ಬೆಂಗಳೂರು:ಲೋಕಾಯುಕ್ತ ಇಲಾಖೆ ಆಸ್ತಿ ವಿವರ ಸಲ್ಲಿಸದೇ ಇರುವ ಜನಪ್ರತಿನಿಧಿಗಳಿಗೆ ಆಸ್ತಿ ವಿವರ ದಾಖಲಿಸುವಂತೆ ಜನಪ್ರತಿನಿಧಿಗಳ ಹೆಸರು ಸಮೇತ ದಿನಪತ್ರಿಕೆಗಳಲ್ಲಿ ಪತ್ರಿಕಾ ಪ್ರಕಟಣೆ ಹೊರಡಿಸಿದೆ. 2020-22ರ ಸಾಲಿನಲ್ಲಿ ಆಸ್ತಿ ವಿವರ ಸಲ್ಲಿಸದೆ ಜನಪ್ರತಿನಿಧಿಗಳು ಲೋಪವೆಸಗಿದ್ದಾರೆ. ಹಲವು ಬಾರಿ ಆಸ್ತಿ ವಿವರ ಸಲ್ಲಿಸುವಂತೆ ಕಾಲಾವಕಾಶ ನೀಡಿದರೂ ಶಾಸಕ-ಸಚಿವರು ಮಾತ್ರ ಆಸ್ತಿ ಘೋಷಣೆ ವಿವರ ಸಲ್ಲಿಸಿಲ್ಲ. ಹೀಗಾಗಿ ಕಾನೂನು ಪ್ರಕಾರ ದಿನಪತ್ರಿಕೆಗಳಲ್ಲಿ 81 ಮಂದಿ ಜನಪ್ರತಿನಿಧಿಗಳ ಹೆಸರುಗಳ ಸಮೇತ ಪತ್ರಿಕಾ ಪ್ರಕಟಣೆ ಹೊರಡಿಸಿದೆ.
ಆಸ್ತಿ ವಿವರ ಸಲ್ಲಿಸದ ಜನಪ್ರತಿನಿಧಿಗಳು: ಪತ್ರಿಕಾ ಪ್ರಕಟಣೆ ಹೊರಡಿಸಿದ ಲೋಕಾಯುಕ್ತ - Lokayukta issued press release
Karnataka lokayukta : ಆಸ್ತಿ ವಿವರ ಸಲ್ಲಿಸದ 81 ಶಾಸಕರ ಹೆಸರುಗಳ ಸಮೇತ ಲೋಕಾಯುಕ್ತ ಕಚೇರಿಯು ದಿನ ಪತ್ರಿಕೆಗಳಲ್ಲಿ ಪತ್ರಿಕಾ ಪ್ರಕಟಣೆ ಹೊರಡಿಸಿದೆ.
Published : Nov 30, 2023, 12:59 PM IST
ಜೂನ್ 30 ರೊಳಗೆ ಪ್ರತಿ ವರ್ಷ ಎಲ್ಲ ಜನಪ್ರತಿನಿಧಿಗಳಿಗೂ ಆಸ್ತಿ ವಿವರ ಸಲ್ಲಿಸುವಂತೆ ಸೂಚಿದರೂ, ಈ ಬಗ್ಗೆ ಸೊಪ್ಪು ಹಾಕಿರಲಿಲ್ಲ. ಹೀಗಾಗಿ ಕಳೆದ ಬಾರಿ ಸಚಿವರಾಗಿದ್ದ ಬಿ ಶ್ರೀರಾಮುಲು, ಕೆ.ಸಿ ನಾರಾಯಣಗೌಡ, ಎಸ್. ಅಂಗಾರ ಆಸ್ತಿ ವಿವರ ಸಲ್ಲಿಸದೇ ಲೋಪವೆಸಗಿದ್ದಾರೆ. ಈ ಬಾರಿ ಸಚಿವರಾದ ರಹೀಂ ಖಾನ್, ಕೆ.ಎನ್ ರಾಜಣ್ಣ, ಜಮೀರ್ ಅಹಮ್ಮದ್ ಖಾನ್, ರಾಮಲಿಂಗ ರೆಡ್ಡಿ, ಕೆ.ಎಚ್ ಮುನಿಯಪ್ಪ ಅವರೂ ಆಸ್ತಿ ವಿವರ ಸಲ್ಲಿಸಿಲ್ಲ. ಕಳೆದ ವಿಧಾನಸಭೆ ಅವಧಿಯ 81 ಮಂದಿ ಶಾಸಕರು ಆಸ್ತಿ ವಿವರ ಸಲ್ಲಿಸಿರಲಿಲ್ಲ. ಈ ಬಾರಿಯ ವಿಧಾನಸಭೆ ಅವಧಿಯ 51 ಮಂದಿ ಶಾಸಕರು ಆಸ್ತಿ ವಿವರ ಸಲ್ಲಿಸಿಲ್ಲ. ಆಸ್ತಿ ವಿವರ ಸಲ್ಲಿಸದ ಶಾಸಕರು, ಸಚಿವರಿಗೆ ಲೋಕಾಯುಕ್ತರು ನೋಟಿಸ್ ನೀಡಿದ್ದಾರೆ.
ಇದನ್ನೂ ಓದಿ:ಶಾಸಕರ ಆಸ್ತಿ ವಿವರ ಸಲ್ಲಿಕೆಗೆ ಜೂನ್ 30 ಗಡುವು: ಸಲ್ಲಿಸದಿದ್ದರೆ ಶಿಸ್ತು ಕ್ರಮದ ಎಚ್ಚರಿಕೆ ನೀಡಿದ ಲೋಕಾಯುಕ್ತರು