ಬೆಂಗಳೂರು:ದಿನೇ ದಿನೆ ಜಟಿಲಗೊಳ್ಳುತ್ತಿರುವ ಸಂಚಾರ ಸಮಸ್ಯೆ ಕಡಿಮೆ ಮಾಡಲು ಸುಮಾರು 500ಕ್ಕೂ ಹೆಚ್ಚು ಮಂದಿ ಟ್ರಾಫಿಕ್ ವಾರ್ಡನ್ಗಳಾಗಿ ಸೇವೆ ಸಲ್ಲಿಸಲು ಸ್ವಯಂ ಪ್ರೇರಿತವಾಗಿ ಮುಂದೆ ಬರುತ್ತಿದ್ದಾರೆ ಎಂದು ನಗರ ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ರವಿಕಾಂತೇಗೌಡ ತಿಳಿಸಿದರು.
ಟ್ರಾಫಿಕ್ ವಾರ್ಡನ್ಗಳಾಗಿ ಸೇವೆ ಸಲ್ಲಿಸಲು ಮುಂದೆ ಬಂದ 500ಕ್ಕೂ ಹೆಚ್ಚು ಜನ! - ಟ್ರಾಫಿಕ್ ವಾರ್ಡನ್
ನಗರ ಬೆಳೆದಂತೆಲ್ಲ ಜನಸಂಖ್ಯೆ ಹೆಚ್ಚಳ ಜೊತೆಗೆ ವಾಹನಗಳ ಸಂಖ್ಯೆಯು ಅಧಿಕವಾಗಿದೆ. ಇದರಿಂದ ನಗರದ ಬಹುತೇಕ ರಸ್ತೆಗಳಲ್ಲಿ ಟ್ರಾಫಿಕ್ ಜಾಮ್ ಆಗುತ್ತಿದೆ. ಸುಮಾರು 390 ಮಂದಿ ಟ್ರಾಫಿಕ್ ವಾರ್ಡನ್ಗಳು ಕಾರ್ಯನಿರ್ವಹಿಸುತ್ತಿದ್ದರೂ ಸಮಸ್ಯೆ ಮಾತ್ರ ಹಾಗೆ ಉಳಿದಿದೆ. ಈ ಸಂಬಂಧ ಪೊಲೀಸರು ಸಾಮಾಜಿಕ ಜಾಲತಾಣಗಳಲ್ಲಿ ಟ್ರಾಫಿಕ್ ವಾರ್ಡನ್ಗಳ ಅಗತ್ಯವಿದೆ ಎಂದು ಪೋಸ್ಟ್ ಮಾಡಿದ ಪರಿಣಾಮ ಸ್ವಯಂ ಪ್ರೇರಿತವಾಗಿ 500ಕ್ಕೂ ಹೆಚ್ಚು ಮಂದಿ ಟ್ರಾಫಿಕ್ ವಾರ್ಡನ್ಗಳಾಗಿ ಕಾರ್ಯನಿರ್ವಹಿಸಲು ಮುಂದಾಗಿದ್ದಾರೆ.
ಈಟಿವಿ ಭಾರತ ಜೊತೆ ಮಾತನಾಡಿದ ಅವರು, ನಗರ ಬೆಳೆದಂತೆಲ್ಲ ಜನಸಂಖ್ಯೆ ಹೆಚ್ಚಳ ಜೊತೆಗೆ ವಾಹನಗಳ ಸಂಖ್ಯೆಯು ಅಧಿಕವಾಗಿದೆ. ಇದರಿಂದ ನಗರದ ಬಹುತೇಕ ರಸ್ತೆಗಳಲ್ಲಿ ಟ್ರಾಫಿಕ್ ಜಾಮ್ ಆಗುತ್ತಿದೆ. ಇದರಿಂದ ಗಂಟೆಗಟ್ಟಲೇ ವಾಹನ ಸವಾರರು ರಸ್ತೆಯಲ್ಲಿ ಇರಬೇಕಾದ ಪ್ರಮೇಯ ಎದುರಾಗಿದೆ. ಸುಗಮ ಸಂಚಾರ ವ್ಯವಸ್ಥೆ ಕಲ್ಪಿಸಲು ಟ್ರಾಫಿಕ್ ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ಸುಮಾರು 390 ಮಂದಿ ಟ್ರಾಫಿಕ್ ವಾರ್ಡನ್ಗಳು ಕಾರ್ಯನಿರ್ವಹಿಸುತ್ತಿದ್ದರೂ ಸಮಸ್ಯೆ ಮಾತ್ರ ಹಾಗೆ ಉಳಿದಿದೆ. ಈ ನಿಟ್ಟಿನಲ್ಲಿ ಈ ಎಲ್ಲಾ ಸಮಸ್ಯೆಗಳ ಅರಿವಿದ್ಧ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರು ಸಿಲಿಕಾನ್ ಸಿಟಿಯಲ್ಲಿ ಸ್ವಯಂ ಪ್ರೇರಿತವಾಗಿ ಕಾರ್ಯನಿರ್ವಹಿಸಲು ಸುಮಾರು 2500 ಟ್ರಾಫಿಕ್ ವಾರ್ಡನ್ಗಳು ಅಗತ್ಯವಾಗಿದ್ದು, ಆಸ್ತಕರು ಮುಂದೆ ಬರಬಹುದು ಎಂದು ಆಹ್ವಾನಿಸಿದ್ದರು.
ನಗರದ 44 ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಗಳ ಪೊಲೀಸರು ಸಾಮಾಜಿಕ ಜಾಲತಾಣಗಳಲ್ಲಿ ಟ್ರಾಫಿಕ್ ವಾರ್ಡನ್ಗಳ ಅಗತ್ಯವಿದೆ ಎಂದು ಪೋಸ್ಟ್ ಮಾಡಿದ ಪರಿಣಾಮ ಸ್ವಯಂ ಪ್ರೇರಿತವಾಗಿ 500ಕ್ಕೂ ಹೆಚ್ಚು ಮಂದಿ ಟ್ರಾಫಿಕ್ ವಾರ್ಡನ್ಗಳಾಗಿ ಕಾರ್ಯನಿರ್ವಹಿಸಲು ಮುಂದಾಗಿದ್ದಾರೆ. ಟ್ರಾಫಿಕ್ ವಾರ್ಡನ್ಗಳಿಗೆ ಯಾವುದೇ ಸಂಬಳವಿರುವುದಿಲ್ಲ. ಸಾಮಾಜಿಕ ಕಳಕಳಿ ಮೇರೆಗೆ ಇವರು ಕಾರ್ಯನಿರ್ವಹಿಸಲಿದ್ದಾರೆ ಎಂದರು.