಯಲ್, ಗೋಕುಲ್ ಕೃಷ್ಣನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದೆ. ಈ ಇಬ್ಬರು ಪೆಡ್ಲರ್ಗಳು ವಿಚಾರಣೆ ವೇಳೆ ಕೆಲ ಮಾಹಿತಿ ಬಾಯಿ ಬಿಟ್ಟಿದ್ದಾರೆ. ಮಾದಕ ವಸ್ತುಗಳನ್ನು ಕೇರಳದಿಂದ ಕನ್ನಡದ ನಟ, ನಟಿಯರು ಸೇರಿದಂತೆ ಹಲವು ಕಿರುತೆರೆ ನಟ-ನಟಿಯರಿಗೆ ಪೂರೈಕೆ ಮಾಡುತ್ತಿದ್ದದ್ದಾಗಿ ತಪ್ಪೊಪ್ಪಿಕೊಂಡಿದ್ದಾರೆ ಎನ್ನಲಾಗಿದೆ.
ಈ ಹಿನ್ನೆಲೆಯಲ್ಲಿ ಹಲವರನ್ನು ವಿಚಾರಣೆ ನಡೆಸಿ ಇವರ ಹೇಳಿಕೆಯಾಧಾರದ ಮೇಲೆ ಮತ್ತಷ್ಟು ಮಂದಿಯನ್ನು ಇಂದು ವಿಚಾರಣೆಗೆ ಒಳಪಡಲಿದ್ದಾರೆ.