ಕರ್ನಾಟಕ

karnataka

ETV Bharat / state

ಪೊಲೀಸರ ಸೋಗಿನಲ್ಲಿ ಚಿನ್ನದ ವ್ಯಾಪಾರಿಯ ದರೋಡೆ: ಬೆಂಗಳೂರಲ್ಲಿ ಮೂವರು ಆರೋಪಿಗಳ ಬಂಧನ - ದರೋಡೆ

ಪೊಲೀಸರ ಸಮವಸ್ತ್ರ ಧರಿಸಿ ಚಿನ್ನದ ವ್ಯಾಪಾರಿಯ ದರೋಡೆ- ಬ್ಯಾಟರಾಯನಪುರ ಠಾಣಾ ಪೊಲೀಸರಿಂದ ಮೂವರು ಆರೋಪಿಗಳ ಬಂಧನ- ಪ್ರಕರಣ ದಾಖಲು

Robbery case: three arrested
ಬಂಧಿತ ಆರೋಪಿಗಳು

By

Published : Feb 10, 2023, 1:34 PM IST

ಬೆಂಗಳೂರು: ಪೊಲೀಸರ ಸಮವಸ್ತ್ರ ಧರಿಸಿ ಚಿನ್ನದ ವ್ಯಾಪಾರಿಯಿಂದ 6 ಲಕ್ಷ ನಗದು ಹಾಗೂ ಚಿನ್ನದ ಬಿಸ್ಕತ್​ ದರೋಡೆ ಮಾಡಿದ್ದ ಮೂವರು ಆರೋಪಿಗಳನ್ನು ಬ್ಯಾಟರಾಯನಪುರ ಠಾಣಾ ಪೊಲೀಸರು ಬಂಧಿಸಿದ್ದಾರೆ. ನಾಗರಾಜ್, ಅರುಣ್ ಹಾಗೂ ಮಂಜು ಬಂಧಿತ ಆರೋಪಿಗಳು.

ಪೊಲೀಸರ ಸೋಗಿನಲ್ಲಿ ದರೋಡೆ:ಫೆ.7ರಂದು ತಮಿಳುನಾಡಿನ ಸುಂದರಂ ಎಂಬಾತ ತನ್ನ ಮಾಲೀಕನ ಸೂಚನೆಯಂತೆ ಶಿವಮೊಗ್ಗದಿಂದ 6 ಲಕ್ಷ ನಗದು ಹಾಗೂ ಚಿನ್ನದ ಬಿಸ್ಕತ್​ ಪಡೆದು ತಮಿಳುನಾಡಿಗೆ ಮರಳುತ್ತಿದ್ದರು. ಬೆಳಗಿನ ಜಾವ 5 ಗಂಟೆ ಸುಮಾರಿಗೆ ಮೈಸೂರು ರಸ್ತೆಯ ಸ್ಯಾಟಲೈಟ್ ಬಸ್ ನಿಲ್ದಾಣಕ್ಕೆ ಬಂದು ತಮಿಳುನಾಡಿನ ಬಸ್‌ನಲ್ಲಿ ಕುಳಿತಿದ್ದರು. ಅಷ್ಟರಲ್ಲಿ ಪೊಲೀಸರ ಸಮವಸ್ತ್ರ ಧರಿಸಿ ಬಸ್ ಹತ್ತಿದ್ದ ಆರೋಪಿಗಳು, ಸುಂದರಂ ಕೈನಲ್ಲಿದ್ದ ಬ್ಯಾಗ್ ಪಡೆದು ಪರಿಶೀಲಿಸಬೇಕು ಎಂದಿದ್ದರು. ಬಳಿಕ ತಮ್ಮ ಕಾರಿನಲ್ಲಿ ಸ್ವಲ್ಪ ದೂರದವರೆಗೆ ಕರೆದೊಯ್ದು ಬ್ಯಾಗಿನಲ್ಲಿದ್ದ ಚಿನ್ನದ ಬಿಸ್ಕತ್ ಹಾಗೂ 6 ಲಕ್ಷ ರೂ. ನಗದು ಕಿತ್ತುಕೊಂಡು ಪರಾರಿಯಾಗಿದ್ದರು. ಗಾಬರಿಗೊಂಡ ಸುಂದರಂ ತನ್ನ ಮಾಲೀಕನ ಸೂಚನೆ ಮೇರೆಗೆ ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.

ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡ ಬ್ಯಾಟರಾಯನಪುರ ಠಾಣಾ ಪೊಲೀಸರು ಆರೋಪಿಗಳನ್ನ ಬಂಧಿಸಿದ್ದಾರೆ. ಪ್ರಮುಖ ಆರೋಪಿ ನಾಗರಾಜ್ ಕೆಎಸ್‌ಆರ್‌ಟಿಸಿಯಲ್ಲಿ ಹೋಂ ಗಾರ್ಡ್ ಆಗಿದ್ದು, ಆತನಿಗೆ ಸಾಥ್ ನೀಡಿದ್ದ ಆಟೋ ಚಾಲಕರಾದ ಅರುಣ್ ಹಾಗೂ ಮಂಜು ಎಂಬಾತನನ್ನ ಸಹ ಬಂಧಿಸಲಾಗಿದೆ. ಬಂಧಿತರಿಂದ 1 ಚಿನ್ನದ ಬಿಸ್ಕತ್, 6 ಲಕ್ಷ ರೂ ನಗದು, ಆಟೋ ಹಾಗೂ ಕಾರನ್ನು ವಶಕ್ಕೆ ಪಡೆಯಲಾಗಿದೆ.

ಜಪ್ತಿ ಮಾಡಲಾದ ಹಣ

ವೃದ್ಧೆಯ ಕೈಕಾಲು ಕಟ್ಟಿ ದರೋಡೆ: ವೃದ್ಧೆಯ ಕೈಕಾಲು ಕಟ್ಟಿ ಮನೆಯಲ್ಲಿದ್ದ ಚಿನ್ನಾಭರಣ, ನಗದು ದೋಚಿ ಪರಾರಿಯಾಗಿದ್ದ ಪ್ರಕರಣವನ್ನು ಕುಮಾರಸ್ವಾಮಿ ಲೇಔಟ್​ ಪೊಲೀಸರು ಇತ್ತೀಚೆಗೆ ಭೇದಿಸುವಲ್ಲಿ ಯಶಸ್ವಿಯಾಗಿದ್ದರು. ಪ್ರಕರಣ ಸಂಬಂಧ ತಂದೆ ಮಗನ ಸಹಿತ ಆರು ಜನ ಆರೋಪಿಗಳನ್ನ ಕುಮಾರಸ್ವಾಮಿ ಲೇಔಟ್ ಠಾಣಾ ಪೊಲೀಸರು ಬಂಧಿಸಿದ್ದರು. ಗ್ಯಾನ್ ರಂಜನ್ ದಾಸ್, ಶ್ರೀಕಾಂತ್ ದಾಶ್, ಸುಭಾಷ್ ಬಿಸ್ವಾಲ್, ಪದ್ಮನಾಭ್ ಕತುವಾ, ಬಿಷ್ಣು ಚರಣ್ ಬೆಹ್ರಾ ಹಾಗೂ ಸುಧಾಂಶು ಬೆಹ್ರಾ ಬಂಧಿತ ಆರೋಪಿಗಳು.

ಇದನ್ನೂ ಓದಿ:ವೃದ್ದೆಯ ಕೈಕಾಲು ಕಟ್ಟಿ ದರೋಡೆ: ಅಪ್ಪ - ಮಗನ ಸಹಿತ ಆರು ಜನರ ಬಂಧನ

ಆಂಧ್ರ ಪೊಲೀಸರ ಸೋಗಿನಲ್ಲಿ ದರೋಡೆ: ಆಂಧ್ರಪ್ರದೇಶದ ಪೊಲೀಸರ ಸಮವಸ್ತ್ರ ಧರಿಸಿ ಹಾಡಹಗಲೇ 80 ಲಕ್ಷ ರೂ ಹಣ ದರೋಡೆ ಮಾಡಿದ್ದ ಮೂವರು ಆರೋಪಿಗಳನ್ನು ವಿಲ್ಸನ್ ಗಾರ್ಡನ್ ಠಾಣಾ ಪೊಲೀಸರು ಇತ್ತೀಚೆಗೆ ಬಂಧಿಸಿದ್ದರು. ಡಿಸೆಂಬರ್ 27ರಂದು ಮಧ್ಯಾಹ್ನ ಶಾಂತಿನಗರದ ಕೆ. ಎಚ್. ರಸ್ತೆಯ ಬಳಿ ಕಾರಿನಲ್ಲಿ ತೆರಳುತ್ತಿದ್ದ ಕುಮಾರಸ್ವಾಮಿ ಹಾಗೂ ಚಂದನ್ ಎಂಬವರನ್ನು ಪೊಲೀಸರ ಸೋಗಿನಲ್ಲಿ ಅಡ್ಡಗಟ್ಟಿ 80 ಲಕ್ಷ ದರೋಡೆ ಮಾಡಿ ಪರಾರಿಯಾಗಿದ್ದ ಆರೋಪಿಗಳಾದ ಭತಲ್ ಶಿವರಾಮ ಕೃಷ್ಣ ಯಾದವ್ (19), ಶೇಕ್ ಚೆಂಪತಿ ಲಾಲ್ ಬಾಷಾ (36), ಶೇಕ್ ಚೆಂಪತಿ ಜಾಕೀರ್ (27) ನನ್ನು ಪೊಲೀಸರು ಬಂಧಿಸಿದ್ದರು.

ಇದನ್ನೂ ಓದಿ:ಆಂಧ್ರ ಪೊಲೀಸರ ಸೋಗಿನಲ್ಲಿ ರಾಬರಿ: ಸಹೋದರರ ಸಹಿತ ಮೂವರ ಬಂಧನ

ABOUT THE AUTHOR

...view details