ಕರ್ನಾಟಕ

karnataka

ETV Bharat / state

ಬೆಂಗಳೂರಲ್ಲಿ ಗ್ಯಾಸ್​ ಪೈಪ್​ಲೈನ್​ ಸೋರಿಕೆಯಿಂದ ಹೊತ್ತಿ ಉರಿದ ಅಪಾರ್ಟ್​ಮೆಂಟ್​​​.. ಇಬ್ಬರು ಸಜೀವದಹನ

ನಗರದ ದೇವರಚಿಕ್ಕನಹಳ್ಳಿ ಬಳಿಯ ಆಶ್ರಿತ್ ಅಪಾರ್ಟ್​​ಮೆಂಟ್​​ನಲ್ಲಿ ಭಾರಿ ಅಗ್ನಿ ಅವಘಡ ಸಂಭವಿಸಿದೆ. ಒಂದು ಫ್ಲ್ಯಾಟ್​​ನಲ್ಲಿ ಹೊತ್ತಿಕೊಂಡ ಬೆಂಕಿಯ ಕೆನ್ನಾಲಿಗೆ ಇತರೆ ಫ್ಲ್ಯಾಟ್​ಗಳಿಗೂ ಆವರಿಸಿದೆ. ಘಟನೆಯಲ್ಲಿ ಇಬ್ಬರು ಸಜೀವ ದಹನವಾಗಿದ್ದಾರೆ.

One died and several stuck in cylinder blast at Bangalore apartment
ಸಿಲಿಂಡರ್ ಸ್ಫೋಟದಿಂದ ಹೊತ್ತಿ ಉರಿದ ಅಪಾರ್ಟ್​ಮೆಂಟ್

By

Published : Sep 21, 2021, 5:52 PM IST

Updated : Sep 21, 2021, 7:19 PM IST

ಬೆಂಗಳೂರು: ಬನ್ನೆರುಘಟ್ಟ ರಸ್ತೆಯ ದೇವರಚಿಕ್ಕನಹಳ್ಳಿಯ ಆಶ್ರಿತ್ ಶೆಲ್ಟ್ರಸ್ ಎಂಬ ಅಪಾರ್ಟ್ಮೆಂಟ್​ನ ಮೂರನೇ ಮಹಡಿಯಲ್ಲಿ ಸಿಲಿಂಡರ್ ಸ್ಫೋಟ ಸಂಭವಿಸಿದೆ. ಸ್ಫೋಟದ ರಭಸಕ್ಕೆ ಫ್ಲ್ಯಾಟ್ ಹೊತ್ತಿ ಉರಿದಿದ್ದು, ಇಬ್ಬರು ಮಹಿಳೆಯರು ಸಜೀವ ದಹನವಾಗಿದ್ದಾರೆ.

ಭಾಗ್ಯ ರೇಖಾ (59) ಹಾಗೂ‌ ಲಕ್ಷ್ಮೀದೇವಿ (82) ಮೃತ ಮಹಿಳೆಯರು. ಫ್ಲ್ಯಾಟ್​ನಲ್ಲಿನ ಬೆಂಕಿ‌ ಕೆನ್ನಾಲಿಗೆ ಕಂಡು ನೆರೆಹೊರೆಯವರು ಮಾಹಿತಿ ನೀಡಿದ ಮೇರೆಗೆ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸಿ ಹರಸಾಹಸಪಡುತ್ತಿದ್ದಾರೆ. ಇನ್ನು ಘಟನೆಯಲ್ಲಿ ಮೂವರು ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎನ್ನಲಾಗುತ್ತಿದೆ‌.

ಬೆಂಗಳೂರಲ್ಲಿ ಸಿಲಿಂಡರ್ ಸ್ಫೋಟದಿಂದ ಹೊತ್ತಿ ಉರಿದ ಅಪಾರ್ಟ್​ಮೆಂಟ್

ಮೂರು ಪ್ಲ್ಯಾಟ್​​ಗಳಿಗೂ ವಿಸ್ತರಿಸಿದ ಬೆಂಕಿ:

ಸಿಲಿಂಡರ್ ಸ್ಪೋಟದಿಂದ‌ ಪ್ಲ್ಯಾಟ್​​ನಲ್ಲಿ ಬೆಂಕಿ ಜ್ವಾಲೆ ಹೊತ್ತಿ ಉರಿದಿದೆ‌. ಅಗ್ನಿಯ ಕೆನ್ನಾಲಿಗೆ ಮೂರು ಪ್ಲ್ಯಾಟ್​​ಗಳಿಗೂ ವಿಸ್ತರಿಸಿದೆ. ಇದರಿಂದ ಆತಂಕಕೊಂಡ ಪ್ಲ್ಯಾಟ್ ನಿವಾಸಿಗಳು ಕೂಡಲೇ ಹೊರಬಂದಿದ್ದರಿಂದ ಅಪಾಯದಿಂದ ಪಾರಾಗಿದ್ದಾರೆ. ದುರಂತ ಹಿನ್ನೆಲೆಯಲ್ಲಿ ಸ್ಥಳಕ್ಕೆ ದಕ್ಷಿಣ ವಲಯದ ಜಂಟಿ ಆಯುಕ್ತ ರಾಮಕೃಷ್ಣ ಹಾಗೂ ಅಗ್ನೇಯ ವಿಭಾಗದ ಡಿಸಿಪಿ ಶ್ರೀನಾಥ್ ಮಹದೇವನ್ ಜೋಷಿ ಭೇಟಿ ನೀಡಿ‌ ಪರಿಶೀಲನೆ ನಡೆಸುತ್ತಿದ್ದಾರೆ.

ಬೆಂಗಳೂರಲ್ಲಿ ಸಿಲಿಂಡರ್ ಸ್ಫೋಟದಿಂದ ಹೊತ್ತಿ ಉರಿದ ಅಪಾರ್ಟ್​ಮೆಂಟ್​​​.

ಇಬ್ಬರು ಸಿಲುಕಿರುವ ಶಂಕೆ:

ಇಂದು‌ ಸಂಜೆ 4.15ಕ್ಕೆ ದುರಂತ ಸಂಭವಿಸಿದೆ. ಮಾಹಿತಿ ಆಧರಿಸಿ ಅಗ್ನಿಶಾಮಕ ತಂಡ ಕಾರ್ಯಾಚರಣೆ ನಡೆಸಿದೆ‌. ಬೆಂಕಿ ನಂದಿಸಲಾಗಿದ್ದು, ಪ್ಲ್ಯಾಟ್​​ನಲ್ಲಿ ದಟ್ಟವಾದ ಹೊಗೆ ಬರುತ್ತಿರುವುದರಿಂದ ಪೊಲೀಸರು ಒಳಗೆ ಹೋಗಲು ಸಾಧ್ಯವಾಗುತ್ತಿಲ್ಲ. ಮಾಹಿತಿ ಪ್ರಕಾರ ಇಬ್ಬರು ಮನೆಯಲ್ಲಿ ಸಿಲುಕಿಕೊಂಡಿರುವ ಸಾಧ್ಯತೆಯಿದೆ‌. ಒಂದೇ ಪ್ಲ್ಯಾಟ್​​ನಲ್ಲಿ‌ ಮಾತ್ರ ಬೆಂಕಿ ಆವರಿಸಿಕೊಂಡಿದೆ. ಓರ್ವರನ್ನು ರಕ್ಷಿಸಿ ಆಸ್ಪತ್ರೆಗೆ ಸೇರಿಸಲಾಗಿದೆ.. ಮತ್ತೊಬ್ಬರಿಗೆ ಸಣ್ಣ-ಪುಟ್ಟ ಗಾಯವಾಗಿದೆ.. ಅಗ್ನಿ ದುರಂತಕ್ಕೆ ಸ್ಪಷ್ಟ ಕಾರಣ ತಿಳಿದುಬಂದಿಲ್ಲ ಎಂದು ಡಿಸಿಪಿ ಮಾಹಿತಿ ನೀಡಿದ್ದಾರೆ.

Last Updated : Sep 21, 2021, 7:19 PM IST

ABOUT THE AUTHOR

...view details