ಬೆಂಗಳೂರು: ವಾಹನ ಸವಾರರೊಬ್ಬರ ವಾಹನ ತಡೆದು ದಂಡ ಹಾಕಲು ಮುಂದಾಗಿದ್ದಕ್ಕೆ ಇನ್ಸ್ಪೆಕ್ಟರ್ವೊಬ್ಬರು ಎಎಸ್ಐಗೆ ಆವಾಜ್ ಹಾಕಿದ ಆಡಿಯೋ ವೈರಲ್ ಆಗಿದೆ. ಟ್ರಾಫಿಕ್ ಎಎಸ್ಐ ವೆಂಕಟೇಶ್ ಹಾಗೂ ಏರ್‌ಪೋರ್ಟ್ ಇನ್ಸ್ಪೆಕ್ಟರ್ ಮುತ್ತುರಾಜ ಮಧ್ಯೆ ಫೋನ್ನಲ್ಲಿ ವಾಗ್ವಾದ ಉಂಟಾಗಿದೆ.
41 ಸಾವಿರ ರೂ ದಂಡ ಬಾಕಿ ಉಳಿಸಿಕೊಂಡಿದ್ದ ವಾಹನ ಸವಾರನನ್ನು ಟ್ರಾಫಿಕ್ ಎಎಸ್ಐ ವೆಂಕಟೇಶ್ ಎಂಬುವರು ತಡೆದು ದಂಡ ಹಾಕಲು ಮುಂದಾಗಿದ್ದರು. ಆಗ ಏರ್‌ಪೋರ್ಟ್ ಇನ್ಸ್ಪೆಕ್ಟರ್ ಮುತ್ತುರಾಜು ಅವರು ಎಎಸ್ಐಗೆ ಫೋನ್ ಮಾಡಿ ಆವಾಜ್ ಹಾಕಿದ್ದಾರೆ ಎನ್ನಲಾಗಿದೆ.