ಬೆಂಗಳೂರು : ದಾಖಲೆ ಕೇಳಿದ ಪೋಲೀಸರ ಮೇಲೆ ಎಗರಾಡಿದ ಆಟೋ ಚಾಲಕನ ದೃಶ್ಯ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ದಾಖಲೆ ಕೇಳಿದ್ದಕ್ಕಾಗಿ ಪೊಲೀಸರ ಮೇಲೆ ಎಗರಾಡಿದ ಆಟೋ ಚಾಲಕ...ರಸ್ತೆಯಲ್ಲಿ ಹುಲಿ, ಸ್ಟೇಷನ್ ನಲ್ಲಿ ಇಲಿ - Kannada news
ದಾಖಲೆ ಕೇಳಿದ ಪೋಲೀಸರ ಮೇಲೆ ಎಗರಾಡಿದ ಆಟೋ ಚಾಲಕ ಸ್ಟೇಷನ್ನಲ್ಲಿ ಬಿಟ್ಟುಬಿಡಿ ಕಾಲಿಗೆ ಬೀಳ್ತೀನಿ ಎಂದು ಗೋಳಾಡಿದ ದೃಶ್ಯ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಆಟೋ ಚಾಲಕನಿಗೆ ದಾಖಲೆ ಕೇಳಿದ ಪೊಲೀಸರು
ಪೊಲೀಸರು ಆಟೋ ಚಾಲಕನನ್ನು ನಿಲ್ಲಿಸಿ ಡಿ ಎಲ್ ಕೇಳಿದ್ದಾರೆ. ಈ ವೇಳೆ ರೊಚ್ಚಿಗೆದ್ದ ಚಾಲಕ ಈಗ ನನ್ನ ಹತ್ತಿರ ದಾಖಲೆ ಇಲ್ಲ. ನನ್ನ ಸ್ನೇಹಿತ ತೆಗೆದುಕೊಂಡು ಹೋಗಿದ್ದಾನೆ ಎಂದು ಎಗರಾಡಿದ್ದಾನೆ. ಅದಕ್ಕೆ ಪೊಲೀಸರು ಸ್ಥಳಕ್ಕೆ ಹೊಯ್ಸಳ ಕರೆಸಿ ಆಟೋ ಚಾಲಕನನ್ನ ವಶಕ್ಕೆ ಪಡೆದಿದ್ದಾರೆ. ಆದ್ರೆ ಸ್ಟೇಷನ್ಗೆ ಹೋದ ನಂತರ ಆಟೋ ಚಾಲಕ ಟೋನ್ ಬದಲಿಸಿ ವಿನಂಮ್ರನಾಗಿ ಕಾಲಿಗಿ ಬೀಳುತ್ತೇನೆ. ಬಿಟ್ಟು ಬಿಡಿ ಎಂದು ಬೇಡಿದ್ದಾನೆ. ಇನ್ನು ಈ ದೃಶ್ಯ ಸಾಮಾಜಿಕ ಜಾಲತಾಣದಲ್ಕಿ ವೈರಲ್ ಆಗಿದೆ.