ಕರ್ನಾಟಕ

karnataka

ETV Bharat / state

ಕುಮಾರಣ್ಣ ವಿಶ್ವಾಸಮತ ಯಾಚನೆ ಮಾಡೇ ಮಾಡುತ್ತಾರೆ: ನಿಸರ್ಗ ನಾರಾಯಣಸ್ವಾಮಿ - ಕುಮಾರಸ್ವಾಮಿ

ಎರಡೂ ಪಕ್ಷದ ಶಾಸಕರ ಮನವೊಲಿಸುವ ಕೆಲಸ ಮಾಡಲಾಗುತ್ತಿದೆ. ನಮ್ಮ ಮುಖಂಡರು ಮನವೊಲಿಸಲು ಪ್ರಯತ್ನ ಪಡುತ್ತಿದ್ದಾರೆ. ಗುರುವಾರ ವಿಶ್ವಾಸಮತ ಯಾಚಿಸುತ್ತಾರೆ. ಎಲ್ಲರೂ ನಮ್ಮ ಜೊತೆ ಬರುವ ವಿಶ್ವಾಸವಿದೆ ಎಂದು ದೇವನಹಳ್ಳಿ ಶಾಸಕ ನಿಸರ್ಗ ನಾರಾಯಣಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದ್ರು.

ನಿಸರ್ಗ ನಾರಾಯಣಸ್ವಾಮಿ

By

Published : Jul 15, 2019, 9:25 PM IST

ಬೆಂಗಳೂರು:ನಾವು ಎಲ್ಲಾ ಶಾಸಕರು ಒಟ್ಟಿಗೆ ಒಗ್ಗಟ್ಟಿನಿಂದ ಇದ್ದೇವೆ. ಕುಮಾರಣ್ಣನ ಬೆಂಬಲಕ್ಕೆ ಒಟ್ಟಿಗೆ ಇರುತ್ತೇವೆ. ಎಲ್ಲಾ ಶಾಸಕರು ಅವರವರ ಕ್ಷೇತ್ರದ ಅಭಿವೃದ್ಧಿ ಕೆಲಸದ ನಿಮಿತ್ತ ಹೋಗಿದ್ದಾರೆ. ಎಲ್ಲರೂ ಇಲ್ಲಿಗೆ ಬರುತ್ತಾರೆ. ಗುರುವಾರದವರೆಗೂ ಇಲ್ಲೇ ಇರುತ್ತೇವೆ‌. ಅಂದು ಕುಮಾರಣ್ಣ ವಿಶ್ವಾಸಮತ ಯಾಚನೆ ಮಾಡೇ ಮಾಡುತ್ತಾರೆ ಎಂದು ದೇವನಹಳ್ಳಿ ಶಾಸಕ ನಿಸರ್ಗ ನಾರಾಯಣಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದ್ರು.

ನಿಸರ್ಗ ನಾರಾಯಣಸ್ವಾಮಿ, ಶಾಸಕ

ದೇವನಹಳ್ಳಿ ಗಾಲ್ಫ್​​ ಶೈರ್ ರೆಸಾರ್ಟ್ ಬಳಿ ಮಾತನಾಡಿದ ಅವರು, ಎರಡೂ ಪಕ್ಷದ ಶಾಸಕರ ಮನವೊಲಿಸುವ ಕೆಲಸ ಮಾಡಲಾಗುತ್ತಿದೆ. ನಮ್ಮ ಮುಖಂಡರು ಮನವೊಲಿಸಲು ಪ್ರಯತ್ನ ಪಡುತ್ತಿದ್ದಾರೆ. ಗುರುವಾರ ವಿಶ್ವಾಸಮತ ಯಾಚಿಸುತ್ತಾರೆ. ಎಲ್ಲರೂ ನಮ್ಮ ಜೊತೆ ಬರುವ ವಿಶ್ವಾಸವಿದೆ ಎಂದರು.

ಬೆಳಿಗ್ಗೆ ಬಸ್​ನಲ್ಲಿ ಹೊರಟ ಶಾಸಕರು ಸಂಜೆ ಕಾರುಗಳಲ್ಲಿ ಒಬ್ಬೊಬ್ಬರಾಗಿ ರೆಸಾರ್ಟ್​ನತ್ತ ಆಗಮಿಸುತ್ತಿದ್ದಾರೆ. ಕೆಲವು‌ ಶಾಸಕರು ಬಸ್​ನಲ್ಲಿ ಬರುತ್ತಿದ್ದಾರೆ. ಗುರುವಾರದವರೆಗೂ ಜೆಡಿಎಸ್​​ನ ಎಲ್ಲಾ ಶಾಸಕರು ರೆಸಾರ್ಟ್​ನಲ್ಲೇ ಉಳಿಯಲಿದ್ದೇವೆ. ಅಧಿವೇಶನದ ನಂತರ ಕೆಲಸ ಕಾರ್ಯಗಳನ್ನ ಮುಗಿಸಿ ರೆಸಾಟ್​​ಗೆ ಅಗಮಿಸುತ್ತಿದ್ದೇವೆ ಎಂದು‌ ನಿಸರ್ಗ ನಾರಾಯಣಸ್ವಾಮಿ‌ ಹೇಳಿದ್ರು.

ABOUT THE AUTHOR

...view details