ಕರ್ನಾಟಕ

karnataka

ETV Bharat / state

ಪುಲಿಕೇಶಿನಗರದ ಕಟ್ಟಡ ಕುಸಿತ ಪ್ರಕರಣ: ಇಬ್ಬರು ಎಂಜಿನಿಯರ್​ಗಳ ಬಂಧನ

ಲಿಕೇಶಿನಗರದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳಪೆ ಗುಣಮಟ್ಟದ 3 ಅಂತಸ್ತಿನ ಕಟ್ಟಡ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಇಬ್ಬರು ಸಿವಿಲ್ ಎಂಜಿನಿಯರ್​ಗಳ ಬಂಧನ ಮಾಡಲಾಗಿದೆ. ನಿರ್ಮಾಣದ ಮೇಲ್ವಿಚಾರಕರಾಗಿದ್ದ ತಮೀಮ್ & ನಯಾಜ್ ಬಂಧಿತ ಸಿವಿಲ್ ಎಂಜಿನಿಯರ್​ಗಳು.

ಪುಲಿಕೇಶಿನಗರದ ಕಟ್ಟಡ ಕುಸಿತ ಪ್ರಕರಣ: ಇಬ್ಬರು ಇಂಜಿನಿಯರ್​ಗಳ ಬಂಧನ

By

Published : Jul 17, 2019, 5:28 PM IST

ಬೆಂಗಳೂರು: ಪುಲಿಕೇಶಿನಗರದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳಪೆ ಗುಣಮಟ್ಟದ 3 ಅಂತಸ್ತಿನ ಕಟ್ಟಡ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಇಬ್ಬರು ಸಿವಿಲ್ ಎಂಜಿನಿಯರ್​​ಗಳನ್ನು ಬಂಧನ ಮಾಡಲಾಗಿದೆ.

ನಿರ್ಮಾಣದ ಮೇಲ್ವಿಚಾರಕರಾಗಿದ್ದ ತಮೀಮ್ & ನಯಾಜ್ ಬಂಧಿತ ಸಿವಿಲ್ ಎಂಜಿನಿಯರ್​ಗಳಾಗಿದ್ದು, ಇವರು ‌ಸುರಕ್ಷತಾ ಕ್ರಮಗಳನ್ನ ಉಲ್ಲಂಘಿಸಿ ಕಟ್ಟಡ ನಿರ್ಮಿಸಿದ್ದರು ಎನ್ನಲಾಗಿದೆ. ಹೀಗಾಗಿ‌ ಇವರನ್ನ ಬಂಧಿಸಲಾಗಿದೆ. ಹಾಗೆಯೇ ತಲೆಮರೆಸಿಕೊಂಡಿರುವ ಕಟ್ಟಡದ ಮಾಲೀಕ ಹಾಗೂ ಇತರ ಆರೋಪಿಗಳಿಗಾಗಿ ಪೊಲೀಸರು ಶೋಧ ನಡೆಸಿದ್ದು‌, ಇಬ್ಬರೂ ನಿರೀಕ್ಷಣಾ ಜಾಮೀನಿಗಾಗಿ ‌ನ್ಯಾಯಲಯಕ್ಕೆ ಅರ್ಜಿ ಸಲ್ಲಿಕೆ ಮಾಡಿದ್ದಾರೆ.

ಏನಿದು ಘಟನೆ..?
ಪುಲಕೇಶಿನಗರ ಠಾಣಾ ವ್ಯಾಪ್ತಿಯ ‌ಮಾರುತಿ ಸೇವಾ ನಗರದಲ್ಲಿ ಕಟ್ಟಡ ಕುಸಿತ ಉಂಟಾಗಿ ನಾಲ್ವರು ಸಾವನ್ನಪ್ಪಿದ್ರು. ಹೀಗಾಗಿ ಕಟ್ಟಡ ಮಾಲೀಕರ ವಿರುದ್ಧ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಾಥಮಿಕ ತನಿಖೆಯಲ್ಲಿ ನಿರ್ಮಾಣ ಹಂತದ ಕಟ್ಟಡ ಕುಸಿಯಲು ಸೂಕ್ತ ಪ್ಲಾನಿಂಗ್ ಇಲ್ಲದೇ ಇರುವುದು ಮತ್ತು ಬಿಬಿಎಂಪಿ ಕೊಟ್ಟಿರೋ ಅನುಮತಿಗಿಂತ ಒಂದು ಅಂತಸ್ತು ಜಾಸ್ತಿ ಕಟ್ಟಿದ ಪರಿಣಾಮವೇ ಈ ದುರಂತಕ್ಕೆ‌ ಕಾರಣ ಎಂದು ಗೊತ್ತಾಗಿದೆ. ಸದ್ಯ‌ ಇಬ್ಬರನ್ನ ಬಂಧಿಸಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ABOUT THE AUTHOR

...view details