ಬೆಂಗಳೂರು:ಇಂದು ದಕ್ಷಿಣ ಒಳನಾಡಿನ ಬಹುತೇಕ ಎಲ್ಲಾ ಕಡೆ ಮಳೆಯಾಗಿದೆ. ಉತ್ತರ ಒಳನಾಡು ಹಾಗೂ ಕರಾವಳಿ ಜಿಲ್ಲೆಗಳಲ್ಲಿ ಒಣಹವೆ ಮುಂದುವರಿದಿದೆ ಎಂದು ಪ್ರಾದೇಶಿಕ ಹವಾಮಾನ ಮುನ್ಸೂಚನೆ ಇಲಾಖೆ ವಿಭಾಗದ ನಿರ್ದೇಶಕ ಸಿ ಎಸ್ ಪಾಟೀಲ್ ತಿಳಿಸಿದರು.
ಬಂಡೀಪುರದಲ್ಲಿ 7 ಸೆಂ.ಮೀ, ಚಾಮರಾಜನಗರದಲ್ಲಿ 3 ಸೆಂ.ಮೀ, ಹೆಚ್.ಡಿ ಕೋಟೆಯಲ್ಲಿ 2 ಸೆಂ.ಮೀ ಮಳೆಯಾಗಿದೆ. ಲಕ್ಷದ್ವೀಪದಿಂದ ಕರ್ನಾಟಕದ ಕರಾವಳಿಯವರೆಗೆ ಟ್ರಫ್ (ವಾತಾವರಣದಲ್ಲಿ ಗಾಳಿಯ ಚಲನೆ) ನಿರ್ಮಾಣವಾಗಿರುವುದರಿಂದ ರಾಜ್ಯದಲ್ಲಿ ಮಳೆಯಾಗುತ್ತಿದೆ ಎಂದು ಸಿಎಸ್ ಪಾಟೀಲ್ ತಿಳಿಸಿದರು.