ರಾಜ್ಯದಲ್ಲಿ ಕೋವಿಡ್ಗೆ ಬಲಿಯಾಗುತ್ತಿರುವವರ ಪ್ರಮಾಣ ಶೇ.1.56: ಸಚಿವ ಸುಧಾಕರ್ - ಸಚಿವ ಸುಧಾಕರ್ ಕೊರೊನಾ ಸುದ್ದಿ
ಕೊರೊನಾ ಸೋಂಕಿತರ ಮರಣದ ಪ್ರಮಾಣ ದೇಶಕ್ಕೆ ಹೋಲಿಸಿದರೆ ರಾಜ್ಯದಲ್ಲಿ ಕಡಿಮೆ ಇದೆ. ದೇಶದಲ್ಲಿ ಒಟ್ಟಾರೆ ಕೊರೊನಾ ಸೋಂಕಿತರ ಪ್ರಮಾಣ ಶೇ.3 ಆಗಿದ್ದರೆ ಕರ್ನಾಟಕದ ಪ್ರಮಾಣ ಶೇ.1.56 ಮಾತ್ರ ಎಂದು ಸಚಿವ ಡಾ.ಸುಧಾಕರ್ ತಿಳಿಸಿದ್ದಾರೆ.
ಬೆಂಗಳೂರು: ಕೋವಿಡ್-19ಗೆ ಬಲಿಯಾಗುತ್ತಿರುವವರ ಪ್ರಮಾಣ ದೇಶದಲ್ಲಿ ಶೇ.3 ರಷ್ಟು ಇದ್ದರೆ, ನಮ್ಮ ರಾಜ್ಯದಲ್ಲಿ ಸಾವಿನ ಪ್ರಮಾಣ ಶೇ.1.56 ಮಾತ್ರ ಆಗಿದೆ. ಕೊರೊನಾ ನಿಯಂತ್ರಣದಲ್ಲಿ ರಾಜ್ಯ ಸಾಕಷ್ಟು ಮುಂದಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ತಿಳಿಸಿದ್ದಾರೆ.
ಕರ್ನಾಟಕದಲ್ಲಿ ಕೊರೊನಾ ಸೋಂಕಿನಿಂದ ಗುಣಮುಖರಾದವರ ಪ್ರಮಾಣ ಶೇ.57 ಆಗಿದೆ. ಒಟ್ಟು ಸೋಂಕಿತರಲ್ಲಿ 7,507 ಜನ ಗುಣಮುಖರಾಗಿದ್ದು, 5,472 ಸಕ್ರಿಯ ಪ್ರಕರಣಗಳಿವೆ. ಇಲ್ಲಿಯವರೆಗೆ 5,95,470 ಜನರ ಕೊರೊನಾ ಪರೀಕ್ಷೆ ಮಾಡಿದ್ದು ಇದರಲ್ಲಿ 5,66,543 ಜನರಿಗೆ ನೆಗೆಟಿವ್ ಎಂದು ವರದಿ ಬಂದಿದೆ. ಪರೀಕ್ಷೆ ನಡೆಸಿದವರಲ್ಲಿ ಪಾಸಿಟಿವ್ ಬಂದವರ ಪ್ರಮಾಣ ಶೇ.2.21 ಮಾತ್ರ. ಕೊರೊನಾ ಸೋಂಕಿತರ ಮರಣದ ಪ್ರಮಾಣವೂ ದೇಶಕ್ಕೆ ಹೋಲಿಸಿದರೆ ಕಡಿಮೆ ಇದೆ. ದೇಶದಲ್ಲಿ ಒಟ್ಟಾರೆ ಕೊರೊನಾ ಸೋಂಕಿತರ ಪ್ರಮಾಣ ಶೇ.3 ಆಗಿದ್ದರೆ ಕರ್ನಾಟಕದ ಪ್ರಮಾಣ ಶೇ.1.56 ಮಾತ್ರ ಎಂದು ಸುಧಾಕರ್ ಟ್ವೀಟ್ ಮಾಡಿದ್ದಾರೆ.