ಕರ್ನಾಟಕ

karnataka

ETV Bharat / state

ಕನ್ನಡ ಸಾಹಿತ್ಯ ಪರಿಷತ್ತಿನ ಆಡಳಿತಾಧಿಕಾರಿಯಾಗಿ ಎಸ್. ರಂಗಪ್ಪ ನೇಮಕ

ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯದ ನಿರ್ದೇಶಕರಾದ ಎಸ್. ರಂಗಪ್ಪ ಅವರನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಆಡಳಿತಾಧಿಕಾರಿಯಾಗಿ ನೇಮಕ ಮಾಡಲಾಗಿದೆ.

rangappa
rangappa

By

Published : Sep 4, 2021, 1:02 AM IST

Updated : Sep 4, 2021, 1:50 AM IST

ಬೆಂಗಳೂರು :ಕನ್ನಡ ಸಾಹಿತ್ಯ ಪರಿಷತ್ತಿಗೆ ನೂತನ ಆಡಳಿತಾಧಿಕಾರಿಯಾಗಿ ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ನಿರ್ದೇಶಕ ಎಸ್. ರಂಗಪ್ಪ ನೇಮಕಗೊಂಡಿದ್ದಾರೆ. ಮನು ಬಳಿಗಾರ್ ಅವರು ಕನ್ನಡ ಸಾಹಿತ್ಯ ಪರಿಷತ್​ನಲ್ಲಿ ಅಧಿಕಾರ ಹಸ್ತಾಂತರಿಸಿದರು.

ದಿನಾಂಕ 03-09-2021 ರಿಂದ ಜಾರಿ ಬರುವಂತೆ ಮುಂದಿನ ಆದೇಶದವರೆಗೆ ಅವರನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಆಡಳಿತಾಧಿಕಾರಿಯಾಗಿ ನೇಮಕ ಮಾಡಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಾರ್ಯದರ್ಶಿಗಳು ಅದೇಶಿಸಿದ್ದಾರೆ.

ಇದನ್ನೂ ಓದಿರಿ: ಸರ್ಕಾರದಿಂದ ಜಂಗಲ್‌ ರೆಸಾರ್ಟ್​​ಗಳ ಖಾಸಗೀಕರಣಕ್ಕೆ ಚಿಂತನೆ; ಆನಂದ್ ಸಿಂಗ್ ಸಮರ್ಥನೆ ಹೀಗಿದೆ

ಕಳೆದ ಐದೂವರೆ ವರ್ಷಗಳ‌ ಕಾಲ ಡಾ. ಮನು ಬಳಿಗಾರ್ ಅವರು ಪರಿಷತ್​ನ‌ ಆಡಳಿತ ನಡೆಸಿದ್ದರು. ಈ ಹಿಂದೆಯೇ ಪರಿಷತ್ ಚುನಾವಣೆ ನಡೆಯಬೇಕಿತ್ತು. ಆದರೆ, ಕೊರೊನಾ‌ ಸೇರಿದಂತೆ ಹಲವು ಕಾರಣಗಳಿಂದ ಪರಿಷತ್ ಚುನಾವಣೆ ಮುಂದೂಡಲ್ಪಟ್ಟಿದೆ. ಚುನಾವಣೆ ನಡೆದು ನೂತನ ಅಧ್ಯಕ್ಷರ ಆಗಮನದವರೆಗೆ ಎಸ್.ರಂಗಪ್ಪ ಅವರು ಪರಿಷತ್ ಆಡಳಿತಾಧಿಕಾರಿಯಾಗಿ ಕಾರ್ಯನಿರ್ವಹಿಸಲಿದ್ದಾರೆ. ನಿರ್ಗಮಿತ ಅಧ್ಯಕ್ಷ ಡಾ. ಮನು ಬಳಿಗಾರ್ ಅವರು ರಂಗಪ್ಪ ಅವರಿಗೆ ಶುಭ ಹಾರೈಸಿದ್ದಾರೆ.

Last Updated : Sep 4, 2021, 1:50 AM IST

ABOUT THE AUTHOR

...view details