ಬೆಂಗಳೂರು: ವಿಧಾನಸೌಧ ಆವರಣದಲ್ಲಿ ಪತ್ತೆಯಾಗಿದ್ದ ಕಂತೆ ಕಂತೆ ನೋಟು ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಮೋಹನ್ಗೆ ಜಾಮೀನು ಸಿಕ್ಕಿದೆ. ಅರ್ಜಿ ವಿಚಾರಣೆ ನಡೆಸಿದ ಲೋಕಾಯುಕ್ತ ವೀಶೇಷ ನ್ಯಾಯಲಯ ಮೋಹನ್ಗೆ ಜಾಮೀನು ಷರತ್ತುಬದ್ಧ ಜಾಮೀನು ನೀಡಿದೆ.
ವಿಧಾನಸೌಧ ಗೇಟ್ನಲ್ಲಿ ಹಣ ಪತ್ತೆ ಪ್ರಕರಣ: ಲೋಕಾಯುಕ್ತ ಕೋರ್ಟ್ನಿಂದ ಮೋಹನ್ಗೆ ಜಾಮೀನು
ವಿಧಾನಸೌಧ ಆವರಣದಲ್ಲಿ ಸಿಕ್ಕ ಕಂತೆ ಕಂತೆ ಹಣ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಮೋಹನ್ಗೆ ನ್ಯಾಯಾಲಯ ಷರತ್ತುಬದ್ದ ಜಾಮೀನು ಮಂಜೂರು ಮಾಡಿದೆ.
ಮೋಹನ್ಗೆ ಜಾಮೀನು
ಆರೋಪಿ ಪರ ವಾದ ಮಂಡಿಸಿದ ಹಿರಿಯ ವಕೀಲ ಶ್ಯಾಮ್ ಸುಂದರ್, ವಿಧಾನಸೌಧ ಠಾಣೆಯ ಪೊಲೀಸರಿಂದ ಮೋಹನ್ ಬಂಧಿತನಾಗಿದ್ದ. ನಂತರ ಪ್ರಕರಣ ಎಸಿಬಿಗೆ ವರ್ಗಾವಣೆಯಾಗಿತ್ತು. ಈ ಘಟನೆ ನಡೆದು ಈಗಾಗಲೇ 60 ದಿನಕ್ಕೂ ಹೆಚ್ಚು ಕಾಲ ಕಳೆದಿದೆ. ಆದರೂ ಇದುವರೆಗೂ ಪ್ರಕರಣದಲ್ಲಿ ಚಾರ್ಜ್ ಶೀಟ್ ಸಲ್ಲಿಕೆಯಾಗಿಲ್ಲ. ಈ ಅಂಶಗಳನ್ನ ಮುಂದಿಟ್ಟು ಮೋಹನ್ ಪರ ವಕೀಲರು ವಾದ ಮಾಡಿದ್ರು. ಹೀಗಾಗಿ ಮೋಹನ್ಗೆ ನ್ಯಾಯಾಲಯ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.