ಕರ್ನಾಟಕ

karnataka

ETV Bharat / state

ರಾಜ್ಯಾದ್ಯಂತ ಮಳೆ ಮುಂದುವರಿಕೆ: ಕರಾವಳಿ ಜಿಲ್ಲೆಗಳಿಗೆ 2 ದಿನ 'ಆರೆಂಜ್ ಅಲರ್ಟ್' - karnataka rain updates

ಕರಾವಳಿ ಜಿಲ್ಲೆಗಳಲ್ಲಿ ಸ್ವಲ್ಪ ಬಿಡುವು ನೀಡಿದ ಮಳೆ- ಮುಂದಿನ ಎರಡು ದಿನ ದಕ್ಷಿಣ ಒಳನಾಡು ಭಾಗಗಳಿಗೆ ಆರೆಂಜ್ ಅಲರ್ಟ್ ಘೋಷಣೆ - ರಾಜ್ಯದ ಹಲವೆಡೆ ಇನ್ನೂ ಮೂರ್ನಾಲ್ಕು ದಿನ ವರುಣನ ಆರ್ಭಟ ಮುಂದುವರಿಕೆ

oranges-alert-for-coastal-districts-for-two-days
ರಾಜ್ಯಾದ್ಯಂತ ಮಳೆ ಮುಂದುವರಿಕೆ: ಕರಾವಳಿ ಜಿಲ್ಲೆಗಳಿಗೆ 2 ದಿನ 'ಆರೆಂಜ್ ಅಲರ್ಟ್'

By

Published : Jul 13, 2022, 12:44 PM IST

Updated : Jul 13, 2022, 2:13 PM IST

ಬೆಂಗಳೂರು:ರಾಜ್ಯದ ಹಲವೆಡೆ ಮಳೆಯ ಅಬ್ಬರ ಇನ್ನೂ ಮೂರ್ನಾಲ್ಕು ದಿನಗಳ ಕಾಲ ಮುಂದುವರೆಯಲಿದೆ. ಕರಾವಳಿ ಜಿಲ್ಲೆಗಳಲ್ಲಿ ಇಂದು ಮತ್ತು ನಾಳೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಜುಲೈ ಮೊದಲ ವಾರದಿಂದ ಕರಾವಳಿ ಜಿಲ್ಲೆಗಳಲ್ಲಿ ಆರ್ಭಟಿಸಿದ್ದ ಮಳೆ ಇದೀಗ ಸ್ವಲ್ಪ ಬಿಡುವು ನೀಡಿದೆ. ಮುಂದಿನ ಎರಡು ದಿನ ದಕ್ಷಿಣ ಒಳನಾಡು, ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ ಜಿಲ್ಲೆಗಳ ಬಹುತೇಕ ಭಾಗಗಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಈ ಜಿಲ್ಲೆಗಳಲ್ಲಿ ಇಂದು (ಬುಧವಾರ) 64.5ರಿಂದ 115.5 ಮಿ.ಮೀ. ಹಾಗೂ ಗುರುವಾರ 115.6 ಮಿ.ಮೀ.ನಿಂದ 204.4 ಮಿ.ಮೀ.ನಷ್ಟು ಮಳೆಯಾಗುವ ಸಾಧ್ಯತೆ ಇದೆ.

ನಾಳೆ ಮೈಸೂರು, ಹಾಸನ, ಕೊಡಗು, ಶಿವಮೊಗ್ಗ ಮತ್ತು ಚಿಕ್ಕಮಗಳೂರಿನಲ್ಲಿ ಭಾರಿ ಮಳೆಯಾಗಲಿದೆ. ಸುಮಾರು 64.5ರಿಂದ 115.5ಮಿ.ಮೀ.ನಷ್ಟು ಮಳೆ ಸುರಿಯಲಿದೆ. ಜುಲೈ 15ರಂದು ಕೂಡ ಕೊಡಗು, ಹಾಸನ, ಮೈಸೂರು, ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಸುಮಾರು 64.5ರಿಂದ 115.5 ಮಿ.ಮೀ.ನಷ್ಟು ಭಾರಿ ವರ್ಷಧಾರೆ ಆಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಇದನ್ನೂ ಓದಿ:ಮುರಿದ ಮರದ ಸೇತುವೆ ಮೇಲೆ ನಿಂತು ಮೂಕರೋದನೆ.. ನೆರವಿಗೆ ಕಾಯುತ್ತಿದೆ 'ಶ್ವಾನ'

Last Updated : Jul 13, 2022, 2:13 PM IST

ABOUT THE AUTHOR

...view details