ಕರ್ನಾಟಕ

karnataka

ನಾಲ್ಕು ವರ್ಷದ ಮಗುವಿನ ಜ್ಞಾನತಪ್ಪಿಸಿ ಮನೆಗಳ್ಳತನ ಮಾಡಿ ದಾದಿ ಪರಾರಿ..

By

Published : Oct 13, 2021, 8:02 PM IST

ಎಂದಿನಂತೆ ಕೆಲಸ‌‌ ಮುಗಿಸಿಕೊಂಡು ರಾತ್ರಿ ಬಂದ ವಿಕ್ರಮ್​ ಮನೆಯನ್ನು ನೋಡಿದಾಗ ವಸ್ತುಗಳೆಲ್ಲವೂ ಚೆಲ್ಲಾಪಿಲ್ಲಿಯಾಗಿದ್ದವು. ಮಗು ನಿದ್ರಾವ್ಯವಸ್ಥೆಗೆ ಜಾರಿದ್ದನ್ನು ಕಂಡು ಕೂಡಲೇ ಸ್ಥಳೀಯ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದ್ದರು..

bangalore
ಬೆಂಗಳೂರು

ಬೆಂಗಳೂರು :ತಮ್ಮ ಮಕ್ಕಳ ಲಾಲನೆ‌ ಪಾಲ‌ನೆ ಮಾಡಲು ಆನ್​​​ಲೈನ್​​​ನಲ್ಲಿ ದಾದಿಯರನ್ನು ನಿಯೋಜಿಸುವ ಮುನ್ನ ಪೋಷಕರೆ ಒಮ್ಮೆ ಈ ಸ್ಟೋರಿ ನೋಡಿ.

ನಾಲ್ಕು ವರ್ಷದ ಮಗವನ್ನು ನೋಡಿಕೊಳ್ಳಲು ನಗರದ ಉದ್ಯಮಿ ವಿಕ್ರಮ್ ಎಂಬುವರು ಆನ್​ಲೈನ್​ ಮೂಲಕ ಸುಭದ್ರ ರಾಯ್ಕರ್ ಎಂಬಾಕೆಯನ್ನು ನಿಯೋಜಿಸಿದ್ದರು. ತಿಂಗಳಿಗೆ 15 ಸಾವಿರ ರೂ. ಸಂಬಳ ನೀಡಿ ಉಳಿಯಲು ಆಶ್ರಯ ನೀಡಿದ್ದರು. ಕಳೆದ ಮೂರು ತಿಂಗಳಿಂದ ಮಹಿಳೆ ಕೆಲಸ ಮಾಡುತ್ತಿದ್ದಳು.

ಎಂದಿನಂತೆ ಅ.8ರಂದು ಉದ್ಯಮಿ ಕೆಲಸ‌ಕ್ಕೆ ತೆರಳಿದ್ದರು. ಆ ವೇಳೆ ಮಗು ಹೊರತುಪಡಿಸಿ ಮನೆಯಲ್ಲಿ ಯಾರೂ ಇರಲಿಲ್ಲ.‌ ಇದೇ ಸಮಯಕ್ಕಾಗಿ ಕಾಯುತ್ತಿದ್ದ ಮಹಿಳೆ, ಮನೆಯಲ್ಲಿದ್ದ ಚಿನ್ನಾಭರಣವನ್ನು ಕಳ್ಳತನ ಮಾಡಲು ಹೊಂಚು ಹಾಕಿದ್ದಳು.

ಇದಕ್ಕೆ ಎಲ್ಲಿ ಮಗು ಅಡ್ಡಿಯಾಗುತ್ತದೆಯೋ ಎಂದು ಭಾವಿಸಿ ನಿದ್ದೆ ಬರುವಂತೆ ಹೆಚ್ಚಿನ ಪ್ರಮಾಣದ ಔಷಧಿ ಕುಡಿಸಿ ಮಗುವನ್ನು ಪ್ರಜ್ಞಾಹೀನನ್ನಾಗಿಸಿ, ಮನೆಯಲ್ಲಿದ್ದ 30 ಸಾವಿರ ನಗದು, 17 ಗ್ರಾಂ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾಳೆ.

ಎಂದಿನಂತೆ ಕೆಲಸ‌‌ ಮುಗಿಸಿಕೊಂಡು ರಾತ್ರಿ ಬಂದ ವಿಕ್ರಮ್​ ಮನೆಯನ್ನು ನೋಡಿದಾಗ ವಸ್ತುಗಳೆಲ್ಲವೂ ಚೆಲ್ಲಾಪಿಲ್ಲಿಯಾಗಿದ್ದವು. ಮಗು ನಿದ್ರಾವ್ಯವಸ್ಥೆಗೆ ಜಾರಿದ್ದನ್ನು ಕಂಡು ಕೂಡಲೇ ಸ್ಥಳೀಯ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದ್ದರು. ಈ ಸಂಬಂಧ ಉದ್ಯಮಿ ದಾದಿ ಸುಭದ್ರ ರಾಯ್ಕರ್ ವಿರುದ್ಧ ಅಶೋಕನಗರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಅಧಿಕಾರಿಗಳು ತನಿಖೆ ಕೈಗೊಂಡಿದ್ದಾರೆ.

ಇದನ್ನೂ ಓದಿ: ಗ್ರಾಹಕನಿಗೆ 6,865 ರೂಪಾಯಿ ಮರುಪಾವತಿ ಮಾಡಲು ನಿರ್ಲಕ್ಷ್ಯ: Paytmಗೆ 25,000 ರೂ. ದಂಡ

ABOUT THE AUTHOR

...view details