ಬೆಂಗಳೂರು:ದುಡ್ಡು ಕೊಟ್ಟು ಜನರನ್ನು ಕರೆತಂದರೆ ಚುನಾವಣೆ ಗೆಲ್ಲಲು ಸಾಧ್ಯವಿಲ್ಲ, ಜಾತ್ಯಾತೀತ ಒಪ್ಪಿ ಇಂದು ಅದಕ್ಕೆ ವಿರುದ್ದ ನಿಲುವು ಹೊಂದಿದ ಪಕ್ಷವನ್ನು ಅಪ್ಪಿಕೊಂಡವರಿಂದ ನನಗೆ ಯಾವ ಆತಂಕವೂ ಇಲ್ಲ ಎಂದು ಹಾಸನ ಬಿಜೆಪಿ ಅಭ್ಯರ್ಥಿ ಎ.ಮಂಜು ವಿರುದ್ಧ ಜೆಡಿಎಸ್ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ವಾಗ್ದಾಳಿ ನಡೆಸಿದ್ದಾರೆ.
ಜೆಡಿಎಸ್ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ವಾಗ್ದಾಳಿ ಕೆಪಿಸಿಸಿ ಕಚೇರಿಗೆ ಭೇಟಿ ನೀಡಿದ ಪ್ರಜ್ವಲ್ ರೇವಣ್ಣ ಕಾಂಗ್ರೆಸ್ ನಾಯಕರನ್ನು ಭೇಟಿ ಮಾಡಿ ಚುನಾವಣೆಯಲ್ಲಿ ಸಹಕಾರ ನೀಡುವಂತೆ ಮನವಿ ಮಾಡಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರು ಬೇಕಾದರೂ ಸ್ಪರ್ಧೆ ಮಾಡಬಹುದು, ಅದರಂತೆ ಎ.ಮಂಜು ಕೂಡ ಹಾಸನದಿಂದ ಸ್ಪರ್ಧೆ ಮಾಡಿದ್ದಾರೆ. ಒಂದು ಕಡೆ ಸೆಕ್ಯೂಲರಿಸಂನ ಒಪ್ಪಿಕೊಂಡುನಾನ್ಸೆಕ್ಯುಲರಿಸಂ ಅನ್ನು ಅಪ್ಪಿಕೊಳ್ಳುತ್ತಾರೆ ಅಂದರೆ ರಾಜಕಾರಣದ ಬಣ್ಣ ಯಾವಾಗ ಬೇಕಾದರೂ ಬದಲಾಗಬಹುದು ಎಂದು ತೋರಿಸಿದ್ದಾರೆ ಎಂದು ಟೀಕಿಸಿದರು.
ಎ.ಮಂಜು ನಾಮಪತ್ರ ಸಲ್ಲಿಸುವ ವೇಳೆ ತೋರಿದ ಶಕ್ತಿ ಪ್ರದರ್ಶನದಿಂದ ನನಗೆ ಯಾವ ಆತಂಕವಾಗಿಲ್ಲ, ಯಾವುದೇ ಆತಂಕಕ್ಕೆ ಒಳಗಾಗುವ ಪ್ರಶ್ನೆಯೂ ಬರಲ್ಲ. ದುಡ್ಡುಕೊಟ್ಟುಜನರನ್ನು ಕರೆದುಕೊಂಡು ಬಂದರೆ ಚುನಾವಣೆ ಗೆಲ್ಲಕ್ಕಾಗಲ್ಲ, ಮತದಾರರು ಮನೆಯಲ್ಲಿದ್ದಾರೆ ಅವರು ಯಾರಿಗೆ ಮತಹಾಕಬೇಕು ಎಂದು ನಿರ್ಧರಿಸಿದ್ದಾರೆ. ಜನ ನನ್ನ ಪರ ಒಲವು ಹೊಂದಿದ್ದಾರೆ, ನಾನು ಜನ ಸೇವೆ ಮಾಡಲು ಸಿದ್ದನಿದ್ದೇನೆ ಎಂದು ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದರು.
ಹಾಸನದಲ್ಲಿ ಕಾಂಗ್ರೆಸ್ ಪಕ್ಷದ ಬಂಡಾಯವಿಲ್ಲ, ಎಲ್ಲರೂ ಚುನಾವಣಾ ಕಾರ್ಯದಲ್ಲಿ ತೊಡಗಿಕೊಳ್ಳುತ್ತಿದ್ದಾರೆ, ಆದರೆ ಅಸಮಧಾನ ಇರುವುದುಬಿಜೆಪಿಯಲ್ಲಿಯೇ, ಅಲ್ಲಿ ಅಸಮಧಾನಗೊಂಡು 300-400 ಪದಾಧಿಕಾರಿಗಳು ಜೆಡಿಎಸ್ಗೆ ಬರಲಿದ್ದಾರೆ ಎಂದರು.
ಮಂಡ್ಯಕ್ಕೆ ದೇವೇಗೌಡ, ಕುಮಾರಸ್ವಾಮಿ ಕೊಡುಗೆ ಇದೆ.ನಿಖಿಲ್ ಕೂಡ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗಲಿದ್ದಾನೆ. ಅಲ್ಲಿಯೂ ಕೂಡ ಒಳ್ಳೆಯ ಫಲಿತಾಂಶ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.