ಕರ್ನಾಟಕ

karnataka

ETV Bharat / state

ಪೊಲೀಸ್ ಕ್ವಾಟ್ರಸ್​​​​ನಲ್ಲಿ ರಾಸಲೀಲೆ ಪ್ರಕರಣ... ಯುವತಿ - ಆಕೆಯ ಪ್ರಿಯಕರ ಅರೆಸ್ಟ್​​​! - ಪೊಲೀಸ್ ಕ್ವಾಟ್ರಸ್

ಆರೋಪಿಗಳಾದ ಓರ್ವ ಯುವತಿ ಹಾಗೂ ಆಕೆಯ ಪ್ರಿಯಕರ ಸುನೀಲ್ ಬಂಧಿತ ಆರೋಪಿಗಳು. ಆರೋಪಿ ಯುವತಿ ಕಳೆದ ಆರು ತಿಂಗಳ ಹಿಂದೆ ವಿಜಯಪುರ ಮೂಲದ ಪೇದೆ ಮಹಾದೇವ್​​​​​ಗೆ ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾಗಿದ್ದಳು. ಆದ್ರೆ ಈಕೆ ಹಣದ ಆಸೆಗಾಗಿ ಮಹಾದೇವ್​​​ನನ್ನ ಪ್ರೀತಿಸುವ ನಾಟಕವಾಡಿ ಪರಸ್ಪರ ಒಪ್ಪಿ ಲೈಂಗಿಕ ಸಂಬಂಧ ಸಹ ಹೊಂದಿದ್ದರು

ಬಂಧನ

By

Published : Mar 14, 2019, 5:30 PM IST

ಬೆಂಗಳೂರು: ವಿಜಯಪುರ ಮೂಲದ ಪೊಲೀಸ್ ಪೇದೆಗೆ ಬೆದರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹನಿಟ್ರ್ಯಾಪ್ ಮಾದರಿಯಲ್ಲಿ ಬೆದರಿಸಿ ಸುಲಿಗೆಗೆ ಯತ್ನ ಮಾಡಿದ ಆರೋಪಿಗಳನ್ನ ಕಾಟನ್ ಪೇಟೆ ಪೊಲೀಸರು ಇಬ್ಬರು ಆರೋಪಿಗಳ ಬಂಧನ ಮಾಡಿದ್ದಾರೆ.

ಆರೋಪಿಗಳಾದ ಓರ್ವ ಯುವತಿ ಹಾಗೂ ಆಕೆಯ ಪ್ರಿಯಕರ ಸುನಿಲ್ ಬಂಧಿತ ಆರೋಪಿಗಳು. ಆರೋಪಿ ಯುವತಿ ಕಳೆದ ಆರು ತಿಂಗಳ ಹಿಂದೆ ವಿಜಯಪುರ ಮೂಲದ ಪೇದೆ ಮಹಾದೇವ್​​​​​ಗೆ ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾಗಿದ್ದಳು. ಆದ್ರೆ, ಈಕೆ ಹಣದ ಆಸೆಗಾಗಿ ಮಹಾದೇವ್​​​ನನ್ನ ಪ್ರೀತಿಸುವ ನಾಟಕವಾಡಿ ಪರಸ್ಪರ ಒಪ್ಪಿ ಲೈಂಗಿಕ ಸಂಬಂಧ ಸಹ ಹೊಂದಿದ್ದರು.

ಆದರೆ, ಆರೋಪಿ ಯುವತಿ, ಸುನಿಲ್ ಎಂಬ ಮತ್ತೊಬ್ಬ ಯುವಕನೊಂದಿಗೂ ಕೂಡ ಸಂಬಂಧ ಹೊಂದಿದ್ದು, ಆತನನ್ನು ಪ್ರಾಮಾಣಿಕವಾಗಿ ಲವ್ ಮಾಡುತ್ತಿದ್ದಳು ಎನ್ನಲಾಗಿದೆ. ಆದರೆ ಪೇದೆ ಮಹಾದೇವ್​​ನಿಂದ ಹಣ ಪಡೆದು ಮಜಾ ಮಾಡುತ್ತಿದ್ದಳು ಎನ್ನಲಾಗಿದೆ.

ಇತ್ತೀಚೆಗೆ ಯುವತಿ ಮಹಾದೇವನನ್ನು ವಿಜಯಪುರದಿಂದ ಬೆಂಗಳೂರಿಗೆ ಕರೆಸಿದ್ದಳು. ಈ ವೇಳೆ ಮಹಾದೇವ್ ಮೈಸೂರು ರೋಡ್​ನ ಸ್ನೇಹಿತನ ಪೊಲೀಸ್ ಕ್ವಾಟ್ರಸ್​​ನಲ್ಲಿ ಯುವತಿಯನ್ನ ಭೇಟಿಯಾಗಿದ್ದ. ಈ ವೇಳೆ ಒಂದು ಲಕ್ಷ ಹಣ ನೀಡುವಂತೆ ಬೇಡಿಕೆ ಇಟ್ಟಿದ್ದಾಳೆ. ಮಹಾದೇವ್ ಕೊಡಲು ಆಗುವುದಿಲ್ಲ ಎಂದಿದ್ದಾನೆ. ಆಗ ಮಹಾದೇವ್ ತನ್ನ ಮೇಲೆ ಅತ್ಯಾಚಾರಕ್ಕೆ ಯತ್ನಿಸುತ್ತಿದ್ದಾನೆ ಎಂದು ಪ್ರಿಯಕರ ಸುನಿಲ್​​ಗೆ ಸಂದೇಶ ರವಾನಿಸಿ ಲೊಕೇಶನ್ ಸಹ ಶೇರ್ ಮಾಡಿದ್ದಳು.

ಪ್ರಿಯಕರ ಕಾಟನ್ ಪೇಟೆ ಪೊಲೀಸರೊಂದಿಗೆ ಅವರಿದ್ದ ರೂಮ್​ಗೆ ಬಂದಾಗ ಇಬ್ರು ನಗ್ನವಾಗಿ ಸಿಕ್ಕಿಬಿದ್ದಿದ್ದರು. ಕಾಟನ್ ಪೇಟೆ ಠಾಣೆಗೆ ಕರೆತಂದಾಗ ಯುವತಿ ಹಾಗೂ ಸುನಿಲ್ ದುಡ್ಡು ಮಾಡುವ ಉದ್ದೇಶದಿಂದ ಪೇದೆ ಮಹಾದೇವ್​ಗೆ ವಂಚನೆ ಮಾಡಿರುವ ವಿಚಾರ ಬಯಲಾಗಿದೆ. ಮತ್ತೊಂದೆಡೆ ಕಾಟನ್ ಪೇಟೆ ಪೊಲಿಸರು ಪೇದೆ ಮಹಾದೇವ್​ಗೆ ಎಚ್ಚರಿಕೆ ನೀಡಿದ್ದಾರೆ.

ABOUT THE AUTHOR

...view details