ಕರ್ನಾಟಕ

karnataka

ETV Bharat / state

ಶಾಲೆ ಪುನಾರಂಭಕ್ಕೆ ಶಿಕ್ಷಣ ಇಲಾಖೆಯಿಂದ ಎಸ್​ಒಪಿ ತಯಾರಿ: ಸರ್ಕಾರಕ್ಕೆ ವರದಿ ಬಳಿಕ ನಿರ್ಧಾರ

ರಾಜ್ಯದ ಆರೋಗ್ಯ ಇಲಾಖೆ ಜತೆಗೆ ಶಿಕ್ಷಣ ಇಲಾಖೆ ಎಸ್​ಒಪಿ (ಗುಣಮಟ್ಟ ಕಾರ್ಯನಿರ್ವಹಣೆ ಶಿಷ್ಠಾಚಾರ) ಸಿದ್ಧಪಡಿಸುತ್ತಿದೆ.‌ ಶಾಲೆ ಪುನಾರಂಭಕ್ಕೆ ಶಿಕ್ಷಣ ಇಲಾಖೆಯಿಂದ ಇನ್ನೊಂದು ವಾರದಲ್ಲಿ ಎಸ್​ಒಪಿ ತಯಾರಿ ಆಗಲಿದೆ. ಬಳಿಕ ಇಲಾಖೆ ಸರ್ಕಾರಕ್ಕೆ ವರದಿ ಸಲ್ಲಿಸಲಿದೆ.‌

ಶಿಕ್ಷಣ ಇಲಾಖೆ
ಶಿಕ್ಷಣ ಇಲಾಖೆ

By

Published : Oct 9, 2020, 4:48 PM IST

ಬೆಂಗಳೂರು:ರಾಜ್ಯದಲ್ಲಿ ಸದ್ಯ ಶಾಲಾ-ಕಾಲೇಜು ಆರಂಭದ ಕುರಿತು ದೊಡ್ಡ ಮಟ್ಟದ ಚರ್ಚೆ ನಡೆಯುತ್ತಿದೆ. ಕೇಂದ್ರ ಸರ್ಕಾರವೇನೋ ಅಕ್ಟೋಬರ್ 15ರ ನಂತರ ಶಾಲಾ-ಕಾಲೇಜು ಆರಂಭಿಸಬಹುದು ಎಂದು ತಿಳಿಸಿದೆ. ಆದರೆ, ಇತ್ತ ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಏರಿಕೆ ಆಗುತ್ತಿರುವ ಹಿನ್ನೆಲೆಯಲ್ಲಿ ಶಾಲೆ ಆರಂಭಕ್ಕೆ ಭಾರಿ ವಿರೋಧ ವ್ಯಕ್ತವಾಗ್ತಿದೆ.

ಈ ಮಧ್ಯೆ ಕೇಂದ್ರ ಸರ್ಕಾರ ಎಸ್​ಒಪಿ ಜಾರಿ ಮಾಡಿದ್ದು, ಇದೀಗ ರಾಜ್ಯದ ಆರೋಗ್ಯ ಇಲಾಖೆ ಜತೆಗೆ ಶಿಕ್ಷಣ ಇಲಾಖೆ ಎಸ್​ಒಪಿ ಸಿದ್ಧಪಡಿಸುತ್ತಿದೆ.‌ ಶಾಲೆ ಪುನಾರಂಭಕ್ಕೆ ಇಲಾಖೆಯಿಂದ ಇನ್ನೊಂದು ವಾರದಲ್ಲಿ ಎಸ್​ಒಪಿ ತಯಾರಿ ಕೆಲಸ ನಡೆಯಲಿದ್ದು ಬಳಿಕ ಸರ್ಕಾರಕ್ಕೆ ವರದಿ ಸಲ್ಲಿಸಲಿದೆ.‌

ಈ ಬಗ್ಗೆ ಮಾತಾನಾಡಿದ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಅನ್ಬು ಕುಮಾರ್, "ಇನ್ನೊಂದು ವಾರದಲ್ಲಿ ಶಿಕ್ಷಣ ಇಲಾಖೆಯಿಂದ ಎಸ್​ಒಪಿ ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಲಾಗುತ್ತದೆ. ಆರೋಗ್ಯ ಇಲಾಖೆಯಿಂದಲೂ ಎಸ್​ಒಪಿ ಬರಬೇಕಿದೆ. ಅಧಿಕಾರಿಗಳೊಂದಿಗೆ ಮತ್ತೊಂದು ಸುತ್ತಿನ ಸಭೆ ನಡೆಸಿ ವರದಿ ನೀಡಲಾಗುತ್ತದೆ. ಬಳಿಕ ಶಿಕ್ಷಣ ಸಚಿವರು ಹಾಗೂ ಸರ್ಕಾರ ಯಾವ ನಿರ್ಧಾರ ಕೈಗೊಳ್ಳುತ್ತದೆ ಅನ್ನೋದನ್ನು ಕಾದು ನೋಡಬೇಕಿದೆ" ಎಂದು ಹೇಳಿದರು.

ABOUT THE AUTHOR

...view details