ಕರ್ನಾಟಕ

karnataka

ETV Bharat / state

ಆರ್​​ಎಸ್​ಎಸ್​​​ಗೂ ತಟ್ಟಿದ ಕೊರೊನಾ ಬಿಸಿ... ಸಂಘದ ವಾರ್ಷಿಕ ಸಭೆ ರದ್ದು - RSS annual meet cancel

ಕೊರೊನಾ ವೈರಸ್​ ಎಲ್ಲೆಡೆ ಭಯ ಹುಟ್ಟುಹಾಕಿದೆ. ಬೆಂಗಳೂರಿನಲ್ಲಿ ನಾಳೆ ನಡೆಯಬೇಕಿದ್ದ ಆರ್​ಎಸ್​ಎಸ್​ನ ಅತ್ಯುನ್ನತ ನಿರ್ಧಾರಕ ಸಮಿತಿ ಸಭೆಯನ್ನು ರದ್ದುಗೊಳಿಸಲಾಗಿದೆ.

RSS annual meet in Bengaluru cancelled over coronavirus scare
ಆರ್​​ಎಸ್​ಎಸ್​​​ಗೂ ತಟ್ಟಿದ ಕೊರೊನಾ ಬಿಸಿ

By

Published : Mar 14, 2020, 11:13 AM IST

ಬೆಂಗಳೂರು:ಆರ್​​ಎಸ್​ಎಸ್​​ನ ಅಖಿಲ ಭಾರತೀಯ ಪ್ರತಿನಿಧಿ ಸಭಾ ( ಎಬಿಪಿಎಸ್​​)ದ ಸಭೆಯನ್ನ ಕೊರೊನಾ ಭೀತಿ ಹಿನ್ನೆಲೆಯಲ್ಲಿ ರದ್ದು ಮಾಡಲಾಗಿದೆ.

ಬೆಂಗಳೂರಿನಲ್ಲಿ ನಾಳೆ ( ಭಾನುವಾರ) ಆರಂಭವಾಗಬೇಕಿದ್ದ ಸಭೆಯನ್ನ ಆರ್​ಎಸ್​ಎಸ್​ನ ಅತ್ಯುನ್ನತ ನಿರ್ಧಾರಕ ಸಮಿತಿ ಸಭೆ ರದ್ದು ಮಾಡುವ ನಿರ್ಧಾರ ಕೈಗೊಂಡಿದೆ. ಸುಮಾರು 1500 ಸ್ವಯಂ ಸೇವಕರು ಈ ಸಭೆಯಲ್ಲಿ ಭಾಗಿಯಾಗಬೇಕಿತ್ತು 15 - 17 ರವರೆಗೆ ಸಂಘದ ವಾರ್ಷಿಕ ಸಭೆ ಆಯೋಜಿಸಲಾಗಿತ್ತು. ಆದರೆ ದೇಶಾದ್ಯಂತ ಕೋವಿಡ್​ 19 ಹಾವಳಿ ಭೀಕರತೆ ಸೃಷ್ಟಿಸಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಆರ್​ಎಸ್​ಎಸ್​ ಸರಕಾರ್ಯವಾಹ್​ ಸುರೇಶ್​ ಜೋಶಿ ತಿಳಿಸಿದ್ದಾರೆ.

ಇದೇ ವೇಳೆ ಮಾತನಾಡಿರುವ ಅವರು ಕಾರ್ಯಕರ್ತರು ಕೋವಿಡ್​ ಜಾಗೃತಿ ಮೂಡಿಸಲು ಸರ್ಕಾರದೊಂದಿಗೆ ಕೈ ಜೋಡಿಸಲು ಕಾರ್ಯಕರ್ತರಿಗೆ ಇದೇ ವೇಳೆ ಕರೆ ನೀಡಿದ್ದಾರೆ.

ABOUT THE AUTHOR

...view details