ಕರ್ನಾಟಕ

karnataka

ETV Bharat / state

ನಾಳೆ ಆಯುಧ ಪೂಜೆ... ಬೆಂಗಳೂರಲ್ಲಿ ಪೂಜಾ ಸಾಮಗ್ರಿಗಳ ಖರೀದಿ ಜೋರು - ಅದ್ಧೂರಿಯಾಗಿ ಹಬ್ಬ

ಉದ್ಯಾನನಗರಿ ಬೆಂಗಳೂರಿನಲ್ಲಿ ದಸರಾ ಹಬ್ಬ ಕಳೆಗಟ್ಟಿದ್ದು, ನಾಳೆ ಆಯುಧ ಪೂಜೆ, ನಾಡಿದ್ದು ವಿಜಯ ದಶಮಿ ಇರುವ ಹಿನ್ನೆಲೆ ಜನರು ಶಾಪಿಂಗ್​​ನಲ್ಲಿ ಬ್ಯುಸಿಯಾಗಿದ್ದ ದೃಶ್ಯ ಕಂಡು ಬಂತು.‌ ಕೆ.ಆರ್. ಮಾರುಕಟ್ಟೆಯಲ್ಲಿ ಎತ್ತ ನೋಡಿದ್ರು ಹೂ, ಬಾಳೆ ಕಂಬ ಹಾಗೂ ಕುಂಬಳಕಾಯಿಯದ್ದೆ ಕಾರುಬಾರು. ಇತ್ತ ಟ್ರಾಫಿಕ್ ಪೊಲೀಸರು ಟ್ರಾಫಿಕ್ ನಿಯಂತ್ರಿಸಲು ಹರಸಾಹಸ ಪಟ್ಟಿದ್ದಾರೆ.

ಉದ್ಯಾನನಗರಿಯಲ್ಲಿ ಆಯುಧ ಪೂಜೆಯ ಸಂಭ್ರಮ...

By

Published : Oct 6, 2019, 7:49 PM IST

ಬೆಂಗಳೂರು:ಉದ್ಯಾನನಗರಿ ಬೆಂಗಳೂರಿನಲ್ಲಿ ದಸರಾ ಹಬ್ಬ ಕಳೆಗಟ್ಟಿದ್ದು, ನಾಳೆ ಆಯುಧ ಪೂಜೆ, ನಾಡಿದ್ದು ವಿಜಯ ದಶಮಿ ಇರುವ ಹಿನ್ನೆಲೆ ಜನರು ಶಾಪಿಂಗ್​​ನಲ್ಲಿ ಬ್ಯುಸಿಯಾಗಿದ್ದ ದೃಶ್ಯ ಕಂಡು ಬಂತು.‌ ಕೆ.ಆರ್. ಮಾರುಕಟ್ಟೆಯಲ್ಲಿ ಎತ್ತ ನೋಡಿದ್ರು ಹೂ, ಬಾಳೆ ಕಂಬ ಹಾಗೂ ಕುಂಬಳಕಾಯಿಯದ್ದೆ ಕಾರುಬಾರು. ಇತ್ತ ಟ್ರಾಫಿಕ್ ಪೊಲೀಸರು ಟ್ರಾಫಿಕ್ ನಿಯಂತ್ರಿಸಲು ಹರಸಾಹಸ ಪಟ್ಟಿದ್ದಾರೆ.

ಉದ್ಯಾನನಗರಿಯಲ್ಲಿ ಆಯುಧ ಪೂಜೆಯ ಸಂಭ್ರಮ


ನಾಳೆ ಆಯುಧ ಪೂಜೆ ಹಿನ್ನೆಲೆ ಮಾರುಕಟ್ಟೆಯಲ್ಲಿ ಹೂ, ಬಾಳೆ ಕಂಬ ಹಾಗೂ ಕುಂಬಳಕಾಯಿ ಖರೀದಿ ಜೋರಾಗಿತ್ತು. ಹಬ್ಬದ ಕಾರಣ ಪೂಜಾ ಸಾಮಗ್ರಿಗಳ ಬೆಲೆ ಕೂಡ ಗಗನಕ್ಕೇರಿದೆ.


ಬಾಳೆ ಕಂಬ- 50-150 ರೂಪಾಯಿ
ನಿಂಬೆಹಣ್ಣು- 7 ರೂ. ( ಒಂದಕ್ಕೆ)
ಕುಂಬಳಕಾಯಿ- 150-200 ರೂ. (ಗಾತ್ರಕ್ಕೆ ತಕ್ಕಂತೆ)
ಕಡ್ಲೆಪುರಿ- 1 ಲೀಟರ್‌ಗೆ 9 ರೂಪಾಯಿ.

ಹೂವುಗಳ ದರ:

ಮಲ್ಲಿಗೆ- 800-1000 (ಕೆಜಿ)
ರೋಸ್- 200 (ಕೆಜಿ)
ಸೇವಂತಿಗೆ-100-200 ( ಕೆಜಿ)
ಸುಗಂಧ ರಾಜಾ-200-300( ಕೆಜಿ)
ಕನಕಾಂಬರ- 1000 ( ಕೆಜಿ)
ಕಾಕಡ- 500( ಕೆಜಿ)
ಚೆಂಡು ಹೂ- 80-100 (ಮಾರು)

ಆಯುಧ ಪೂಜೆಗೆ ಹೂ, ನಿಂಬೆಹಣ್ಣು, ಕುಂಬಳಕಾಯಿ, ಕಡ್ಲೆಪುರಿಗೆ ಹೆಚ್ಚು ಬೇಡಿಕೆ ಇರೋದ್ರಿಂದ ಇವುಗಳ ದರ ಹೆಚ್ಚಾಗಿದೆ. ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಾಗಿರೋದ್ರಿಂದ ವ್ಯಾಪಾರಿಗಳು ಬೆಲೆ ಜಾಸ್ತಿ ಮಾಡಿದ್ದಾರೆ ಎನ್ನಲಾಗಿದೆ.


ABOUT THE AUTHOR

...view details