ಕರ್ನಾಟಕ

karnataka

ETV Bharat / state

ಅಪ್ಪನ ಹೆಗಲ ಮೇಲೆ ಕುಳಿತು ದಸರಾ ನೋಡುತ್ತಿದ್ದ ನನಗೆ ಮತ್ತೆ ದಸರಾದಲ್ಲಿ ಪಾಲ್ಗೊಳ್ಳುವ ಅವಕಾಶ ಸಿಕ್ಕಿದ್ದು ಸೌಭಾಗ್ಯ: ಸಿಎಂ ಸಿದ್ದರಾಮಯ್ಯ - ಆಹ್ವಾನ ಸ್ವೀಕರಿಸಿದ ಸಿಎಂ ಸಿದ್ದರಾಮಯ್ಯ

ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಸಿ.ಮಹದೇವಪ್ಪ ನೇತೃತ್ವದ ಜಿಲ್ಲಾಡಳಿತದ ನಿಯೋಗ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಭೇಟಿಯಾಗಿ ವಿಶ್ವ ವಿಖ್ಯಾತ ದಸರಾದ ಆಹ್ವಾನ ಪತ್ರಿಕೆ ನೀಡಿದರು.

welcomed to C M Siddaramaiah
ಜಿಲ್ಲಾಡಳಿತದಮೈಸೂರು ಜಿಲ್ಲಾಡಳಿತ ನಿಯೋಗ ಸಿಎಂ ಸಿದ್ದರಾಮಯ್ಯ ಅವರಿಗೆ ದಸರಾದ ಆಹ್ವಾನಪತ್ರಿಕೆ ನೀಡಿ ಸ್ವಾಗತಿಸಿತು.

By ETV Bharat Karnataka Team

Published : Oct 11, 2023, 3:48 PM IST

Updated : Oct 11, 2023, 10:57 PM IST

ಬೆಂಗಳೂರು:ಅಪ್ಪನ ಹೆಗಲ ಮೇಲೆ ಕುಳಿತು ದಸರಾ ನೋಡುತ್ತಿದ್ದ ನನಗೆ ಮತ್ತೊಮ್ಮೆ ಮುಖ್ಯಮಂತ್ರಿಯಾಗಿ ದಸರಾದಲ್ಲಿ ಪಾಲ್ಗೊಳ್ಳುವ ಅವಕಾಶ ಸಿಕ್ಕಿದ್ದು ಸೌಭಾಗ್ಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಿಂದಿನ ನೆನಪುಗಳನ್ನು ಸ್ಮರಿಸಿದರು. ದಸರಾದಲ್ಲಿ ಭಾಗವಹಿಸಲು ನೀಡಿದ ಆಹ್ವಾನ ಪತ್ರಿಕೆಯನ್ನು ಅವರು ಸಂತೋಷದಿಂದ ಸ್ವೀಕರಿಸಿದರು.

ಸಿಎಂ ಸಿದ್ದರಾಮಯ್ಯನವರಿಗೆ ಇಂದು ಮೈಸೂರು ಉಸ್ತುವಾರಿ ಸಚಿವ ಹೆಚ್.ಸಿ.ಮಹದೇವಪ್ಪ ನೇತೃತ್ವದ ಜಿಲ್ಲಾಡಳಿತದ ನಿಯೋಗ ದಸರಾ ಆಹ್ವಾನಪತ್ರಿಕೆ ನೀಡಿತು. ಗೃಹ ಕಚೇರಿ ಕೃಷ್ಣಾಗೆ ಆಗಮಿಸಿದ ನಿಯೋಗದಲ್ಲಿ ಮೇಯರ್ ಶಿವಕುಮಾರ್, ಶಾಸಕ ರವಿಶಂಕರ್, ಎ.ಆರ್.ಕೃಷ್ಣಮೂರ್ತಿ, ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ, ಜಿ.ಪಂ ಸಿಇಒ ಕೆ.ಎಂ.ಗಾಯಿತ್ರಿ, ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್, ಅಪರ ಜಿಲ್ಲಾಧಿಕಾರಿ ಪಿ.ಶಿವರಾಜು ಸೇರಿದಂತೆ ಹಲವು ಪ್ರಮುಖರು ಇದ್ದರು.

ಆಹ್ವಾನ ಸ್ವೀಕರಿಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ದಸರಾ ನನ್ನೂರ ಹಬ್ಬ. ನಾನು ಬಾಲ್ಯದಲ್ಲಿ ಅಪ್ಪನ ಹೆಗಲ ಮೇಲೆ ಕುಳಿತು ದಸರಾ ನೋಡುತ್ತಿದ್ದೆ. ಈಗ ಮತ್ತೊಮ್ಮೆ ಸಿಎಂ ಆಗಿ ದಸರಾದಲ್ಲಿ ಪಾಲ್ಗೊಳ್ಳುವ ಅವಕಾಶ ದೊರೆತಿದ್ದು ನನ್ನ ಸೌಭಾಗ್ಯ. ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಸಿ.ಮಹದೇವಪ್ಪ ನೇತೃತ್ವದ ನಿಯೋಗವು ದಸರಾದ ಆಹ್ವಾನಪತ್ರಿಕೆ ನೀಡಿದ ಸಂದರ್ಭದಲ್ಲಿ ಸಂತೋಷದಿಂದ ಆಹ್ವಾನ ಸ್ವೀಕರಿಸಿ, ಆಗಮಿಸುವುದಾಗಿ ತಿಳಿಸಿದ್ದೇನೆ ಎಂದರು.

ಸಮಾಜ-ಸರ್ಕಾರದ ನಡುವೆ ಮಾಧ್ಯಮಗಳು ಸೇತುವೆ ಆಗಬೇಕು- ಸಿಎಂ:ಸಮಾಜ ಮತ್ತು ಸರ್ಕಾರದ ನಡುವೆ ಮಾಧ್ಯಮಗಳು ಪ್ರಗತಿ ಮತ್ತು ಸೌಹಾರ್ದದ ಸೇತುವೆಯಾಗಬೇಕು. ಬರವಣಿಗೆ ಜನರ ಬದುಕನ್ನು ಉನ್ನತೀಕರಿಸುವಂತಿರಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಲಹೆ ನೀಡಿದರು. ಗೃಹ ಕಚೇರಿ ಕೃಷ್ಣಾದಲ್ಲಿ ಕೊಪ್ಪಳ ವಿಶ್ವವಿದ್ಯಾಲಯದ ಕುಲಪತಿ ಬಿ.ಕೆ.ರವಿ ಅವರ ಸಂಪಾದಕತ್ವದ ಮೀಡಿಯಾ ಆಫ್ ದಿ ಮಿಲೇನಿಯಂ ಕೃತಿ ಬಿಡುಗಡೆ ಮಾಡಿ ಅವರು ಮಾತನಾಡಿದರು. ಬಿ.ಕೆ.ರವಿ ಅವರಿಗೆ ಬರೆಯುವ ಶಕ್ತಿ ಇದೆ. ಇದುವರೆಗೂ ಒಂಬತ್ತು ಕೃತಿಗಳನ್ನು ರಚಿಸಿದ್ದಾರೆ. ಮಾಧ್ಯಮ ಸಾಕ್ಷರತೆ ಕುರಿತಾದ ಈ ಹೊಸ ಪುಸ್ತಕ ಮಾಧ್ಯಮ ಕ್ಷೇತ್ರದ ಅರಿವನ್ನು ವಿಸ್ತರಿಸಲಿ. ವೃತ್ತಿಧರ್ಮ ಕಾಪಾಡಿಕೊಂಡರೆ ಪತ್ರಿಕಾ ವೃತ್ತಿಯ ಘನತೆ ಉಳಿಯುತ್ತದೆ. ಸಂವಿಧಾನದ ಮೌಲ್ಯಗಳನ್ನು ಕಾಪಾಡಲು ಪತ್ರಕರ್ತರು ಮುಂದಾಗಬೇಕು. ಸಂವಿಧಾನ ಉಳಿದರೆ ಪತ್ರಿಕಾ ವೃತ್ತಿಯ ಸ್ವಾತಂತ್ರ್ಯವೂ ಉಳಿಯುತ್ತದೆ ಎಂದರು.

ಮೀಡಿಯಾ ಆಫ್ ದಿ ಮಿಲೇನಿಯಂ ಕೃತಿಯನ್ನು ಸಿಎಂ ಸಿದ್ದರಾಮಯ್ಯ ಬಿಡುಗಡೆಗೊಳಿಸಿದರು.

ಭಾರತೀಯ ಮಾಧ್ಯಮ ಮತ್ತು ಉದ್ಯಮ ಸೃಷ್ಟಿಸಿರುವ ಮತ್ತು ಎದುರಿಸುತ್ತಿರುವ ಇವತ್ತಿನ ಸಮಸ್ಯೆಗಳಿಗೆ ಮಾಧ್ಯಮ ಸಾಕ್ಷರತೆ ಪರಿಹಾರ ಆಗಬಲ್ಲದು. ಹೀಗಾಗಿ ಪದವಿ ಪೂರ್ವ ಹಂತದಿಂದ ಮಾಧ್ಯಮ ಸಾಕ್ಷರತೆಗೆ ಪೂರಕವಾದ ಪಠ್ಯಗಳನ್ನು ಅಳವಡಿಸಲು ಕ್ರಮ ವಹಿಸುವಂತೆ ಕೃತಿಯ ಸಂಪಾದಕ ಬಿ.ಕೆ.ರವಿ ಅವರು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದರು.

ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಮುನ್ನುಡಿ ಹಾಡಿರುವ ಕರ್ನಾಟಕ ಮಾದರಿ ಅಭಿವೃದ್ಧಿ ಕುರಿತಾಗಿ ಪತ್ರಿಕೋದ್ಯಮ ವಿದ್ಯಾರ್ಥಿಗಳು ಸಿದ್ದಪಡಿಸಿದ್ದ ಕಿರುಚಿತ್ರವನ್ಮು ಇದೇ ಸಂದರ್ಭದಲ್ಲಿ ಪ್ರದರ್ಶಿಸಲಾಯಿತು.

ಇದನ್ನೂಓದಿ:'ಮೈಸೂರು ದಸರಾ ಎಂದರೆ ಕುಸ್ತಿ, ಕುಸ್ತಿ ಎಂದರೆ ದಸರಾ': ಕುತೂಹಲದ ಮಾಹಿತಿ

Last Updated : Oct 11, 2023, 10:57 PM IST

ABOUT THE AUTHOR

...view details