ಕರ್ನಾಟಕ

karnataka

ETV Bharat / state

ಡಿಕೆಶಿ ಬಂಧನ ಖಂಡಿಸಿ ಬೆಂಗಳೂರಿನಲ್ಲಿ ಪ್ರತಿಭಟನೆ - ನ್ಯಾಷನಲ್ ಕಾಲೇಜು ಆವರಣ

ಮಾಜಿ ಸಚಿವ ಡಿ.ಕೆ.ಶಿವಕುಮಾರ್​ ಅವರ ಬಂಧನವನ್ನು ಖಂಡಿಸಿ ಅವರ ಅಭಿಮಾನಿಗಳು, ಸಂಬಂಧಿಕರು ಮತ್ತು ಆಪ್ತರು ಇಂದು ಪ್ರತಿಭಟನೆ ನಡೆಸಿದ್ರು.

ಬೆಂಗಳೂರಿನಲ್ಲಿ ಪ್ರತಿಭಟನೆ

By

Published : Sep 11, 2019, 5:02 PM IST

ಬೆಂಗಳೂರು: ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಬೆಂಬಲಿಗರ ಪ್ರತಿಭಟನಾ ರ‍್ಯಾಲಿ ಚಾಲನೆ ಪಡೆದಿದ್ದು, ಭಾರಿ ಜನಸ್ತೋಮದಿಂದಾಗಿ ಗಮನ ಸೆಳೆದಿದೆ.

ಪ್ರತಿಭಟನಾ ರ‍್ಯಾಲಿ ಈಗಾಗಲೇ ನ್ಯಾಷನಲ್ ಕಾಲೇಜು ಆವರಣದಿಂದ ಹೊರಟು ಫ್ರೀಡಂ ಪಾರ್ಕ್​ ತಲುಪಿದ್ದು, ಮಾರ್ಗದುದ್ದಕ್ಕೂ ಅವರ ಅಭಿಮಾನಿಗಳು ಜಯಘೋಷ ಕೂಗುತ್ತಾ ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಡಿ.ಕೆ.ಶಿವಕುಮಾರ್ ಬಂಧನ ಖಂಡಿಸಿ ಪ್ರತಿಭಟನೆ

ನ್ಯಾಷನಲ್ ಕಾಲೇಜು ಆವರಣದಲ್ಲಿ ಡಿ.ಕೆ.ಶಿವಕುಮಾರ್​​ ಅಭಿಮಾನಿಗಳು, ಅವರ ಸಂಬಂಧಿಗಳು, ಆಪ್ತರು ಹಾಗೂ ಸ್ನೇಹಿತರು ಭಾರಿ ಸಂಖ್ಯೆಯಲ್ಲಿ ಸೇರಿದ್ದರು.

ABOUT THE AUTHOR

...view details