ಬೆಂಗಳೂರು : ಅತ್ಯುತ್ತಮ ಸಾರಿಗೆ ಸೇವೆ ಮೂಲಕ ರಾಷ್ಟ್ರೀಯ ಪ್ರಶಸ್ತಿಗಳ ಬೇಟೆಯನ್ನು ಮುಂದುವರೆಸಿರುವ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಮತ್ತಷ್ಟು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದೆ. ಕೆಎಸ್ಆರ್ಟಿಸಿಗೆ ಒಟ್ಟು 9 ವರ್ಗಗಳಲ್ಲಿ ಹಾಗೂ ಬಿಎಂಟಿಸಿಗೆ 4 ವರ್ಗಗಳಲ್ಲಿ ಭಾರತೀಯ ಸಾರ್ವಜನಿಕ ಸಂಪರ್ಕ ಮಂಡಳಿಯ ರಾಷ್ಟ್ರೀಯ ಪ್ರಶಸ್ತಿಗಳನ್ನು ನೀಡಿದೆ.
ಭಾರತೀಯ ಸಾರ್ವಜನಿಕ ಸಂಪರ್ಕ ಮಂಡಳಿ ನವದೆಹಲಿಯ ಪಿಹೆಚ್ಡಿ ಚೇಂಬರ್ಸ್ನಲ್ಲಿ ಆಯೋಜಿಸಿದ್ದ 17ನೇ ವಿಶ್ವ ಸಂವಹನ ಸಮ್ಮೇಳನ ಮತ್ತು ಪ್ರಶಸ್ತಿ ಸಮಾರಂಭದಲ್ಲಿ ಬಾಂಗ್ಲಾದೇಶದ ಮಾಹಿತಿ ಆಯುಕ್ತ ಗುಲಾಂ ರೆಹಮಾನ್, ಪಿ.ಆರ್.ಸಿ.ಐ ಗೌರವ ಮುಖ್ಯಸ್ಥರು ಎಂ ಬಿ ಜಯರಾಂ, ಎನ್.ಎಫ್.ಎಲ್ ನಿರ್ದೇಶಕ ಬಿ ವಿ ವಿಠ್ಠಲ್, ಸ್ವಿಟ್ಜರ್ಲೆಂಡ್ನ ಮಾಧ್ಯಮ ಹಾಗೂ ಪತ್ರಿಕೋದ್ಯಮ ಸಂಸ್ಥೆ ನಿರ್ದೇಶಕ ಪ್ರೊ. ಮ್ಯಾಥ್ಯು ಹಿಬರ್ಡ್ ಅವರು ಕೆಎಸ್ಆರ್ಟಿಸಿ ಮತ್ತು ಬಿಎಂಟಿಸಿಗೆ ಪ್ರಶಸ್ತಿ ಪ್ರದಾನ ಮಾಡಿದರು.
ಕೆಎಸ್ಆರ್ಟಿಸಿಯ ವಿಭಾಗೀಯ ನಿಯಂತ್ರಣಾಧಿಕಾರಿಗಳಾದ ಹಿಮವರ್ಧನ ನಾಯ್ಡು ಅಲೂರಿ, ವಿ. ಬಸವರಾಜು, ಎಸ್. ಲಕ್ಷ್ಮಣ್, ಎಸ್.ಪಿ ನಾಗರಾಜ ಅವರು ಪ್ರಶಸ್ತಿಯನ್ನು ನಿಗಮದ ಪರವಾಗಿ ಸ್ವೀಕರಿಸಿದರು. ಬಿಎಂಟಿಸಿಗೆ 4 ವರ್ಗಗಳಲ್ಲಿ ಪ್ರಶಸ್ತಿ ಲಭಿಸಿದ್ದು, ಪಶ್ಚಿಮ ವಲಯ ವಿಭಾಗೀಯ ನಿಯಂತ್ರಣಾಧಿಕಾರಿ ಶ್ರೀನಾಥ್ ಎನ್, ಅವರು ಸಂಸ್ಥೆಯ ಪರವಾಗಿ ಪ್ರಶಸ್ತಿಯನ್ನು ಸ್ವೀಕರಿಸಿದರು.
ಕೆಎಸ್ಆರ್ಟಿಸಿ :
1. ವರ್ಷದ ಅತ್ಯುತ್ತಮ ಗ್ರಾಹಕ ಸ್ನೇಹಿ ಸಂಸ್ಥೆ- ಡೈಮಂಡ್ ಪ್ರಶಸ್ತಿ
2. ಅತ್ಯುತ್ತಮ ವರ್ಷದ ಸೇವಾ ಉಪಕ್ರಮ - ಡೈಮಂಡ್ ಪ್ರಶಸ್ತಿ
3. ಸಾಂಸ್ಥಿಕ ಹಾಗೂ ವ್ಯಾವಹಾರಿಕ ಸಂಪರ್ಕ ಉಪಕ್ರಮ- ಡೈಮಂಡ್ ಪ್ರಶಸ್ತಿ
4. ಗ್ರಾಹಕ ಸೇವೆಯಲ್ಲಿ ಅತ್ಯುತ್ತಮ ತಾಂತ್ರಿಕತೆ ಬಳಕೆ- ಬೆಳ್ಳಿ ಪ್ರಶಸ್ತಿ
5. ವಿವಿಧತೆ ಹಾಗೂ ಸಮಾನತೆಯ ಉತ್ತಮ ಉಪಕ್ರಮ- ಬೆಳ್ಳಿ ಪ್ರಶಸ್ತಿ
6. ಅತ್ಯುತ್ತಮ ವರ್ಷದ ಉಪಕ್ರಮ ಉತ್ಪನ್ನ- ಬೆಳ್ಳಿ ಪ್ರಶಸ್ತಿ