ಕರ್ನಾಟಕ

karnataka

ETV Bharat / state

ನಾಲ್ಕು ವರ್ಷದಿಂದ ಪೊಲೀಸರಿಗೆ ಸಿಗದ ಆರೋಪಿ ಪತ್ನಿ ಜೊತೆ ಜಗಳವಾಡಿ ಸಿಕ್ಕಿಬಿದ್ದ - ಆರೋಪಿ ಪತ್ನಿ ಜೊತೆ ಜಗಳವಾಡಿ ಸಿಕ್ಕಿಬಿದ್ದ

ಮನೆಕಳ್ಳತನ ಸುಲಿಗೆ ಸೇರಿದಂತೆ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿ ಕಳೆದ ನಾಲ್ಕು ವರ್ಷದಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

Kn_bng_
ಬಂಧಿತ ಆರೋಪಿ

By

Published : Sep 26, 2022, 1:23 PM IST

ಬೆಂಗಳೂರು: ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿ ನಾಲ್ಕು ವರ್ಷಗಳಿಂದಲೂ ಪೊಲೀಸರ ಕೈಗೆ ಸಿಗದೆ ತಲೆಮರೆಸಿಕೊಂಡಿದ್ದ ಕುಖ್ಯಾತ ಆರೋಪಿಯನ್ನು ಅಶೋಕನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ‌.

ಅಸೀಫ್ ಬಂಧಿತ ಆರೋಪಿ. ನಗರದ ವಿವಿಧೆಡೆ ಕಳ್ಳತನ, ಸುಲಿಗೆ, ಮನೆಗಳ್ಳತನ, ಸರಗಳ್ಳತನ ಸೇರಿದಂತೆ ಮೂವತ್ತಕ್ಕೂ ಹೆಚ್ಚು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆಸೀಫ್ ಕಳೆದ ನಾಲ್ಕು ವರ್ಷದಿಂದ ಪೊಲೀಸರ ಕೈಗೆ ಸಿಗದೆ ತಲೆ ಮರೆಸಿಕೊಂಡಿದ್ದ. ಇತ್ತೀಚೆಗೆ ಆಸೀಫ್​ ತನ್ನ ಪತ್ನಿ ಜೊತೆ ಜಗಳವಾಡಿಕೊಂಡು ಮನೆಯಿಂದ ದೂರವಾಗಿದ್ದ.

ತನ್ನ ಮಗಳನ್ನು ನೋಡಲು ಅವಕಾಶ ಸಿಗದ ಹಿನ್ನೆಲೆ ಶಾಲೆಯಲ್ಲಿ ಓದುತ್ತಿದ್ದ ಮಗಳನ್ನು ಗುಟ್ಟಾಗಿ ಹೋಗಿ ನೋಡಿಕೊಂಡು ಬರುತ್ತಿದ್ದ. ಈ ಕುರಿತು ಮಾಹಿತಿ ಪಡೆದ ಅಶೋಕನಗರ ಠಾಣಾ ಪೊಲೀಸರು ತನ್ನ ಮಗಳ ಶಾಲಾ ವಾಹನದಲ್ಲಿ ಹೋಗಿ ಆತನನ್ನು ಬಂಧಿಸಿದ್ದಾರೆ. ಸದ್ಯ ಬಂಧಿತ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ.

ಇದನ್ನೂ ಓದಿ:ಬೆಂಗಳೂರಲ್ಲಿ ಚಾಲಕನಿಗೆ ಮದ್ಯ ಕುಡಿಸಿ ಮಕ್ಮಲ್​ ಟೋಪಿ.. ಕಾರು ಕದ್ದು ಪರಾರಿಯಾಗಿದ್ದ ದಂಪತಿ ಅರೆಸ್ಟ್​​

ABOUT THE AUTHOR

...view details