ದೇವನಹಳ್ಳಿ: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಮೀಪದ ಏರೊಸ್ಪೇಸ್ ಪಾರ್ಕ್‌ನಲ್ಲಿರುವ ಅತ್ಯಾಧುನಿಕ ಬೋಯಿಂಗ್ ಇಂಡಿಯಾ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕೇಂದ್ರ ಉದ್ಘಾಟಿಸಲು ಪ್ರಧಾನಿ ನರೇಂದ್ರ ಮೋದಿ ಇಂದು ಆಗಮಿಸಲಿದ್ದಾರೆ. ಪ್ರಧಾನಿ ಅವರು ಸಂಚರಿಸುವ ಮಾರ್ಗಗಳಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಗಿದೆ. ಅಲ್ಲದೆ, ವಿಮಾನ ನಿಲ್ದಾಣಕ್ಕೆ ತೆರಳುವ ವಾಹನಗಳಿಗೆ ಪರ್ಯಾಯ ಮಾರ್ಗ ಕಲ್ಪಿಸಲಾಗಿದೆ ಎಂದು ಸಂಚಾರ ಪೊಲೀಸರು ಮಾಹಿತಿ ನೀಡಿದ್ದಾರೆ.
ರಸ್ತೆ ಬದಲಾವಣೆ: ವೈಟ್‌ಫೀಲ್ಡ್, ಕೆ.ಆರ್.ಪುರಂ ಕಡೆಯಿಂದ ಗೊಲ್ಲಹಳ್ಳಿ ಗೇಟ್ ಮಾರ್ಗವಾಗಿ ಕೆಐಎಎಲ್ಗೆ ಸಂಚರಿಸುವ ವಾಹನಗಳು ಪರ್ಯಾಯ ಮಾರ್ಗವಾಗಿ ಗೊಲ್ಲಹಳ್ಳಿ ಗೇಟ್- ಬಲತಿರುವು- ಹೊನ್ನಹಳ್ಳಿ ಗೇಟ್ - ಬೆಟ್ಟಕೋಟೆ – ಏರ್‌ಲೈನ್ ಡಾಬಾ- ಎಡತಿರುವು- ದೇವನಹಳ್ಳಿ ಬಸ್ ನಿಲ್ದಾಣ ಎಡ ತಿರುವು- ದೇವನಹಳ್ಳಿ ಬೈಪಾಸ್ - ಎಡ ತಿರುವು- ಬಿ.ಬಿ. ರಸ್ತೆ- ದೇವನಹಳ್ಳಿ ಟೋಲ್‌ನಲ್ಲಿ ಎಡಕ್ಕೆ ತಿರುವು ಪಡೆದು ಕೆಂಪೇಗೌಡ ವಿಮಾನ ನಿಲ್ದಾಣ ತಲುಪಬಹುದು.
ರಾಷ್ಟ್ರೀಯ ಹೆದ್ದಾರಿ- 648 ಏರ್‌ಲೈನ್ಸ್ ಡಾಬಾ ಜಂಕ್ಷನ್ ಕಡೆಯಿಂದ ಕೆಐಎಡಿಬಿ ಇಂಡಸ್ಟ್ರಿಯಲ್ ಏರಿಯಾದ ಮೂಲಕ ಕೆಐಎಎಲ್ಗೆ ಬರುವ ವಾಹನಗಳು ಏರ್‌ಲೈನ್ಸ್ ಡಾಬಾ -ದೇವನಹಳ್ಳಿ ಬಸ್ ನಿಲ್ದಾಣ- ಎಡ ತಿರುವು ದೇವನಹಳ್ಳಿ ಬೈಪಾಸ್- ಎಡ ತಿರುವು– ಬಿಬಿ ರಸ್ತೆ- ದೇವನಹಳ್ಳಿ ಟೋಲ್‌ನಲ್ಲಿ ಎಡ ತಿರುವು ಪಡೆದು ವಿಮಾನ ನಿಲ್ದಾಣಕ್ಕೆ ತೆರಳಬಹುದು.