ಕರ್ನಾಟಕ

karnataka

ETV Bharat / state

ಸತತ 26 ಗಂಟೆಗಳ ಕಾಲ ಸ್ಯಾಕ್ಸೋಫೋನ್ ನುಡಿಸಿ ಗಿನ್ನಿಸ್​ ದಾಖಲೆ ಬರೆದ ಗರ್ಭಿಣಿ!

ಗರ್ಭಿಣಿಯೊಬ್ಬರು ಸತತ 26 ಗಂಟೆಗಳ ಕಾಲ ಸ್ಯಾಕ್ಸೋಫೋನ್​ ನುಡಿಸಿ ಗಿನ್ನಿಸ್​ ದಾಖಲೆ ನಿರ್ಮಿಸಿದ್ದಾರೆ.

ಸ್ಯಾಕ್ಸೋಪೋನ್ ನುಡಿಸಿ ಗಿನ್ನಿಸ್​ ದಾಖಲೆ ಬರೆದ ಗರ್ಭಿಣಿ
ಸ್ಯಾಕ್ಸೋಪೋನ್ ನುಡಿಸಿ ಗಿನ್ನಿಸ್​ ದಾಖಲೆ ಬರೆದ ಗರ್ಭಿಣಿ

By ETV Bharat Karnataka Team

Published : Sep 18, 2023, 2:07 PM IST

Updated : Sep 18, 2023, 4:53 PM IST

ಸ್ಯಾಕ್ಸೋಫೋನ್ ನುಡಿಸಿ ಗಿನ್ನಿಸ್​ ದಾಖಲೆ ಬರೆದ ಗರ್ಭಿಣಿ

ಹೊಸಕೋಟೆ (ಬೆಂಗಳೂರು): 7 ತಿಂಗಳ ಗರ್ಭಿಣಿ ಸತತ 26 ಗಂಟೆ ಸ್ಯಾಕ್ಸೋಫೋನ್‌ ನುಡಿಸಿ ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಮಾಡಿ ವಿಶೇಷ ಮನ್ನಣೆ ತನ್ನದಾಗಿಸಿಕೊಂಡಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ಸಮೀಪದ ಆವಲಹಳ್ಳಿ ನಿವಾಸಿ ಸುಬ್ಬಲಕ್ಷ್ಮೀ ಈ ಸಾಧಕಿ. ಕಳೆದ ಪೆಬ್ರವರಿಯಲ್ಲಿ ಇವರು ಆವಲಹಳ್ಳಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ 26 ಗಂಟೆ 23 ನಿಮಿಷ ಸ್ಯಾಕ್ಸೊಫೋನ್ ನುಡಿಸಿದ್ದಾರೆ. ಇಷ್ಟು ಸಮಯ ನಿರಂತರವಾಗಿ ಸ್ಯಾಕ್ಸೊಪೋನ್ ನುಡಿಸಿದ ಮೊದಲ ಮಹಿಳೆ ಅನ್ನೋ ಹೆಗ್ಗಳಿಕೆಯೂ ಇವರದ್ದಾಗಿದೆ. ಇದೀಗ ಅಪರೂಪದ ಸಾಧನೆಯನ್ನು ಗುರುತಿಸಿ ಪರಿಶೀಲನೆ ನಡೆಸಿದ ಗಿನ್ನಿಸ್ ರೆಕಾರ್ಡ್ ತಂಡ ಪ್ರಶಸ್ತಿ ನೀಡಿ ಗೌರವಿಸಿದೆ.

ಸುಬ್ಬಲಕ್ಷ್ಮೀ ಮೂರು ತಿಂಗಳ ಗರ್ಭಿಣಿಯಿದ್ದಾಗ 20 ಗಂಟೆಗಳ ಕಾಲ ಸ್ಯಾಕ್ಸೋಫೋನ್ ನುಡಿಸಿ ಗಿನ್ನಿಸ್ ದಾಖಲೆಯಿಂದ ವಂಚಿತರಾಗಿದ್ದರು. ಆದರೂ ಛಲ ಬಿಡದೆ 7 ತಿಂಗಳ ಗರ್ಭಿಣಿಯಿದ್ದಾಗ ಮತ್ತೊಮ್ಮೆ ಪ್ರಯತ್ನಿಸಿ 26 ಗಂಟೆ ನುಡಿಸಿದ್ದಾರೆ. ಈ ಮೂಲಕ ಸಾಧನೆಯ ಶಿಖರವನ್ನೇರಿದ್ದಾರೆ.

ಕನ್ನಡ, ಇಂಗ್ಲಿಷ್, ಹಿಂದಿ, ತೆಲುಗು ಸೇರಿದಂತೆ 109ಕ್ಕೂ ಅಧಿಕ ಭಾಷೆಗಳಲ್ಲಿ ಇವರು ಸ್ಯಾಕ್ಸೊಫೋನ್ ನುಡಿಸಬಲ್ಲರು. ಈಗಾಗಲೇ ದೇಶದ ವಿವಿಧೆಡೆ ಹಲವು ಕಾರ್ಯಕ್ರಮಗಳನ್ನು ನಡೆಸಿಕೊಟ್ಟು ಸೈ ಎನಿಸಿಕೊಂಡಿದ್ದಾರೆ.

ಸುಬ್ಬಲಕ್ಷ್ಮೀ ಮಾತನಾಡಿ, "13ನೇ ವಯಸ್ಸಿನಲ್ಲಿ ಸ್ಯಾಕ್ಸೋಫೋನ್​ ನುಡಿಸಲು ಆರಂಭಿಸಿದ್ದೆ. ಕಳೆದ 27 ವರ್ಷಗಳಿಂದಲೂ ನುಡಿಸುತ್ತಿದ್ದೇನೆ. 2023ರ ಫೆಬ್ರವರಿ 18ರಂದು ಶಿವರಾತ್ರಿ ದಿನ ನುಡಿಸಲು ಆರಂಭಿಸಿ ಫೆ.19ರ ವರೆಗೂ ನುಡಿಸಿ ಈ ಸಾಧನೆ ಮಾಡಿದ್ದೇನೆ. ಒಟ್ಟು 26.23 ಗಂಟೆಗಳ ಕಾಲ ಸ್ಯಾಕ್ಸಫೋನ್‌ ನುಡಿಸಿದ್ದೇನೆ. ಇದಕ್ಕಾಗಿ ಸತತ 5 ವರ್ಷಗಳಿಂದ ಪ್ರಯತ್ನಪಟ್ಟಿದ್ದೆ" ಎಂದು ಹೇಳಿದರು.

ಇದನ್ನೂ ಓದಿ:ಗಿನ್ನೆಸ್​​ ದಾಖಲೆ ಬರೆದ ಸೊಲ್ಲಾಪುರದ ಯುವಕ: ಇಂಡಿಯಾಸ್ ಗಾಟ್ ಟ್ಯಾಲೆಂಟ್‌ನಲ್ಲಿ ಚೀನಾ ಪ್ರಜೆಯ ವಿಶ್ವದಾಖಲೆ ಮುರಿದ ಆದಿತ್ಯ

Last Updated : Sep 18, 2023, 4:53 PM IST

ABOUT THE AUTHOR

...view details