ಕರ್ನಾಟಕ

karnataka

ETV Bharat / state

ಈಗ ಬಿಜೆಪಿಗೆ, ರಾಜ್ಯಕ್ಕೆ ಅನಂತಕುಮಾರ್​ ಅಗತ್ಯವಿತ್ತು: ಬಸವರಾಜ ಬೊಮ್ಮಾಯಿ - ಮಾಜಿ ಸಿಎಂ ಬಸವರಾಜ ಬೊಮ್ಮಾಯಿ

ಈಗ ರಾಜ್ಯಕ್ಕೆ ಮತ್ತು ಬಿಜೆಪಿಗೆ ಅನಂತಕುಮಾರ್ ಕುಮಾರ್ ಅವರ ಅಗತ್ಯವಿತ್ತು ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಹೇಳಿದ್ದಾರೆ.

ಅನಂತ ನಮನ 64 ಕಾರ್ಯಕ್ರಮ
ಅನಂತ ನಮನ 64 ಕಾರ್ಯಕ್ರಮ

By ETV Bharat Karnataka Team

Published : Sep 22, 2023, 9:33 PM IST

ಬೆಂಗಳೂರು :ಕೇಂದ್ರ ಸರ್ಕಾರದ ಮಟ್ಟದಲ್ಲಿ ಕರ್ನಾಟಕದ ವಿಚಾರ ಬಂದಾಗ ಅನಂತಕುಮಾರ್ ಅವರು ಆಪದ್ಬಾಂಧವರಾಗಿದ್ದರು. ಈಗ ರಾಜ್ಯಕ್ಕೆ ಮತ್ತು ಬಿಜೆಪಿಗೆ ಅವರ ಅಗತ್ಯವಿತ್ತು ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಭಿಪ್ರಾಯಪಟ್ಟಿದ್ದಾರೆ.

ಕೇಂದ್ರದ ಮಾಜಿ ಸಚಿವ ದಿ ಅನಂತಕುಮಾರ್​ ಜನ್ಮದಿನದ ಅಂಗವಾಗಿ ಏರ್ಪಡಿಸಿದ್ದ ಅನಂತಕುಮಾರ್​ 64 ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಅನಂತಕುಮಾರ್ ಅವರು ಅನಂತವಾದ ಬದುಕನ್ನು ಅಲ್ಪ ಸಮಯದಲ್ಲಿ ಇದ್ದು, ಯಶಸ್ಸು ಸಾಧನೆಗಳನ್ನು ಮಾಡಿ ಅತಿ ಚಿಕ್ಕ ವಯಸ್ಸಿನಲ್ಲಿ ಬಿಟ್ಟು ಹೋಗಿದ್ದಾರೆ. ಅನಂತಕುಮಾರ್ ನಾನು ಕ್ಲಾಸ್ ಮೇಟ್. ನಾನು ಏನಾದರು ತಪ್ಪು ಮಾಡಿದ್ದರೆ, ಅವರು ಕರೆಕ್ಷನ್ ಮಾಡುತ್ತಿದ್ದರು ಎಂದರು.

ಅನಂತನಮನ​ 64 ಕಾರ್ಯಕ್ರಮ

ಅವರಿಗೆ ಬಹಳ ಉತ್ಸಾಹಿ ಹಾಗೂ ದೂರದೃಷ್ಟಿಯುಳ್ಳ ನಾಯಕತ್ವದ ಗುಣ‌ ಇತ್ತು. ನಾವು ಕಾಲೇಜಿನಲ್ಲಿ ಕ್ಯಾಂಟೀನ್​ನಲ್ಲಿ ಟಿ ಕುಡಿಯುವಾಗ ಎಮರ್ಜೆನ್ಸಿ ವಿರುದ್ದ ಪ್ರತಿಭಟನೆ ಮಾಡೋಣ ಅಂತ ಹೇಳಿದರು. ಅವರನ್ನು ವಿದ್ಯಾರ್ಥಿ ಸಂಘಟನೆಯ ಜನರಲ್ ಸೆಕ್ರೆಟರಿ ಮಾಡಿದ್ದೆವು. ಅವರು ಪ್ರತಿಭಟನೆಯಲ್ಲಿ ಅರೆಸ್ಟ್ ಆಗಿ ನಾಲ್ಕು ತಿಂಗಳು ಜೈಲಿಗೆ ಹೋಗಿದ್ದರು. ಆದರೆ, ಸದಾ ಕಾಲ ಉತ್ಸಾಹ ಕಡಿಮೆಯಾಗಲಿಲ್ಲ. ಹುಬ್ಬಳ್ಳಿಯಲ್ಲಿ ಎಂಟಿಎಸ್ ಕಾಲೋನಿ ಅವರ ತಾಯಿ ಗಿರಿಜಾ ಶಾಸ್ತ್ರಿ ಅವರಲ್ಲಿ ದೇಶ ಭಕ್ತಿ ಮತ್ತು ಹೋರಾಟದ ಛಲ ಇತ್ತು. ಅವರ ತಂದೆ ಶಿಸ್ತಿನ ವ್ಯಕ್ತಿ, ಅವರಿಬ್ಬರ ಗುಣಗಳು ಅನಂತಕುಮಾರ್ ಅವರಿಗೆ ಬಂದಿತ್ತು ಎಂದು ಸ್ಮರಿಸಿದರು.

ತೇಜಸ್ವಿನಿ ಅನಂತಕುಮಾರ್ ಅವರು ಅನಂತಕುಮಾರ್ ಅವರಿಗೆ ಬೆಂಬಲವಾಗಿ ನಿಂತಿದ್ದರು. ಅನಂತಕುಮಾರ್ ಅವರು ಆಪಾದ್ಬಾಂದವರು, ಕೇಂದ್ರದ ಯಾವುದೇ ವಿಚಾರ ಬಂದಾಗ ನಾವು ಅನಂತಕುಮಾರ್ ಮೇಲೆ ಹಾಕುತ್ತಿದ್ದೆವು. ಮೊನ್ನೆಯ ಕಾವೇರಿ ವಿಚಾರವಾಗಿ‌ ನಡೆದ ಸರ್ವ ಪಕ್ಷದ ಸಭೆಯಲ್ಲಿ ಅವರನ್ನು ಎಲ್ಲರೂ ನೆನೆಸಿಕೊಂಡರು ಎಂದು ಹೇಳಿದರು.

ಅನಂತಕುಮಾರ್​ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ

ಕೃಷ್ಣಾನದಿ ವಿಚಾರದಲ್ಲಿ ರಾಜ್ಯಕ್ಕೆ ಒಂದು ಆತಂಕ ಎದುರಾಗಿತ್ತು. ಆಂಧ್ರ, ತೆಲಂಗಾಣಕ್ಕೆ ಪ್ರತ್ಯೇಕವಾಗಿ ನೀರು ಹಂಚಿಕೆ ಮಾಡುವಂತೆ ಆಗ್ರಹಿಸಿದ್ದರು. ಆಗ ನಾನು ಅನಂತಕುಮಾರ್ ಅವರಿಗೆ ಇದರ ಬಗ್ಗೆ ಹೇಳಿದೆ. ಅವರು ತಕ್ಷಣ ಕಾನೂನು ಸೆಕ್ರೆಟರಿಗೆ ಕರೆದು ರಾಜ್ಯ ಸರ್ಕಾರದ ಪರ ಬರೆಯುವಂತೆ ಹೇಳಿದರು. ಅವರು ನಿರಾಕರಿಸಿದರು. ಆದರೆ, ಅನಂತಕುಮಾರ್ ಅವರು ಆ ಸೆಕ್ರೆಟರಿಯನ್ನೇ ಬದಲಾಯಿಸುವುದಾಗಿ ಹೇಳಿದರು. ಆಗ ಆತ ಸಹಿ ಮಾಡಿದ. ಇದು ಅತ್ಯಂತ ದೊಡ್ಡ ಕೆಲಸ. ಅವರು ಇಡೀ ರಾಜ್ಯಕ್ಕೆ ದೊಡ್ಡ ಕೊಡುಗೆ ಕೊಟ್ಟಿದ್ದಾರೆ. ಅವರು ನಾನು ಬೇರೆ ಬೇರೆ ಪಕ್ಷದಲ್ಲಿ ಇದ್ದೆವು. ನನಗೆ ಯಾವಾಗಲೂ ದೋಸ್ತ ಅಂತ ಕರೆಯುತ್ತಿದ್ದರು. ಅವರು ಬಿಜೆಪಿಗೆ ಬರುವಂತೆ ಒತ್ತಾಯ ಮಾಡಿದ್ದರು ಎಂದು ತಿಳಿಸಿದರು.

ಅನಂತ ನಮನ 64 ಕಾರ್ಯಕ್ರಮ

ರಾಜನಾಥ್​ ಸಿಂಗ್ ಅವರು ನೀವೇಕೆ ಬಿಜೆಪಿಗೆ ಬರುತ್ತಿಲ್ಲ ಎಂದರು. ನೀನು ಬಂದರೆ ನಮಗೂ ಅನುಕೂಲ, ನಿನಗೂ ಗೌರವ ಸಿಗುತ್ತದೆ ಅಂತ ಅನಂತಕುಮಾರ್ ಹೇಳಿದರು. ಅನಂತಕುಮಾರ್ ಒತ್ತಾಯಕ್ಕೆ ಬಿಜೆಪಿಗೆ ಬಂದೆ. ನನ್ನನ್ನು ಗೌರವದಿಂದ ನೋಡಿಕೊಂಡರು ಎಂದು ಬೊಮ್ಮಾಯಿ ಹಳೆಯ‌ ನೆನಪುಗಳನ್ನು ಮೆಲುಕು ಹಾಕಿದರು. ಅವರಿಗೆ ಅದಮ್ಯ ಚೇತನದ ಬಗ್ಗೆ ಬಹಳ ಪ್ರೀತಿ, ಆಸಕ್ತಿ ಇತ್ತು. ತೇಜಸ್ವಿಯವರು ಅದನ್ನು ಅತ್ಯಂತ ಶ್ರದ್ದೆಯಿಂದ ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ ಎಂದು ಹೇಳಿದರು ಕಾರ್ಯಕ್ರಮದಲ್ಲಿ ಮಾಜಿ ಸಚಿವ ಸಿ. ಟಿ ರವಿ, ಅದಮ್ಯ ಚೇತನದ ಅಧ್ಯಕ್ಷೆ ತೇಜಸ್ವಿನಿ ಅನಂತಕುಮಾರ್, ಅನಂತಕುಮಾರ್ ಪ್ರತಿಷ್ಠಾನದ ಅಧ್ಯಕ್ಷ ಪ್ರೊ. ಪಿ. ವಿ ಕೃಷ್ಣಭಟ್ ಹಾಜರಿದ್ದರು.

ಇದನ್ನೂ ಓದಿ:ತಮಿಳುನಾಡಿಗೆ ಕಾವೇರಿ ನೀರು: ಪಾಲಿಸಲು ಸಾಧ್ಯವಿಲ್ಲದ ಆಜ್ಞೆ- ಬಸವರಾಜ ಬೊಮ್ಮಾಯಿ

ABOUT THE AUTHOR

...view details