ಕರ್ನಾಟಕ

karnataka

ETV Bharat / state

ಮುನಿರತ್ನ ಮತದಾರರಲ್ಲಿ ಭೀತಿ ಹುಟ್ಟಿಸುತ್ತಿದ್ದಾರೆ; ಡಿಕೆ ಸುರೇಶ್ - Rajarajeshwari Nagar by-poll 2020

ರಾಜರಾಜೇಶ್ವರಿ ನಗರದಲ್ಲಿ ಜನ ತುಂಬಾ ಭಯದಲ್ಲಿದ್ದಾರೆ. ಕ್ರೇತ್ರದಲ್ಲಿ ಮುಕ್ತ ವಾತಾವರಣ ಇಲ್ಲದಾಗಿದೆ. ಮತ ಹಾಕದಿದ್ದರೆ ಸುಮ್ಮನಿರಲ್ಲ ಅನ್ನುತ್ತಿದ್ದಾರೆ. ಕಳೆದ ಬಾರಿಯೂ ವೋಟರ್ ಐಡಿ ಸಂಗ್ರಹಿಸಿ ಅಕ್ರಮ ಎಸಗಿದ್ದಾರೆ. ಕೋರ್ಟ್​ನಲ್ಲಿ ಅವರ ವಿರುದ್ಧ ಕೇಸ್ ಇನ್ನೂ ಇದೆ. ಇದರ ಬಗ್ಗೆ ಚುನಾವಣೆ ಆಯೋಗಕ್ಕೆ ತಿಳಿಸಿದ್ದೇವೆ.‌

People Are Scared In Rajarajeshwari Nagar : DK Suresh allegation
ಸಂಸದ ಡಿಕೆ ಸುರೇಶ್

By

Published : Oct 26, 2020, 5:31 PM IST

Updated : Oct 26, 2020, 6:12 PM IST

ಬೆಂಗಳೂರು : ರಾಜರಾಜೇಶ್ವರಿನಗರದಲ್ಲಿ ಶಾಂತಿ ಕದಡುವ ಕೆಲಸ ನಡೆಯುತ್ತಿದೆ. ಜನರಲ್ಲಿ ಭಯಭೀತಿ ಮೂಡಿಸುವ ಕಾರ್ಯ ಮಾಡುತ್ತಿದ್ದಾರೆ ಎಂದು ಬಿಜೆಪಿ ಅಭ್ಯರ್ಥಿ ಮುನಿರತ್ನ ವಿರುದ್ಧ ಸಂಸದ ಡಿಕೆ ಸುರೇಶ್ ಆರೋಪಿಸಿದ್ದಾರೆ.

ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಜನರನ್ನು ಭಯಭೀತಗೊಳಿಸೋದು ಮುನಿರತ್ನ ಅವರ ಹವ್ಯಾಸ. ಜನ ಮತಗಟ್ಟೆಗೆ ಬರೋದನ್ನು ಈ ಮೂಲಕ ತಡೆಯುತ್ತಿದ್ದಾರೆ. ಕೊಲೆಗಳಾಗುತ್ತವೆ ಎಂದು ಮತದಾರರಲ್ಲಿ ಹೆದರಿಸುತ್ತಿದ್ದಾರೆ. ಜನ ತುಂಬಾ ಭಯದಲ್ಲಿದ್ದಾರೆ. ಕ್ರೇತ್ರದಲ್ಲಿ ಮುಕ್ತ ವಾತಾವರಣ ಇಲ್ಲದಾಗಿದೆ. ಮತ ಹಾಕದಿದ್ದರೆ ಸುಮ್ಮನಿರಲ್ಲ ಅನ್ನುತ್ತಿದ್ದಾರೆ. ಕಳೆದ ಬಾರಿಯೂ ವೋಟರ್ ಐಡಿ ಸಂಗ್ರಹಿಸಿ ಅಕ್ರಮ ಎಸಗಿದ್ದಾರೆ. ಕೋರ್ಟ್​ನಲ್ಲಿ ಅವರ ವಿರುದ್ಧ ಕೇಸ್ ಇನ್ನೂ ಇದೆ. ಇದರ ಬಗ್ಗೆ ಚುನಾವಣೆ ಆಯೋಗಕ್ಕೆ ತಿಳಿಸಿದ್ದೇವೆ‌ ಎಂದರು.

ಸಂಸದ ಡಿಕೆ ಸುರೇಶ್

ಉಚಿತ ಸೆಟ್​ಅಪ್​ ಬಾಕ್ಸ್ ಕೊಟ್ಟಿದ್ದಾರೆಂಬ ವಿಚಾರ ಮಾತನಾಡಿ, ನಮ್ಮ ಲೀಗಲ್ ಟೀಂ ಅದನ್ನು ಪರಿಶೀಲಿಸುತ್ತಿದೆ. ಅದರ ವಿರುದ್ಧವೂ ನಾವು ದೂರು ನೀಡುತ್ತೇವೆ ಎಂದರು. ಇನ್ನು ಡಿಕೆಶಿ ವಿರುದ್ಧ ಕೇಸ್ ದಾಖಲು ಮಾಡಲಾಗುತ್ತದೆ ಎಂಬ ಮುನಿರತ್ನ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ಮುನಿರತ್ನ ನೂರು ಕೇಸ್ ಕೊಡಲಿ. ಬಿಜೆಪಿಯವರೇ ನೀಚ ಅಂತ ಅವರನ್ನ ಹೇಳಿದ್ದಾರೆ. ವೋಟರ್ ಐಡಿ ಪ್ರಿಂಟ್ ಮಾಡುತ್ತಾನೆ ಅಂತ ಪ್ರಧಾನಿ ಅವರೇ ಹೇಳಿದ್ದಾರೆ. ಇದಕ್ಕಿಂತ ಇನ್ನೇನು ಬೇಕು? ಮುನಿರತ್ನ ವಿರುದ್ಧ ಶೀಘ್ರದಲ್ಲೇ ದಾಖಲೆ ಬಿಡುಗಡೆ ಮಾಡುತ್ತೇವೆ ಎಂದರು.

Last Updated : Oct 26, 2020, 6:12 PM IST

ABOUT THE AUTHOR

...view details