ಬೆಂಗಳೂರು: ಮಹಾನಗರದಲ್ಲಿ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ನಿವಾಸಕ್ಕೆ ಸಾರ್ವಜನಿಕರ ಭೇಟಿಗೆ ನಿರ್ಬಂಧ ಹೇರಲಾಗಿದೆ.
ಸಿದ್ದರಾಮಯ್ಯ ನಿವಾಸಕ್ಕೆ ಶಾಸಕ ಜಮೀರ್ ಅಹಮ್ಮದ್ ಖಾನ್ ಭೇಟಿ ಶಿವಾನಂದ ವೃತ್ತ ಸಮೀಪವಿರುವ ಸಿದ್ದರಾಮಯ್ಯ ಸರ್ಕಾರಿ ನಿವಾಸದ ಗೇಟಿಗೆ ಫಲಕ ಅಳವಡಿಸಲಾಗಿದೆ. 'ಕೊರೊನಾ ವೈರಸ್ ಹೆಚ್ಚುತ್ತಿರುವ ಹಿನ್ನೆಲೆ ಸಾರ್ವಜನಿಕರ ಭೇಟಿ ಹಾಗೂ ಪ್ರವೇಶಕ್ಕೆ ಅವಕಾಶ ಇರುವುದಿಲ್ಲ. ದಯವಿಟ್ಟು ಸಹಕರಿಸಬೇಕಾಗಿ ವಿನಂತಿ' ಎಂದು ತಿಳಿಸಲಾಗಿದೆ.
ಕಳೆದ ಬಾರಿ ಸಾರ್ವಜನಿಕರನ್ನು ಭೇಟಿಯಾದ ಸಂದರ್ಭದಲ್ಲಿ ಕೊರೊನಾ ಪಾಸಿಟಿವ್ಗೆ ಒಳಗಾಗಿದ್ದ ಸಿದ್ದರಾಮಯ್ಯ, ಸಿಎಂ ಬಿಎಸ್ವೈ ಜೊತೆಯಲ್ಲೇ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿದ್ದರು. ಇದೀಗ ಸಿಎಂ ಯಸಿಯೂರಪ್ಪ ಮತ್ತೊಮ್ಮೆ ಕೋವಿಡ್ ಸೋಂಕಿಗೆ ಒಳಗಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ನಿರ್ಬಂಧದ ಮಧ್ಯೆ ಭೇಟಿ:
ಕೊರೊನಾ ಹೆಚ್ಚಳ ಹಿನ್ನೆಲೆ ತಮ್ಮ ನಿವಾಸಕ್ಕೆ ಯಾರೂ ಬರಬೇಡಿ. ಯಾರನ್ನೂ ಭೇಟಿ ಮಾಡಲ್ಲ ಎಂದು ಬೋರ್ಡ್ ಹಾಕಿದ ಹೊರತಾಗಿಯೂ ಹತ್ತಕ್ಕೂ ಹೆಚ್ಚು ಧರ್ಮಗುರುಗಳ ಜೊತೆ ಸಿದ್ದರಾಮಯ್ಯ ನಿವಾಸಕ್ಕೆ ಶಾಸಕ ಜಮೀರ್ ಅಹಮ್ಮದ್ ಖಾನ್ ಭೇಟಿ ನೀಡಿದ್ದಾರೆ. ವಿಧಾನ ಪರಿಷತ್ ಸದಸ್ಯ ನಜೀರ್ ಅಹಮ್ಮದ್ ಸಾಥ್ ನೀಡಿದ್ದಾರೆ. ರಂಜಾನ್ ಪ್ರಾರ್ಥನೆಗೆ ಅವಕಾಶ ಮಾಡಿಕೊಡುವಂತೆ ಸರ್ಕಾರವನ್ನ ಒತ್ತಾಯಿಸಲು ಸಿದ್ದರಾಮಯ್ಯ ಮೊರೆ ಹೋದ ಮುಸ್ಲಿಂ ನಾಯಕರು, ಈ ಸಂದರ್ಭ ತಮ್ಮ ಮನವಿಯನ್ನು ಸಿದ್ದರಾಮಯ್ಯಗೆ ಸಲ್ಲಿಸಿದ್ದು ಸರ್ಕಾರದ ಮೇಲೆ ಒತ್ತಡ ತರುವಂತೆ ಮನವಿ ಮಾಡಿದ್ದಾರೆ.