ಬೆಂಗಳೂರು:ಹೈಕೋರ್ಟ್ ಆದೇಶ ಮೇರೆಗೆ ಲಾಕ್ಡೌನ್ ಹಿನ್ನೆಲೆಯಲ್ಲಿ ಜಪ್ತಿ ಮಾಡಿಕೊಳ್ಳಲಾಗಿದ್ದ ವಾಹನಗಳನ್ನು ಸಂಚಾರ ಪೊಲೀಸರು ನಿನ್ನೆ ಆಯಾ ವಾಹನ ಮಾಲೀಕರಿಗೆ ಒಪ್ಪಿಸಿದರು. ಆದರೆ, ಲಾಕ್ಡೌನ್ ಉಲ್ಲಂಘನೆ ಮಾಡಿದ್ದರಿಂದ ಭಾರಿ ಮೊತ್ತದ ದಂಡ ವಸೂಲಿ ಮಾಡಿಕೊಂಡೇ ವಾಹನಗಳನ್ನು ನೀಡಲಾಯಿತು.
ವಾಹನ ಮಾಲೀಕರಿಂದ ದಂಡ ಸಂಗ್ರಹಿಸಿಕೊಂಡು ರಿಲೀಸ್ ಮಾಡುತ್ತಿರುವ ಸಂಚಾರ ಪೊಲೀಸರು, ನಿನ್ನೆ ಒಂದೇ ದಿನದಲ್ಲಿ ವಾಹನ ಸವಾರರಿಂದ 14 ಲಕ್ಷದ 10 ಸಾವಿರ ರೂ. ದಂಡ ವಸೂಲಿ ಮಾಡಿದ್ದಾರೆ. ಲಾಕ್ಡೌನ್ ನಿಯಮ ಉಲ್ಲಂಘಿಸಿ ರಸ್ತೆಗಿಳಿದಿದ್ದ ಬೈಕ್, ಆಟೋ-ರಿಕ್ಷಾ ಹಾಗೂ ಕಾರು ಸೇರಿ 47 ಸಾವಿರಕ್ಕೂ ಹೆಚ್ಚು ವಾಹನಗಳನ್ನು ಸಂಚಾರ ಪೊಲೀಸರು ಜಪ್ತಿ ಮಾಡಿಕೊಂಡಿದ್ದರು.