ಕರ್ನಾಟಕ

karnataka

ETV Bharat / state

ಬಿಬಿಎಂಪಿ ಕಸದ ವಿರುದ್ಧ ಹೋರಾಟಕ್ಕಿಳಿದಿದ್ದ ಸಾರಥಿ ಸತ್ಯಪ್ರಕಾಶ್ ವಶಕ್ಕೆ ಪಡೆದ ಪೊಲೀಸ್​ - ದೊಡ್ಡಬಳ್ಳಾಪುರ ಟುಡೆ ನ್ಯೂಸ್

ದೊಡ್ಡಬಳ್ಳಾಪುರ ತಾಲೂಕಿನ ಚಿಗರೇನಹಳ್ಳಿಯಲ್ಲಿ ಎಂಎಸ್ ಜೆಪಿ ಘಟಕದಲ್ಲಿ ಬಿಬಿಎಂಪಿ ಕಸ ಸುರಿಯುತ್ತಿದ್ದು, ಕಸದಿಂದ ರೋಸಿ ಕಳೆದ 12 ದಿನಗಳಿಂದ ಗ್ರಾಮಸ್ಥರು ಪ್ರತಿಭಟನೆ ನಡೆಸುತ್ತಿದ್ದಾರೆ. ಇಂದು ಪೊಲೀಸರು ಹೋರಾಟದ ನೇತೃತ್ವ ವಹಿಸಿದ್ದ ಸಾರಥಿ ಸತ್ಯಪ್ರಕಾಶ್​ರನ್ನು ವಶಕ್ಕೆ ಪಡೆದಿದ್ದಾರೆ.

Police take custody protest person satya prakash
ಹೋರಾಟಕ್ಕಿಳಿದ್ದಿದ್ದ ಸಾರಥಿ ಸತ್ಯಪ್ರಕಾಶ್ ವಶಕ್ಕೆ ಪಡೆದ ಪೊಲೀಸ್​

By

Published : Dec 5, 2021, 10:56 PM IST

ದೊಡ್ಡಬಳ್ಳಾಪುರ : ಬಿಬಿಎಂಪಿ ಕಸದ ವಿರುದ್ಧ ಕಳೆದ 12 ದಿನಗಳಿಂದ ಹೋರಾಟ ನಡೆಯುತ್ತಿದ್ದು, ಹೋರಾಟವನ್ನು ಹಂತ-ಹಂತವಾಗಿ ಹತ್ತಿಕ್ಕುವ ಪ್ರಯತ್ನದಲ್ಲಿದ್ದಾರೆ ಎನ್ನಲಾಗ್ತಿರುವ ಪೊಲೀಸರು, ಹೋರಾಟದ ನೇತೃತ್ವ ವಹಿಸಿದ್ದ ಸಾರಥಿ ಸತ್ಯಪ್ರಕಾಶ್​ರನ್ನು ವಶಕ್ಕೆ ಪಡೆದಿದ್ದಾರೆ.

ತಾಲೂಕಿನ ಚಿಗರೇನಹಳ್ಳಿಯಲ್ಲಿ ಎಂಎಸ್ ಜೆಪಿ ಘಟಕದಲ್ಲಿ ಬಿಬಿಎಂಪಿ ಕಸ ಸುರಿಯುತ್ತಿದ್ದು, ಕಸದಿಂದ ರೋಸಿ ಹೋಗಿರುವ 4 ಪಂಚಾಯಿತಿ ಸದಸ್ಯರು ಮತ್ತು ಗ್ರಾಮಸ್ಥರು ಕಳೆದ 12 ದಿನಗಳಿಂದ ಧರಣಿ ನಡೆಸುತ್ತಿದ್ದಾರೆ. ಶನಿವಾರ ಪ್ರತಿಭಟನಾ ಸ್ಥಳಕ್ಕೆ ಬಂದ 300 ಪೊಲೀಸರು 50ಕ್ಕೂ ಹೆಚ್ಚು ಹೋರಾಟಗಾರರನ್ನು ಬಂಧಿಸಿ ರಾಜಾನುಕುಂಟೆಯ ಖಾಸಗಿ ಕಲ್ಯಾಣ ಮಂಟಪದಲ್ಲಿಟ್ಟು, ಒಮಿಕ್ರಾನ್ ವೈರಸ್ ನೆಪ ಹೇಳಿ ಪ್ರತಿಭಟನೆ ಮಾಡದಂತೆ ಹೋರಾಟಗಾರರನ್ನು ಕಳುಹಿಸಿದ್ದರು.

ಆದರೆ ಎಂಎಸ್ ಜೆಪಿ ಘಟಕವನ್ನು ಮುಚ್ಚುವವರೆಗೂ ಹೋರಾಟದಿಂದ ಹಿಂದೆ ಸರಿಯುವುದಿಲ್ಲ ಎಂದು ಪ್ರತಿಭಟನಾಗಾರರು ಇಂದು ಬೆಳಗ್ಗೆ ತಣ್ಣೀರಹಳ್ಳಿಯಲ್ಲಿ ಧರಣಿ ಮುಂದುವರೆಸಿದ್ದರು. ಧರಣಿ ಸ್ಥಳಕ್ಕೆ ಬಂದ ಭಕ್ತರಹಳ್ಳಿ ಗ್ರಾಪಂ ಅಧ್ಯಕ್ಷ ಸಿದ್ದಲಿಂಗಯ್ಯ, ಪಂಚಾಯಿತಿ ಸದಸ್ಯ ಗಂಗಹನುಮಯ್ಯರನ್ನು ಪೊಲೀಸರು ಬಂಧಿಸಿ ಅಜ್ಞಾತ ಸ್ಥಳದಲ್ಲಿಟ್ಟಿದ್ದಾರೆ ಎನ್ನಲಾಗುತ್ತಿದೆ.

ಈ ಹಿನ್ನೆಲೆಯಲ್ಲಿ ಪೊಲೀಸ್ ಅಧಿಕಾರಿಗಳನ್ನು ಭೇಟಿ ಮಾಡಿ ಸಿದ್ದಲಿಂಗಯ್ಯವರ ಬಗ್ಗೆ ಮಾಹಿತಿ ಕೇಳಲು ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆಗೆ ಸಾರಥಿ ಸತ್ಯ ಪ್ರಕಾಶ್ ತೆರಳಿದ್ದರು. ಈ ವೇಳೆ ಬಲವಂತದಿಂದ ಪ್ರಕಾಶ್ ಮತ್ತು ಜಿ.ಎನ್​.ಪ್ರದೀಪ್ ಎಂಬುವರನ್ನು ಪೊಲೀಸರು ಬಂಧಿಸಿ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ ಎಂದು ಹೇಳಲಾಗ್ತಿದೆ.

ಇದನ್ನೂ ಓದಿ: ರಾಜ್ಯದಲ್ಲಿ ಒಬ್ಬ, ಇಬ್ಬರಿಂದ ಕಾಂಗ್ರೆಸ್ ಉಸಿರಾಡುತ್ತಿದೆ, ಅದನ್ನು ನಿಲ್ಲಿಸುತ್ತೇನೆ : ಯಡಿಯೂರಪ್ಪ ಗುಡುಗು

ABOUT THE AUTHOR

...view details