ಕರ್ನಾಟಕ

karnataka

ETV Bharat / state

ಆರ್​ಆರ್​ ನಗರ ಉಪ ಕದನ: ಮುನಿರತ್ನ ಪರ ಇಂದು ಅಖಾಡಕ್ಕಿಳಿಯಲಿರುವ 'ದುರ್ಯೋಧನ'! - ಬಿಜೆಪಿ ಅಭ್ಯರ್ಥಿ ಪರ ದರ್ಶನ್​ ಪ್ರಚಾರ

ರಾಜರಾಜೇಶ್ವರಿ ನಗರದಲ್ಲಿಂದು ಸ್ಯಾಂಡಲ್​ವುಡ್​ನ ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಿಜೆಪಿ ಅಭ್ಯರ್ಥಿ ಪರ ರೋಡ್ ಶೋ ನಡೆಸಲಿದ್ದಾರೆ.

actor Darshan campaign for munirathna today
actor Darshan campaign for munirathna today

By

Published : Oct 30, 2020, 4:30 AM IST

ಬೆಂಗಳೂರು:ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಉಚುನಾವಣೆಯ ಪ್ರಚಾರ ಇದೀಗ ಮತ್ತಷ್ಟು ಬಿರುಸುಗೊಂಡಿದೆ. ಕಳೆದ ಎರಡು ದಿನಗಳ ಹಿಂದೆ ಬಿಜೆಪಿ ಪರ ನಟಿ ಖುಷ್ಬೂ ಪ್ರಚಾರ ನಡೆಸಿದ್ದು, ಇದರ ಬೆನ್ನಲ್ಲೇ ಇಂದು ನಟ ದರ್ಶನ್ ಪ್ರಚಾರದಲ್ಲಿ ಭಾಗಿಯಾಗಲಿದ್ದಾರೆ.

ಬೆಳಗ್ಗೆ 10 ಗಂಟೆಗೆ ಯಶವಂತಪುರ ರೈಲ್ವೆ ‌ನಿಲ್ದಾಣದ ಮುಂಭಾಗದಿಂದ ಅವರು ಮುನಿರತ್ನ ಪರ ಮತಯಾಚನೆ ಮಾಡಲಿದ್ದು, ವಿವಿಧ ಪ್ರದೇಶಗಳಲ್ಲಿ ರೋಡ್ ಶೋ ನಡೆಸಲಿದ್ದಾರೆ.

ಬೆಳಗ್ಗೆ ಯಶವಂತಪುರ ರೈಲ್ವೆ ನಿಲ್ದಾಣದ ಮುಂಭಾಗದಲ್ಲಿ ಆರಂಭಗೊಳ್ಳಲಿರುವ ರೋಡ್ ಶೋ ನಂತರ 11 ಗಂಟೆಗೆ ವಾರ್ಡ್ ನಂ.17 ಜೆ.ಪಿ.ಪಾರ್ಕ್ ಚೌಡೇಶ್ವರಿ ಬಸ್ ನಿಲ್ದಾಣದಿಂದ ಹೊರಟು ಜೆ.ಪಿ.ಪಾರ್ಕ್ ವಾರ್ಡ್ ವ್ಯಾಪ್ತಿಯಲ್ಲಿ ರೋಡ್ ಶೋ ಮೂಲಕ ಮತಯಾಚನೆ ಮಾಡಲಿದ್ದಾರೆ. ಮಧ್ಯಾಹ್ನ 1:15 ಗಂಟೆಗೆ ವಾರ್ಡ್ ನಂ.16 ಜಾಲಹಳ್ಳಿ ವಿಲೇಜ್ ಮೂಲಕವಾಗಿ, ಮಧ್ಯಾಹ್ನ 2 ಗಂಟೆಗೆ ವಾರ್ಡ್ ನಂ.38 ಹೆಚ್.ಎಂ.ಟಿ ಪೀಣ್ಯದಿಂದ‌ ಗೊರಗುಂಟೆಪಾಳ್ಯದಲ್ಲಿ ಪ್ರಚಾರ ನಡೆಸಲಿದ್ದು, ಸಂಜೆ 4 ಗಂಟೆಗೆ‌ ವಾರ್ಡ್ ನಂ.42 ಲಕ್ಷ್ಮಿದೇವಿನಗರದ ಕೂಲಿನಗರ ಸೇತುವೆ ಮಾರ್ಗವಾಗಿ ಸಂಜೆ 5 ಗಂಟೆಗೆ ವಾರ್ಡ್ ನಂ.69 ಲಗ್ಗೆರೆ ಆಲದಮರ ಸರ್ಕಲ್ ಮೂಲಕ ಕೊಟ್ಟಿಗೆಪಾಳ್ಯ ಪೈಪ್ ಲೈನ್, ಸುಂಕದ ಕಟ್ಟೆಯಲ್ಲಿ ಪ್ರಚಾರ ನಡೆಸಲಿದ್ದಾರೆ.

ಇದಾದ ಬಳಿಕ ಸಂಜೆ 6 ಗಂಟೆಗೆ ವಾರ್ಡ್ ನಂ.73 ಕೊಟ್ಟಿಗೆಪಾಳ್ಯದ ಬಿಡಿಎ ಕಾಂಪ್ಲೆಕ್ಸ್, ರಾತ್ರಿ 8:15 ವಾರ್ಡ್ ನಂ.129 ಜ್ಞಾನಭಾರತಿಯ ಕೆಂಗುಂಟೆ, ಮಲ್ಲತ್ತಹಳ್ಳಿ, ರಾತ್ರಿ 9 ವರೆಗೆ ವಾರ್ಡ್ ನಂ.160 ರಾಜರಾಜೇಶ್ವರಿನಗರದ ಪ್ರವೇಶದ್ವಾರದ ಮೂಲಕ ರಾಜರಾಜೇಶ್ವರಿನಗರದ ಪ್ರಮುಖ‌ ರಸ್ತೆಗಳಲ್ಲಿ ದರ್ಶನ್ ಮತಯಾಚಿಸಲಿದ್ದಾರೆ.

ಸ್ಯಾಂಡಲ್​ವುಡ್​ನ ಕುರುಕ್ಷೇತ್ರ ಸಿನಿಮಾದಲ್ಲಿ ನಟಿಸಿದ್ದ ದರ್ಶನ್​ ಮುನಿರತ್ನ ಜೊತೆಗೆ ಉತ್ತಮ ಬಾಂಧವ್ಯ ಹೊಂದಿದ್ದು, ಇದೀಗ ಪ್ರಚಾರಕ್ಕೆ ಇಳಿದಿದ್ದಾರೆ. ನವೆಂಬರ್ 3ರಂದು ಆರ್. ಆರ್. ನಗರ ಉಪ ಚುನಾವಣೆ ನಡೆಯಲಿದ್ದು, ಬಹಿರಂಗ ಪ್ರಚಾರ ಭಾನುವಾರ ಅಂತ್ಯವಾಗಲಿದೆ.

ABOUT THE AUTHOR

...view details