ಬೆಂಗಳೂರು:ರಾಜ್ಯದಲ್ಲಿ ಬಿಟ್ ಕಾಯಿನ್ ಪ್ರಕರಣ (Bitcoin case) ಭಾರಿ ಚರ್ಚೆಯಾಗುತ್ತಿರುವಾಗಲೇ, ವಂಚನೆ ಜಾಲದ ಪ್ರಮುಖ ಆರೋಪಿ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ (Bitcoin case accused) ವಿಚಾರಣೆ ವೇಳೆ ಪೊಲೀಸರಿಗೇ ಚಳ್ಳೆಹಣ್ಣು ತಿನ್ನಿಸಿರುವುದು ಬೆಳಕಿಗೆ ಬಂದಿದೆ.
ಸರ್ಕಾರಿ ಹಾಗೂ ಖಾಸಗಿ ವೆಬ್‌ಸೈಟ್ ಹ್ಯಾಕ್ (website hack) ಮಾಡಿ ಕೋಟ್ಯಂತರ ರೂ. ವಂಚಿಸಿ ಡ್ರಗ್ಸ್ ಪ್ರಕರಣದಲ್ಲಿ (drugs case) ಸಿಸಿಬಿ ಪೊಲೀಸರಿಂದ ಬಂಧನಕ್ಕೊಳಗಾಗಿದ್ದ ಶ್ರೀಕಿಯು ಖಾಕಿ ಪಡೆಯನ್ನೇ ಯಾಮಾರಿಸುವ ನೈಪುಣ್ಯ ತೋರಿದ್ದ. ಡ್ರಗ್ಸ್ ಕೇಸ್ ವಿಚಾರಣೆ ವೇಳೆ ಶ್ರೀಕಿ ಬಿಟ್ ಕಾಯಿನ್ ದಂಧೆಯಲ್ಲಿ(Bitcoin fraud case) ಭಾಗಿಯಾಗಿರುವುದು ತಿಳಿದುಬಂದಿತ್ತು.
ಶ್ರೀಕಿಯ ಡಿಜಿಟಲ್ ಬಿಟ್ ಕಾಯಿನ್ ಅಕೌಂಟ್ ಪರಿಶೀಲಿಸಿದಾಗ 9 ಕೋಟಿ ರೂಪಾಯಿ ಮೌಲ್ಯದ 31 ಬಿಟ್ ಕಾಯಿನ್ ಪತ್ತೆ ಹಚ್ಚಿರುವುದಾಗಿ ಸಿಸಿಬಿ ಪೊಲೀಸರು ಮಾಧ್ಯಮಗಳು ಹಾಗೂ ಕೋರ್ಟ್ಗಳ ಮುಂದೆ ತಿಳಿಸಿದ್ದರು. ಬಳಿಕ ರಿಕವರಿ ಪ್ರಕ್ರಿಯೆಗೆ ಸಿಸಿಬಿ ಮುಂದಾಗಿತ್ತು. ಮೂರು ದಿನಗಳ ಬಳಿಕ ನುರಿತ ಸೈಬರ್ ಅಧಿಕಾರಿ ಸಮೇತ ಡಿಜಿಟಲ್ ರಿಕವರಿಗೆ ತಯಾರಿ ನಡೆದಿತ್ತು. ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ನ ಸೈಬರ್ ತಜ್ಞರು ಹಾಗೂ ವಾಣಿಜ್ಯ ಇಲಾಖೆಯ ಹೆಚ್ಚುವರಿ ಡೈರೆಕ್ಟರ್ವೊಬ್ಬರು ಸೇರಿದಂತೆ ನುರಿತರಿಂದ ಪ್ರಕ್ರಿಯೆ ಶುರುವಾಗಿತ್ತು.
ಡಿಜಿಟಲ್ ಕರೆನ್ಸಿ ಕಂಡು ಪೊಲೀಸರು ದಂಗು:
ಈ ಹಂತದಲ್ಲಿ ಆರೋಪಿ ಶ್ರೀಕಿಗೆ (Bitcoin accused shrikrishna) ಬಿಟ್ ಕಾಯಿನ್ ಖಾತೆ ತೆರೆಯುವಂತೆ ಸೂಚಿಸಿದಾಗ ನಾನಾ ಸಬೂಬು ಹೇಳಿ ಮೂರು ದಿನಗಳ ಕಾಲ ಆಟವಾಡಿಸಿದ್ದನಂತೆ. ಬಳಿಕ ತನಿಖಾಧಿಕಾರಿಗಳ ತಾಕೀತಿನಂತೆ ಕೊನೆಗೂ ಬಿಟ್ ಕಾಯಿನ್ ಖಾತೆ ತೆರೆದಿದ್ದಾನೆ. ಖಾತೆಯಲ್ಲಿ 31 ಬಿಟ್ ಕಾಯಿನ್ ಬದಲಿಗೆ 186 ಬಿಟ್ ಕಾಯಿನ್ ಇರುವುದನ್ನು ಕಂಡ ಪೊಲೀಸರು ಶಾಕ್ ಆಗಿದ್ದಾರೆ.
ಅಕೌಂಟ್ ಹೋಲ್ಡರ್ ಜೈಲಿನಲ್ಲಿದ್ದರೂ ಉಳಿದ ಬಿಟ್ ಕಾಯಿನ್ಗಳು ಎಲ್ಲಿಂದ ಬಂತು? ಖಾತೆಗೆ (Bitcoin account) ಹಣ ಬಂದಿದ್ದು ಹೇಗೆ? ಬೇರೆ ಯಾರಾದರೂ ಹಾಕಿದ್ದಾರಾ? ಎಂಬುದರ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಈ ವೇಳೆ ಶ್ರೀಕೃಷ್ಣನ ಮತ್ತೊಂದು ಅವತಾರ ಬಯಲಾಗಿದ್ದು, ಆತ ತನ್ನ ಖಾತೆ ಬದಲಿಗೆ ಟ್ರೇಡ್ ಎಕ್ಸ್ ಚೇಂಜ್ ಅಕೌಂಟ್ ತೋರಿಸಿ ಯಾಮಾರಿಸಿದ್ದ ಎನ್ನಲಾಗ್ತಿದೆ. ಯಾರದ್ದೋ ಅಕೌಂಟ್ ಹ್ಯಾಕ್ ಮಾಡಿ ಅದು ತನ್ನದು ಎಂದಿದ್ದ. ಶ್ರೀಕೃಷ್ಣನ ಹೇಳಿಕೆಗಳ ಬಳಿಕ ಆದ ಪ್ರಕ್ರಿಯೆಗಳ ಕುರಿತಂತೆ ಪೊಲೀಸರು ಕೊರ್ಟ್ಗೆ ಮಾಹಿತಿ ಸಲ್ಲಿಸಿದ್ದರು.
ಚಿನ್ನದ ಮೊಟ್ಟೆಯಂತಿದ್ದ ಶ್ರೀಕಿ: