ಬೆಂಗಳೂರು:ಮಹಿಳೆ ಜೊತೆ ಪೊಲೀಸರೊಬ್ಬರು ಅಸಭ್ಯ ವರ್ತನೆ ತೋರಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಬಿಎಂಟಿಸಿ ಬಸ್ನಲ್ಲಿ ಕಾಡುಗೋಡಿ ಠಾಣೆ ಪೊಲೀಸ್ ಸಂಚರಿಸುತ್ತಿದ್ದ ವೇಳೆ, ಮುಂದಿನ ಸೀಟಿನಲ್ಲಿ ಮಹಿಳೆ ಕೂತಿದ್ದಳು. ಹಿಂದಿನ ಸೀಟ್ನಲ್ಲಿ ಕುಳಿತ್ತಿದ್ದ ಪೊಲೀಸಪ್ಪ ಸೊಂಟ ಮುಟ್ಟಿದ್ದಾನೆ ಎಂದು ಮಹಿಳೆ ಆರೋಪ ಮಾಡಿದ್ದಾರೆ.
ಪೊಲೀಸಪ್ಪ ಸೊಂಟ ಮುಟ್ಟುತ್ತಿದ್ದ ಹಾಗೆ ಮಹಿಳೆ ಕಿರುಚಿದ್ದಾಳೆ. ಇದರಿಂದ ಕುಪಿತಗೊಂಡ ಮಹಿಳೆ ಪೊಲೀಸಪ್ಪನನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡು, ಬೈದಿದ್ದಾಳೆ. ಹಾಗೆ ಪೊಲೀಸ್ ಸ್ಟೇಷನ್ಗೆ ನಡಿಯಪ್ಪ ಅಂತಿದ್ದಂತೆ ಆತ ಬಸ್ನಿಂದ ಕೆಳಗೆ ಇಳಿದು ಪರಾರಿಯಾಗಿದ್ದಾನೆ.
ಇನ್ನು ಮಹಿಳೆ ತರಾಟೆ ತೆಗೆದುಕೊಳ್ಳೋ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗಿದ್ದು, ಈ ಸಂಬಂಧ ಹಿರಿಯ ಅಧಿಕಾರಿಗಳು ತನಿಖೆ ಮುಂದುವರೆಸಿದ್ದಾರೆ.