ಕರ್ನಾಟಕ

karnataka

ETV Bharat / state

ವೀಕೆಂಡ್ ಮಸ್ತಿಗೆ ಬ್ರೇಕ್​... ವರ್ತೂರಿನಲ್ಲಿ ಮಿನಿ ಫಾರೆಸ್ಟ್​ ನಿರ್ಮಾಣಕ್ಕೆ ಟೆಕ್ಕಿಗಳಿಂದ ನಾಂದಿ - Brigade group

ಬ್ರಿಗೇಡ್ ಗ್ರೂಪ್  45 ಎಕರೆ ಜಾಗದಲ್ಲಿ ಟೆಕ್ಕಿಗಳು ಸಸಿಗಳನ್ನು ನೆಟ್ಟು ಪರಿಸರ ಪ್ರೇಮ ಮೆರೆದಿದ್ದಾರೆ. ಬ್ರಿಗೇಡ್ ಗ್ರೂಪ್​ನ ಸಿಎಸ್ಆರ್ ಫಂಡ್​ನಲ್ಲಿ 10 ಸಾವಿರ ಸಸಿಗಳನ್ನು ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಮಿನಿ ಫಾರೆಸ್ಟ್​ ನಿರ್ಮಾಣಕ್ಕೆ ನಾಂದಿ

By

Published : Aug 25, 2019, 2:39 AM IST

ಬೆಂಗಳೂರು: ವೀಕೆಂಡ್​ ಬಂದ್ರೆ ಸಾಕು ಮೋಜು-ಮಸ್ತಿಗಾಗಿ ಒಂದಲ್ಲಾ ಇನ್ನೊಂದು ಪ್ಲ್ಯಾನ್​ ಮಾಡ್ತಾನೆ ಇರ್ತೀವಿ. ಆದರೆ ಇಲ್ಲೊಂದು ಟೆಕ್ಕಿಗಳ ತಂಡ, ರಜೆಯನ್ನು ಪರಿಸರ ಕಾಳಜಿಯಲ್ಲಿ ಕಳೆದು ಗಮನ ಸೆಳೆದಿದೆ.

ಉದ್ಯಾನ ನಗರಿಯಲ್ಲಿ ಇತ್ತೀಚೆಗೆ ಗಿಡ-ಮರಗಳ ಮಾರಣ ಹೋಮ ನಡೆಯುತ್ತಲೇ ಇದೆ. ಈ ಮಧ್ಯೆ ಟೆಕ್ಕಿಗಳ ಬ್ರಿಗೇಡ್ ಗ್ರೂಪ್ 45 ಎಕರೆ ಜಾಗದಲ್ಲಿ ಸಸಿಗಳನ್ನು ನೆಟ್ಟು ಪರಿಸರ ರಕ್ಷಿಸುವ ಕೆಲಸಕ್ಕೆ ಮುಂದಾಗಿದೆ. ಬ್ರಿಗೇಡ್ ಗ್ರೂಪ್​​ನ ಸಿಎಸ್ಆರ್ ಫಂಡ್​​ನಲ್ಲಿ 10 ಸಾವಿರ ಸಸಿಗಳನ್ನು ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ನೂರಾರು ಮಕ್ಕಳು ಹಾಗೂ ನಿವಾಸಿಗಳು ಸೇರಿ ನಗರದ ವರ್ತೂರಿನಲ್ಲಿ ಸಸಿಗಳನ್ನು ನೆಟ್ಟು ಪ್ರಕೃತಿ ಉಳಿವಿಗೆ ಅಳಿಲು ಸೇವೆ ಮಾಡಿದ್ದಾರೆ.

ಮಿನಿ ಫಾರೆಸ್ಟ್​ ನಿರ್ಮಾಣಕ್ಕೆ ನಾಂದಿ

ಈ ಕಾರ್ಯಕ್ರಮದಲ್ಲಿ ವರ್ತೂರು ಸುತ್ತಮುತ್ತಲಿನ ಅಪಾರ್ಟ್ಮೆಂಟ್ ನಿವಾಸಿಗಳು ಸಹ ಪಾಲ್ಗೊಂಡಿದ್ದರು. 100 ಕ್ಕೂ ಹೆಚ್ಚು ಬಗೆಯ 10 ಸಾವಿರ ಸಸಿಗಳನ್ನುನೆಡಲಾಗಿದ್ದು, ಇನ್ನು 6 ತಿಂಗಳ ಅವಧಿಯಲ್ಲಿ ಈ ಸಸಿಗಳು ಮರಗಳಾಗಿ ಬೆಳೆದು, ಅರಣ್ಯ ವಾತಾವರಣ ನಿರ್ಮಾಣವಾಗಲಿದೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.

ಒಟ್ಟಿನಲ್ಲಿ ರಜೆ ಸಿಕ್ಕರೆ ಸಾಕು ಸಿನಿಮಾ​, ಪಾರ್ಟಿ, ಟೂರ್​, ಟ್ರಿಪ್​ ಎಂದು ಎಂಜಾಯ್​ ಮಾಡುವ ಇಂದಿನ ಯುವ ಪೀಳಿಗೆಗೆ ಈ ಟೆಕ್ಕಿಗಳು ಮಾದರಿಯಾಗಿದ್ದಾರೆ.

ABOUT THE AUTHOR

...view details