ಕರ್ನಾಟಕ

karnataka

ETV Bharat / state

ಅಹೋರಾತ್ರಿ ಧರಣಿ: ಮೊಗಸಾಲೆಯಲ್ಲಿ ಭಾರತ - ವಿಂಡೀಸ್​ ಟಿ-20 ಪಂದ್ಯ ವೀಕ್ಷಿಸಿದ 'ಕೈ' ನಾಯಕರು - ಭಾರತ-ವಿಂಡೀಸ್​ ಟಿ-20 ಪಂದ್ಯ ವೀಕ್ಷಿಸಿದ ಕಾಂಗ್ರೆಸ್​ ನಾಯಕರು

ಸದನದಲ್ಲಿ ಎರಡನೇ ದಿನದ ಅಹೋರಾತ್ರಿ ಧರಣಿ ನಡೆಸುತ್ತಿರುವ ಕಾಂಗ್ರೆಸ್ ನಾಯಕರು ಕ್ರಿಕೆಟ್ ಪಂದ್ಯ ವೀಕ್ಷಿಸುತ್ತಿದ್ದಾರೆ.

protesting-congress-leaders-watching-cricket-match
ಅಹೋರಾತ್ರಿ ಧರಣಿ: ಮೊಗಸಾಲೆಯಲ್ಲಿ ಭಾರತ-ವಿಂಡೀಸ್​ ಟಿ-20 ಪಂದ್ಯ ವೀಕ್ಷಿಸಿದ 'ಕೈ' ನಾಯಕರು

By

Published : Feb 18, 2022, 9:54 PM IST

Updated : Feb 18, 2022, 10:33 PM IST

ಬೆಂಗಳೂರು: ಸದನದಲ್ಲಿ ಎರಡನೇ ದಿನದ ಅಹೋರಾತ್ರಿ ಧರಣಿ ನಡೆಸುತ್ತಿರುವ ಕಾಂಗ್ರೆಸ್ ನಾಯಕರು ಭಾರತ ಹಾಗೂ ವೆಸ್ಟ್ ಕ್ರಿಕೆಟ್ ತಂಡಗಳ ನಡುವಿನ ಎರಡನೇ ಟಿ-20 ಪಂದ್ಯವನ್ನು‌ ವೀಕ್ಷಿಸುವ ಮೂಲಕ ರಿಲ್ಯಾಕ್ಸ್ ಮೂಡ್​ನಲ್ಲಿದ್ದಾರೆ.

ಸಚಿವ ಈಶ್ವರಪ್ಪ ವಜಾಗೆ ಆಗ್ರಹಿಸಿ ಕಾಂಗ್ರೆಸ್ ಶಾಸಕರು ಇಂದು ಎರಡನೇ ದಿನದ ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ. ಎರಡನೇ ದಿನದ ಅಹೋರಾತ್ರಿ ಧರಣಿ ವೇಳೆ ಕೈ ನಾಯಕರು ಕ್ರಿಕೆಟ್ ವೀಕ್ಷಿಸುತ್ತಿದ್ದಾರೆ. ವಿಪಕ್ಷ ಮೊಗಸಾಲೆಯಲ್ಲಿ ಕ್ರಿಕೆಟ್ ವೀಕ್ಷಿಸುತ್ತಿದ್ದು, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಮಾಜಿ ಸ್ಪೀಕರ್​​ ರಮೇಶ್ ಕುಮಾರ್ ಸೇರಿದಂತೆ ಕೈ ಶಾಸಕರು ಇದ್ದಾರೆ.

ವಿಧಾನಸೌಧದ ಮೊಗಸಾಲೆಯಲ್ಲಿ ಭಾರತ - ವಿಂಡೀಸ್​ ಟಿ-20 ಪಂದ್ಯ ವೀಕ್ಷಿಸಿದ 'ಕೈ' ನಾಯಕರು

ಧರಣಿನಿರತರಿಗೆ ಊಟದ ವ್ಯವಸ್ಥೆ:ಎರಡನೇ ದಿನವಾದ ಇಂದೂ ಕೂಡ ಧರಣಿ ನಿರತ ಶಾಸಕರಿಗೆ ವಿಧಾನಸಭೆಯ ಸಚಿವಾಲಯ ಊಟದ ವ್ಯವಸ್ಥೆ ಕಲ್ಪಿಸಿದೆ.

ಇದನ್ನೂ ಓದಿ:ರಣಜಿ ಟ್ರೋಫಿ : ಪದಾರ್ಪಣೆ ಪಂದ್ಯದಲ್ಲೇ ತ್ರಿಶತಕ ಸಿಡಿಸಿ ವಿಶ್ವದಾಖಲೆ ಬರೆದ ಬಿಹಾರದ ಸಕಿಬುಲ್​ ಗನಿ

ಸೌತ್ ರುಚಿಸ್ ಹೋಟೆಲ್​ನಿಂದ ಊಟದ ವ್ಯವಸ್ಥೆ ಮಾಡಲಾಗಿದೆ. ಇವತ್ತಿನ ಊಟದ ಮೆನುವಿನಲ್ಲಿ ಪಾಯಸ, ಚಪಾತಿ, ರಾಗಿ ಮುದ್ದೆ, ರೈಸ್ ಬಾತ್, ಪಲ್ಯ, ವೆಜ್ ಕರ್ರಿ, ಅನ್ನ, ಸಾಂಬಾರ್, ರಸಂ, ಮೊಸರು , ತರಕಾರಿ ಸಾಲಾಡ್, ಹಣ್ಣುಗಳನ್ನು ಪೂರೈಸಲಾಗಿದೆ. ಒಟ್ಟು 120 ಜನರಿಗೆ ಊಟದ ವ್ಯವಸ್ಥೆ ಇದೆ.

Last Updated : Feb 18, 2022, 10:33 PM IST

ABOUT THE AUTHOR

...view details