ಕರ್ನಾಟಕ

karnataka

ETV Bharat / state

ಸಿದ್ದುರನ್ನು ಎದೆಯಿಂದೆತ್ತಿ ಸೈಡಿಗಿಟ್ಟಿದ್ದೇನೆ: ಈಗ ಹೃದಯದಲ್ಲಿರೋದು ಇವರಷ್ಟೇ: ಎಂಟಿಬಿ - MTB nagaraju news

ಅವತ್ತು ಎದೆ ಬಗೆದರೆ ಸಿದ್ದರಾಮಯ್ಯ ಇದ್ದಾರೆ ಅಂದಿದ್ದು ನಿಜ. ಆದರೆ, ಈಗ ಅವರನ್ನು ಎತ್ತಿ ಸೈಡಿಗಿಟ್ಟಿದ್ದೇನೆ. ಈಗ ನನ್ನ ಎದೆಯಲ್ಲಿ ಕ್ಷೇತ್ರದ ಜನ ಇದ್ದಾರೆ ಎಂದು ಸಿದ್ದರಾಮಯ್ಯ ವಿರುದ್ಧ ಎಂಟಿಬಿ ನಾಗರಾಜ ವ್ಯಂಗ್ಯವಾಡಿದರು.

ಎಂಟಿಬಿ ನಾಗರಾಜ್

By

Published : Sep 13, 2019, 2:08 PM IST

ಬೆಂಗಳೂರು: ಈಗ ನನ್ನ ಎದೆಯಲ್ಲಿ ಸಿದ್ದರಾಮಯ್ಯನೂ ಇಲ್ಲ, ಯಡಿಯೂರಪ್ಪನೂ ಇಲ್ಲ. ನನ್ನ ಎದೆಯಲ್ಲಿ ಇರುವುದು ಕ್ಷೇತ್ರದ ಜನರು ಎಂದು ಅನರ್ಹ ಶಾಸಕ ಎಂಟಿಬಿ ನಾಗರಾಜ್ ಟಾಂಗ್ ನೀಡಿದರು‌.

ಬಾಲಬ್ರೂಯಿ ಅತಿಥಿ ಗೃಹದ ಬಳಿ ಇರುವ ಡಾ.ಸುಧಾಕರ್ ಅಪಾರ್ಟ್ ‌ಮೆಂಟ್ ನಲ್ಲಿ ಸಭೆ ನಡೆಸಿ ಬಳಿಕ‌ ಮಾತನಾಡಿದ ಅವರು, ಸಭೆ ಅಂತ ಮಾಡಿಲ್ಲ ಬಹಳ ದಿನಗಳ ನಂತರ ಸುಧಾಕರ್ ಗೆಸ್ಟ್ ಹೌಸ್​ನಲ್ಲಿ ಸೇರಿದ್ದೇವೆ. ಒಳ್ಳೆ ಬ್ರೇಕ್ ಫಾಸ್ಟ್ ಮಾಡಿದ್ದೇವೆ. ಕೋರ್ಟ್ ವಿಚಾರ ಮಾತನಾಡಿದ್ದೇವೆ ಎಂದರು.

ಅವತ್ತು ಎದೆ ಬಗೆದರೆ ಸಿದ್ದರಾಮಯ್ಯ ಇದಾರೆ ಅಂದಿದ್ದು ನಿಜ. ಆದರೆ, ಈಗ ಅವರನ್ನು ಎತ್ತಿ ಸೈಡಿಗಿಟ್ಟಿದ್ದೇನೆ. ಈಗ ನನ್ನ ಎದೆಯಲ್ಲಿ ಕ್ಷೇತ್ರದ ಜನ ಇದ್ದಾರೆ ಎಂದು ಸಿದ್ದರಾಮಯ್ಯ ವಿರುದ್ಧ ವ್ಯಂಗ್ಯವಾಡಿದರು.

ಎಂಟಿಬಿ ನಾಗರಾಜ್

ಮುನಿಯಪ್ಪ ಸೋಲಿಗೆ ರಮೇಶ್ ಕುಮಾರ್ ಸಹ ಕಾರಣ ಅಂತ ಮುನಿಯಪ್ಪ ಹೈ ಕಮಾಂಡ್​ಗೆ ದೂರು ಕೊಟ್ಟಿರುವ ವಿಚಾರವಾಗಿ ಮಾತನಾಡಿದ ಅವರು, ನಮ್ಮ ವಿರುದ್ಧ ಪಕ್ಷ ವಿರೋಧಿ ಚಟುವಟಿಕೆ ಅಂತ ಕ್ರಮ ತಗೆದುಕೊಂಡರು. ಹಾಗಾದ್ರೆ ರಮೇಶ್ ಕುಮಾರ್ ವಿರುದ್ಧ ಯಾಕೆ ಕ್ರಮ ಇಲ್ಲ. ರಾಜ್ಯ ನಾಯಕರು ಹಾಗೂ ಕೇಂದ್ರ ನಾಯಕರು ಯಾಕೆ ಮಾತನಾಡುತ್ತಿಲ್ಲ ಎಂದು ಪ್ರಶ್ನಿಸಿದ ಅವರು, ಸದ್ಯಕ್ಕೆ ಬಿಜೆಪಿ ನಾಯಕರ ಮೇಲೆ ಅಸಮಾಧಾನ ಇಲ್ಲ. ಮುಂದೆ ನೋಡೋಣ ಎಂದು ತಿಳಿಸಿದರು.

ABOUT THE AUTHOR

...view details