ಕರ್ನಾಟಕ

karnataka

ETV Bharat / state

ನಟಿ ಸಂಜನಾ ಜೊತೆ ವ್ಯವಹಾರ: ಸಿಸಿಬಿಯಿಂದ ಮಂಗಳೂರು ಮೂಲದ ಪೃಥ್ವಿ ಶೆಟ್ಟಿ ವಿಚಾರಣೆ - Mangalore-based Prithvi Shetty

ಡ್ರಗ್​​​ ಮಾಫಿಯಾ ಸಂಬಂಧ ಬಂಧಿತರಾಗಿರುವ‌ ಕೆಲ ಆರೋಪಿಗಳ ಜೊತೆ ಪೃಥ್ವಿ ಶೆಟ್ಟಿ‌ ‌ನಿರಂತರ ಸಂಪರ್ಕಹೊಂದಿರುವ ಹಿನ್ನೆಲೆ ಸದ್ಯ ವಿಚಾರಣೆ ನಡೆಸಲಾಗುತ್ತಿದೆ. ಮತ್ತೊಂದೆಡೆ ಪೃಥ್ವಿ ಶೆಟ್ಟಿ ನಟಿ ಸಂಜನಾ ಜೊತೆ ನಿರಂತರ ಕಾಂಟ್ಯಾಕ್ಟ್ ಇರುವ ವಿಚಾರ ಅಧಿಕಾರಿಗಳಿಗೆ ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.

prithvi-shetty-inquiry-from-ccb-in-drug-link-case
ನಟಿ ಸಂಜನಾ ಜೊತೆ ವ್ಯವಹಾರ: ಸಿಸಿಬಿಯಿಂದ ಮಂಗಳೂರು ಮೂಲದ ಪೃಥ್ವಿ ಶೆಟ್ಟಿ ವಿಚಾರಣೆ

By

Published : Sep 7, 2020, 4:51 PM IST

ಬೆಂಗಳೂರು: ಸ್ಯಾಂಡಲ್​​​​​ವುಡ್ ಡ್ರಗ್ ಪ್ರಕರಣದಲ್ಲಿ ಮತ್ತೋರ್ವ ಡ್ರಗ್ ಪೆಡ್ಲರ್​​​ ಅನ್ನು ಸಿಸಿಬಿ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ‌. ಡ್ರಗ್ಸ್ ಡೀಲ್ ಸಂಬಂಧ ನಿನ್ನೆ ಇಡೀ ದಿನ ಪೃಥ್ವಿ ಶೆಟ್ಟಿ ವಿಚಾರಣೆ ನಡೆಸಿದ್ದ ಸಿಸಿಬಿ ಮತ್ತೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ ಹಿನ್ನೆಲೆ ಮಂಗಳೂರು ಮೂಲದ ಪೃಥ್ವಿ ಶೆಟ್ಟಿ ವಿಚಾರಣೆಗೆ ಹಾಜರಾಗಿದ್ದಾರೆ.

ಪೃಥ್ವಿ ಶೆಟ್ಟಿ‌ ಬಂಧಿತ‌ ಕೆಲ ಆರೋಪಿಗಳ ಜೊತೆ ‌ನಿರಂತರ ಸಂಪರ್ಕ ಹೊಂದಿರುವ ಹಿನ್ನೆಲೆ ಸದ್ಯ ವಿಚಾರಣೆ ನಡೆಸಲಾಗುತ್ತಿದೆ. ಮತ್ತೊಂದೆಡೆ ಪೃಥ್ವಿ ಶೆಟ್ಟಿ ನಟಿ ಸಂಜನಾ ಜೊತೆ ನಿರಂತರ ಕಾಂಟ್ಯಾಕ್ಟ್ ಇರುವ ವಿಚಾರ ಅಧಿಕಾರಿಗಳಿಗೆ ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.

ಇವೆಂಟ್ ಮ್ಯಾನೆಜ್​​​​ಮೆಂಟ್​​​ ನಡೆಸುತ್ತಿದ್ದ ಪೃಥ್ವಿ ಶೆಟ್ಟಿ ನಟಿ ಸಂಜನಾ ಜೊತೆ ವ್ಯವಹಾರಗಳನ್ನು ಹೊಂದಿದ್ದ. ಸದ್ಯ ಜಂಟಿ ವ್ಯವಹಾರಗಳ ಕುರಿತಂತೆ ವಿಚಾರಣೆ ನಡೆಸಲು ಮುಂದಾಗಿದ್ದಾರೆ. ಅಲ್ಲದೆ ಆದಾಯದ ಮೂಲದ ಕುರಿತಂತೆ ಹಾಗೂ ವ್ಯವಹಾರದ ಕುರಿತು ಸಿಸಿಬಿ ವಿಚಾರಣೆ ನಡೆಸುತ್ತಿದೆ.

ಸದ್ಯ ಸ್ಯಾಂಡಲ್​ವುಡ್ ಡ್ರಗ್ ಮಾಫಿಯಾ ಪ್ರಕರಣದಲ್ಲಿ ಸಂಜನಾ ಆಪ್ತ ರಾಹುಲ್ ಬಂಧನವಾದ ಹಿನ್ನೆಲೆ ಸಿಸಿಬಿ ಪೊಲೀಸರು ನೋಟಿಸ್ ಕೊಡಲು ಸಿದ್ಧತೆ ನಡೆಸುತ್ತಿದ್ದರು. ಸದ್ಯ ಇದೀಗ ಪೃಥ್ವಿ ಶೆಟ್ಟಿ ಹಾಗೂ ಸಂಜನಾ ನಡುವೆ ಕೆಲ ವ್ಯವಹಾರದ ಬಗ್ಗೆ ಪಕ್ಕಾ ಸಾಕ್ಷ್ಯಗಳು ದೊರೆತರೆ ಸಂಜನಾ ಗಲ್ರಾನಿಗೆ ಆದಷ್ಟು ಬೇಗ ಸಿಸಿಬಿ ಪೊಲೀಸರು ತನಿಖೆಗೆ ಬುಲಾವ್ ನೀಡಲಿದ್ದಾರೆ.

ABOUT THE AUTHOR

...view details