ಕರ್ನಾಟಕ

karnataka

ETV Bharat / state

ಸಿಎಂ ಸೇರಿ ನೂತನ ಸಚಿವರುಗಳಿಗೆ ಅಧಿಕೃತ ನಿವಾಸಗಳ ಹಂಚಿಕೆ‌

ಸಿಎಂ ಯಡಿಯೂರಪ್ಪ ಸೇರಿ 13 ಸಚಿವರುಗಳಿಗೆ ಅಧಿಕೃತ ನಿವಾಸಗಳನ್ನು ಹಂಚಿಕೆ ಮಾಡಲಾಗಿದೆ‌. ನಿವಾಸ ಹಂಚಿಕೆ ಮಾಡಿ ಆದೇಶ ಹೊರಡಿಸಲಾಗಿದೆ.

ಸಿಎಂ ಸೇರಿ ನೂತನ ಸಚಿವರುಗಳಿಗೆ ಅಧಿಕೃತ ನಿವಾಸ ಹಂಚಿಕೆ‌ ಮಾಡಿ ಆದೇಶ

By

Published : Aug 22, 2019, 9:40 PM IST

ಬೆಂಗಳೂರು:ನೂತನ ಸಚಿವರುಗಳಿಗೆ ಅಧಿಕೃತ ನಿವಾಸಗಳನ್ನು ಹಂಚಿಕೆ ಮಾಡಿ ಇಂದು ಆದೇಶ ಹೊರಡಿಸಲಾಗಿದೆ.

ಸಿಎಂ ಸೇರಿ ನೂತನ ಸಚಿವರುಗಳಿಗೆ ಅಧಿಕೃತ ನಿವಾಸ ಹಂಚಿಕೆ‌ ಮಾಡಿ ಆದೇಶ

ಸಿಎಂ ಯಡಿಯೂರಪ್ಪ ಸೇರಿ ಹದಿಮೂರು ಸಚಿವರುಗಳಿಗೆ ಅಧಿಕೃತ ನಿವಾಸವನ್ನು ಹಂಚಿಕೆ ಮಾಡಲಾಗಿದೆ‌. ನಿವಾಸ ಹಂಚಿಕೆ ಮಾಡಿ ಆದೇಶ ಹೊರಡಿಸಿರುವ ಹಿನ್ನೆಲೆ ಈ ಹಿಂದಿನ ಮೈತ್ರಿ ಸರ್ಕಾರದ ಸಚಿವರುಗಳು ತಾವು ವಾಸವಿರುವ ಅಧಿಕೃತ ನಿವಾಸವನ್ನು ಇದೀಗ ಹೊಸ ಸಚಿವರುಗಳಿಗೆ ಬಿಟ್ಟು ಕೊಡಬೇಕಾಗಿದೆ. ಸಿಎಂ ಯಡಿಯೂರಪ್ಪಗೆ ಹಂಚಿಕೆಯಾಗಿರುವ ನಿವಾಸದಲ್ಲಿ ಸದ್ಯ ಮಾಜಿ ಸಚಿವ ಸಾ.ರಾ. ಮಹೇಶ್ ವಾಸವಿದ್ದಾರೆ. ಇದೀಗ ಸಿಬ್ಬಂದಿ ಹಾಗೂ ಆಡಳಿತ ಸುಧಾರಣೆ ಇಲಾಖೆ ಅಧಿಕೃತ ನಿವಾಸ ಹಂಚಿ ಆದೇಶ ಹೊರಡಿಸಿರುವ ಹಿನ್ನೆಲೆ ಸಾ.ರಾ. ಮಹೇಶ್ ಮನೆ ಖಾಲಿ ಮಾಡಬೇಕಾಗಿದೆ.

ಯಾರಿಗೆ ಯಾವ ನಿವಾಸ?:

  • ಸಿಎಂ ಯಡಿಯೂರಪ್ಪ- ನಂ.2, ರೇಸ್ ವ್ಯೂ ಕಾಟೇಜ್, ರೇಸ್ ಕೋರ್ಸ್ ರಸ್ತೆ
  • ಕೆ.ಎಸ್.ಈಶ್ವರಪ್ಪ- ನಂ.2. ಕೆ.ಕೆ.ದಕ್ಷಿಣ
  • ಗೋವಿಂದ ಕಾರಜೋಳ- ನಂ.2, ಕ್ರೆಸೆಂಟ್ ರಸ್ತೆ
  • ಡಾ.ಅಶ್ವತ್ ನಾರಾಯಣ- ನಂ.1, ರೇಸ್ ವ್ಯೂ ಕಾಟೇಜ್, ರೇಸ್ ಕೋರ್ಸ್ ರಸ್ತೆ
  • ಜೆ.ಸಿ.ಮಾಧುಸ್ವಾಮಿ- ನಂ.4. ರೇಸ್ ಕೋರ್ಸ್ ರಸ್ತೆ
  • ಸಿ.ಟಿ.ರವಿ- ನಂ.1, ಸವೆನ್ ಮಿನಿಸ್ಟರ್ ಕ್ವಾಟ್ರಸ್, ಸ್ಯಾಂಕಿ ರಸ್ತೆ
  • ವಿ.ಸೋಮಣ್ಣ- ನಂ.3, ಸೆವೆನ್ ಮಿನಿಸ್ಟರ್ ಕ್ವಾಟ್ರಸ್ ಸ್ಯಾಂಕಿ ರಸ್ತೆ
  • ಬಿ.ಶ್ರೀರಾಮುಲು- ನಂ.6, ಸೆವೆನ್ ಮಿನಿಸ್ಟರ್ ಕ್ವಾಟ್ರಸ್, ಸ್ಯಾಂಕಿ ರಸ್ತೆ
  • ಲಕ್ಷ್ಮಣ ಸವದಿ- ನಂ.7, ಸವೆನ್ ಮಿನಿಸ್ಟರ್ ಕ್ವಾಟ್ರಸ್, ಸ್ಯಾಂಕಿ ರಸ್ತೆ
  • ಸಿ.ಸಿ.ಪಾಟೀಲ್- ನಂ.30, ಸ್ಯಾಂಕಿ ರಸ್ತೆ
  • ಕೋಟಾ ಶ್ರೀನಿವಾಸ ಪೂಜಾರಿ- ನಂ.31, ಸ್ಯಾಂಕಿ ರಸ್ತೆ
  • ಶಶಿಕಲಾ ಜೊಲ್ಲೆ- ನಂ.1, ಜಯಮಹಲ್ ಬಡಾವಣೆ
  • ಜಗದೀಶ್​ ಶೆಟ್ಟರ್​- ನಂ.3 ಕ್ರೆಸೆಂಟ್​ ರಸ್ತೆ

ABOUT THE AUTHOR

...view details