ಬೆಂಗಳೂರು:ಕೊರೊನಾ ನಿಯಂತ್ರಣ ಹಾಗೂ ಲಾಕ್ಡೌನ್ ಸಡಿಲಿಕೆ ವಿಚಾರವಾಗಿ ಪ್ರಧಾನಿ ಮೋದಿ ಎಲ್ಲ ರಾಜ್ಯದ ಮುಖ್ಯಮಂತ್ರಿಗಳ ಜೊತೆ ವೀಡಿಯೋ ಸಂವಾದ ಆರಂಭಿಸಿದ್ದು, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಭಾಗಿಯಾಗಿದ್ದಾರೆ.
ಮಧ್ಯಾಹ್ನ 3 ಗಂಟೆಗೆ ಕರ್ನಾಟಕ ಸೇರಿದಂತೆ 15 ರಾಜ್ಯಗಳ ಸಿಎಂ ಜೊತೆ ವೀಡಿಯೋ ಕಾನ್ಫರೆನ್ಸ್ ಆರಂಭಗೊಂಡಿದ್ದು, ಗೃಹ ಕಚೇರಿ ಕೃಷ್ಣಾದಿಂದ ಸಿಎಂ ಯಡಿಯೂರಪ್ಪ, ಗೃಹ ಸಚಿವ ಬೊಮ್ಮಾಯಿ, ಸಚಿವರಾದ ಸೋಮಣ್ಣ, ಶ್ರೀರಾಮುಲು, ಡಾ. ಸುಧಾಕರ್, ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆ ಅಧಿಕಾರಿಗಳು ಭಾಗಿಯಾಗಿದ್ದಾರೆ.
ಮುಖ್ಯಮಂತ್ರಿಗಳ ಜೊತೆ ಪ್ರಧಾನಿ ಮೋದಿ ವೀಡಿಯೋ ಸಂವಾದ ಆರಂಭ ವೀಡಿಯೋ ಕಾನ್ಫರೆನ್ಸ್ ಪ್ರಾರಂಭದಲ್ಲಿ ಲಡಾಖ್ ಭಾಗದಲ್ಲಿ ವೀರ ಮರಣವನ್ನಪ್ಪಿದ ಯೋಧರಿಗೆ 2 ನಿಮಿಷ ಮೌನಾಚರಣೆ ಮಾಡುವ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು. ನಂತರ ಒಂದೊಂದೇ ರಾಜ್ಯದ ಮುಖ್ಯಮಂತ್ರಿಗಳ ಜೊತೆ ಸಂವಾದ ಆರಂಭಿಸಲಾಯಿತು.
ಕೊರೊನಾ ನಿಯಂತ್ರಣ ಸಂಬಂಧ ರಾಜ್ಯ ಸರ್ಕಾರ ಕೈಗೊಂಡಿರುವ ಕ್ರಮಗಳು, ಕೊರೊನಾ ಮಾರ್ಗಸೂಚಿ ಪಾಲನೆ, ಕಂಟೈನ್ಮೆಂಟ್ ಝೋನ್‍ಗಳಲ್ಲಿ ಕಠಿಣ ಕ್ರಮ ಕೈಗೊಂಡಿರುವ ಕುರಿತು ಸಿಎಂ ಸಮಗ್ರವಾದ ಮಾಹಿತಿ ನೀಡಲಿದ್ದಾರೆ.
ಮುಖ್ಯಮಂತ್ರಿಗಳ ಜೊತೆ ಪ್ರಧಾನಿ ಮೋದಿ ವೀಡಿಯೋ ಸಂವಾದ ರಾಜ್ಯದಲ್ಲಿ ಈಗಾಗಲೇ ಅನ್‍ಲಾಕ್ ಜಾರಿಗೊಂಡಿದ್ದು, ಮತ್ತಷ್ಟು ಸಡಿಲಿಕೆ ಬಗ್ಗೆ ಬೇಡಿಕೆ ಇಡುವ ಸಾಧ್ಯತೆ ಇದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಕೊರೊನಾ ಪ್ಯಾಕೇಜ್ ಬಳಕೆ, ಆರ್ಥಿಕ ಚಟುವಟಿಕೆ ಪುನಾರಂಭದ ನಂತರದ ಬೆಳವಣಿಗೆ, ಸಾರಿಗೆ ಸಂಚಾರ ಆರಂಭಗೊಂಡ ನಂತರದ ಸ್ಥಿತಿಗತಿ, ಕೊರೊನಾ ವಾರಿಯರ್ಸ್ ಕಾರ್ಯವೈಖರಿ ಬಗ್ಗೆಯೂ ಸಿಎಂ ಮಾಹಿತಿ ನೀಡಲಿದ್ದಾರೆ.
ಪ್ರತಿದಿನ ನಡೆಸುವ ಕೊರೊನಾ ಪರೀಕ್ಷೆ, ಲ್ಯಾಬ್‍ಗಳು, ಆಸ್ಪತ್ರೆಗಳ ವಿವರ, ಆಗಸ್ಟ್ನಲ್ಲಿ ಕೊರೊನಾ ಹೆಚ್ಚಾಗುವ ಕುರಿತು ತಜ್ಞರು ನೀಡಿರುವ ವರದಿ ಸಂಬಂಧ ಪಿಎಂ ಜೊತೆ ಚರ್ಚೆ ನಡೆಸಲಿದ್ದಾರೆ.