ಕರ್ನಾಟಕ

karnataka

ಯುಗಾದಿ ಹಿನ್ನಲೆ ಖಾಸಗಿ ಬಸ್ ಟಿಕೆಟ್ ಯದ್ವಾತದ್ವಾ ಏರಿಕೆ: ಊರುಗಳತ್ತ ತೆರಳಲು ಸಜ್ಜಾಗಿರುವ ಜನರಿಗೆ ಶಾಕ್

By

Published : Apr 1, 2022, 9:40 PM IST

ರಾಜ್ಯದ ದಕ್ಷಿಣ ಭಾಗದ ಜಿಲ್ಲೆಗಳಿಗೆ ತೆರಳುವ ಬಸ್​ಗಳ ಟಿಕೆಟ್ ದರ ಸರಾಸರಿ 100 ರಿಂದ 200 ರೂ ಹೆಚ್ಚಳವಾಗಿದ್ದರೆ, ಉತ್ತರ ಕರ್ನಾಟಕ ಭಾಗಕ್ಕೆ ತೆರಳುವ ಬಸ್​ಗಳ ಟಿಕೆಟ್ ದುಬಾರಿಯಾಗಿದ್ದು, ಕನಿಷ್ಟ 600 ರಿಂದ 700 ರೂ ವರೆಗೂ ಹೆಚ್ಚಿಸಲಾಗಿದೆ ಎಂದು ಹೆಸರು ಹೇಳಲಿಚ್ಛಿಸದ ಟ್ರಾವೆಲ್ ಮಾಲೀಕರು ತಿಳಿಸಿದ್ದಾರೆ.

private bus
ಖಾಸಗಿ ಬಸ್​

ಬೆಂಗಳೂರು: ಯುಗಾದಿ ಹಬ್ಬದ ಹಿನ್ನೆಲೆ ಜನರು ತಮ್ಮ ಊರುಗಳತ್ತ ಮುಖಮಾಡಿದ್ದಾರೆ. ಆದರೆ, ಬಸ್ ದರ ಕೇಳಿ ಅವರಿಗೆಲ್ಲ ಶಾಕ್ ಎದುರಾಗಿರುವುದು ಖಂಡಿತ ಎನ್ನುವಂತಿದೆ. ಹಬ್ಬಕ್ಕಾಗಿ ಜನರು ತಮ್ಮ ಊರುಗಳಿಗೆ ತೆರಳುತ್ತಿದ್ದು, ಕಳೆದ ಎರಡು ದಿನಗಳಿಂದ ಪ್ರಯಾಣಿಕರ ಸಂಖ್ಯೆ ಶೇ. 30 ರಷ್ಟು ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಬಸ್ ಟಿಕೆಟ್​ಗೆ ಡಿಮ್ಯಾಂಡ್ ಇದೆ. ಖಾಸಗಿ ಬಸ್​ಗಳ ಟಿಕೆಟ್ ದರದಲ್ಲಿ ಹೆಚ್ಚಳ ಕಂಡುಬಂದಿದೆ.

ರಾಜ್ಯದ ದಕ್ಷಿಣ ಭಾಗದ ಜಿಲ್ಲೆಗಳಿಗೆ ತೆರಳುವ ಬಸ್​ಗಳ ಟಿಕೆಟ್ ದರ ಸರಾಸರಿ 100 ರಿಂದ 200 ರೂ ಹೆಚ್ಚಳವಾಗಿದ್ದರೆ, ಉತ್ತರ ಕರ್ನಾಟಕ ಭಾಗಕ್ಕೆ ತೆರಳುವ ಬಸ್ ಗಳ ಟಿಕೆಟ್ ದುಬಾರಿಯಾಗಿದ್ದು, ಕನಿಷ್ಟ 600 ರಿಂದ 700 ರೂ ವರೆಗೂ ಹೆಚ್ಚಿಸಲಾಗಿದೆ ಎಂದು ಹೆಸರು ಹೇಳಲಿಚ್ಛಿಸದ ಟ್ರಾವೆಲ್ ಮಾಲೀಕರು ತಿಳಿಸಿದ್ದಾರೆ. ಬೆಂಗಳೂರಿಂದ ತೆರಳುವ ಟಿಕೆಟ್ ದರ ಗಮನಿಸುವುದಾದರೆ ಕಲಬುರ್ಗಿಗೆ ಸಾಮಾನ್ಯ ದಿನಗಳಲ್ಲಿ 750 ರೂ. ಇದ್ದದ್ದು 1300 ರೂ. ಗೆ ಏರಿಕೆಯಾಗಿದೆ.

ಹುಬ್ಬಳ್ಳಿಗೆ ತೆರಳಲು 700ರೂ ಇದ್ದ ಟಿಕೆಟ್ 1200 ರೂಗೆ ಮಾರಾಟವಾಗುತ್ತಿದೆ. ಬಿಜಾಪುರಕ್ಕೆ ತೆರಳಲು ಇದ್ದದ್ದು 750 ರೂ. ಆದರೆ, 1350 ರೂ. ಗೆ ತಲುಪಿದೆ ಎಂದು ಹೇಳಿದ್ದಾರೆ. ರಾಜಧಾನಿಯಿಂದ ಕಾರ್ಕಳಕ್ಕೆ ಸಾಮಾನ್ಯ ದಿನಗಳಲ್ಲಿ 700ರೂ ಇದ್ದದ್ದು 1400 ರೂ. ಗೆ ತಲುಪಿದೆ. ನಾಳೆ ಧಾರವಾಡಕ್ಕೆ ತೆರಳಲು 700ರೂ ಇದ್ದದ್ದು 1300 ರೂ. ಗೆ ಹೆಚ್ಚಿಸಲಾಗಿದೆ.

ಬೀದರ್​ಗೆ ತಲುಪಲು 850 ರೂ ಇದ್ದ ದರ 1400 ರೂ. ಆಗಿದೆ. ರಾಯಚೂರಿಗೆ 650 ರೂ. ಇದ್ದದ್ದು 1100 ರೂ. ಆಗಿದೆ. ಬಳ್ಳಾರಿಗೆ ತೆರಳಲು ಟಿಕೆಟ್ ದರ 900 ರೂ. ಗೆ ತಲುಪಿದೆ ಎಂದು ಟ್ರಾವೆಲ್ ಮಾಲೀಕರು ಮಾಹಿತಿ ನೀಡಿದ್ದಾರೆ.

ಓದಿ:ಅಮಿತ್ ಶಾ ನೇತೃತ್ವದಲ್ಲಿ ಕೋರ್ ಕಮಿಟಿ ಸಭೆ: ಚುನಾವಣಾ ಅಜೆಂಡಾ ಸೆಟ್ ಮಾಡ್ತಾರಾ ಬಿಜೆಪಿ ಚಾಣಕ್ಯ!

ABOUT THE AUTHOR

...view details