ಕರ್ನಾಟಕ

karnataka

ETV Bharat / state

ಲೋಕಾ ಮುಂದೆ ಹಾಜರಾದ ಶಾಸಕ ವಿರೂಪಾಕ್ಷಪ್ಪ ಹಾಗೂ ಪುತ್ರ ಪ್ರಶಾಂತ್ ಮಾಡಾಳ್ - ಈಟಿವಿ ಭಾರತ ಕನ್ನಡ

ಇಂದು ಕೆಎಸ್​ಡಿಎಲ್​ಗೆ ರಾಸಾಯನಿಕ ವಸ್ತು ಖರೀದಿಗಾಗಿ ಲಂಚ ಪಡೆದ ಪ್ರಕರಣ ಸಂಬಂಧ ಲೋಕಾಯುಕ್ತರ ಮುಂದೆ ಶಾಸಕ ವಿರೂಪಾಕ್ಷಪ್ಪ ಹಾಗೂ ಪುತ್ರ ಪ್ರಶಾಂತ್​ ಮಾಡಾಳ್​ ಹಾಜರಾಗಿದ್ದಾರೆ.

mla-virupaksappa-and-his-son-prashant-madal-appeared-before-the-lokayuktha
ಲೋಕಾ ಮುಂದೆ ಹಾಜರಾದ ಶಾಸಕ ವಿರೂಪಾಕ್ಷಪ್ಪ ಹಾಗೂ ಪುತ್ರ ಪ್ರಶಾಂತ್ ಮಾಡಾಳ್

By

Published : Mar 13, 2023, 4:02 PM IST

ಬೆಂಗಳೂರು :ಕರ್ನಾಟಕ ಸಾಬೂನು ಮತ್ತು ಮಾರ್ಜಕ ಕಾರ್ಖಾನೆಗೆ (ಕೆಎಸ್ ಡಿಎಲ್) ರಾಸಾಯನಿಕ ವಸ್ತು ಖರೀದಿಗಾಗಿ ಟೆಂಡರ್ ನೀಡಲು ಲಂಚ ಪಡೆದ ಆರೋಪಕ್ಕೆ ಸಂಬಂಧಿಸಿದಂತೆ ಚನ್ನಗಿರಿ‌ ಕ್ಷೇತ್ರದ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಹಾಗೂ ಶಾಸಕರ ಪುತ್ರ ಬೆಂಗಳೂರು ಜಲಮಂಡಳಿಯ ಲೆಕ್ಕಾಧಿಕಾರಿಯಾಗಿದ್ದ ಪ್ರಶಾಂತ್ ಇಬ್ಬರೂ ಲೋಕಾಯುಕ್ತ ಪೊಲೀಸರ ಮುಂದೆ ಹಾಜರಾಗಿದ್ದಾರೆ.

ಕೆಎಸ್​​ಡಿಎಲ್​ಗೆ ಕಚ್ಚಾವಸ್ತು ಖರೀದಿ‌ಗಾಗಿ ಟೆಂಡರ್ ನೀಡಲು 80 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟು, 40 ಲಕ್ಷ ಲಂಚ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಪೊಲೀಸರ‌ ಮುಂದೆ ಪ್ರಶಾಂತ್ ಮಾಡಾಳ್ ಸಿಕ್ಕಿಬಿದ್ದಿದ್ದರು. ಪ್ರಾಥಮಿಕ ವಿಚಾರಣೆ ವೇಳೆ‌ ತಂದೆ ವಿರೂಪಾಕ್ಷಪ್ಪ ಪರವಾಗಿ ಹಣ ಪಡೆದಿರುವ ವಿಚಾರ ಬೆಳಕಿಗೆ ಬಂದಿತ್ತು. ಹೀಗಾಗಿ ಇಬ್ಬರನ್ನು‌ ಪರಸ್ಪರ ವಿಚಾರಣೆ ನಡೆಸಲು ಮುಂದಾಗಿರುವ ಲೋಕಾಯುಕ್ತ ಪೊಲೀಸರು ನ್ಯಾಯಾಂಗ ಬಂಧನದಲ್ಲಿದ್ದ ಪ್ರಶಾಂತ್ ಮಾಡಾಳ್ ಹಾಗೂ ಮತ್ತೋರ್ವ ಆರೋಪಿ ಸುರೇಂದ್ರ ಎಂಬವರನ್ನು ಬಾಡಿ ವಾರಂಟ್​್ ಮೇರೆಗೆ ಮೂರು ದಿನಗಳ ಪೊಲೀಸ್ ಕಸ್ಟಡಿ ಪಡೆದುಕೊಂಡಿದ್ದಾರೆ.

ಅಪ್ಪನ ಪರವಾಗಿ ಟೆಂಡರ್ ನೀಡಲು ದೂರುದಾರರಿಂದ 40 ಲಕ್ಷ ಪಡೆದಿರುವುದು ನಿಜಾನ ? ಲಂಚ ಪಡೆಯಲು ತಂದೆ ವಿರೂಪಾಕ್ಷಪ್ಪ ಸೂಚನೆ ಕೊಟ್ಟಿದ್ದರಾ? ಯಾವ ರೀತಿ ಮಾತುಕತೆ ನಡೆದಿತ್ತು‌ ಎಂಬುದರ ಬಗ್ಗೆ ಪ್ರತ್ಯೇಕವಾಗಿ ತಂದೆ-ಮಗನನ್ನು ತನಿಖಾಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ. ಈ ಹಿಂದೆ ಲಂಚ ಪಡೆದ ಆರೋಪದ ಸಂಬಂಧ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರನ್ನು ಲೋಕಾಯುಕ್ತ ಪೊಲೀಸರ ವಿಚಾರಣೆ ನಡೆಸಿದ್ದರು. ಇಂದು ಮತ್ತೆ ಲೋಕಾಯುಕ್ತ ಪೊಲೀಸರ ಮುಂದೆ ವಿಚಾರಣೆಗೆ ಹಾಜರಾಗಿದ್ದಾರೆ.

ಶಾಸಕ ಮಾಡಾಳ್​ ಪುತ್ರನ ವಿರುದ್ಧ ಮತ್ತೆರಡು ಎಫ್​ಐಆರ್ : ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ಬೆಂಗಳೂರು ಜಲಮಂಡಳಿ ಲೆಕ್ಕಾಧಿಕಾರಿ ಪ್ರಶಾಂತ್​ ವಿರುದ್ಧ ಲೋಕಾಯುಕ್ತ ಪೊಲೀಸರು ಎರಡು ಎಫ್​ಐಆರ್​ ದಾಖಲಿಸಿದ್ದಾರೆ. ಈ ಮೂಲಕ ಒಟ್ಟು ಮೂರು ಎಫ್ಐಆರ್​ ದಾಖಲಾಗಿದೆ.

ಟೆಂಡರ್​ಗಾಗಿ 90 ಲಕ್ಷ ಹಣ ತಂದಿದ್ದ ಆರೋಪಿಗಳು:ಟೆಂಡರ್ ಪಡೆಯಲು 90 ಲಕ್ಷ ಹಣ ತಂದಿದ್ದ ಆರೋಪಿಗಳ ವಿರುದ್ಧ ಲೋಕಾಯಕ್ತ ಪೊಲೀಸರು ಮತ್ತೊಂದು ಎಫ್​ಐಆರ್ ದಾಖಲಿಸಿದ್ದಾರೆ. ಈ ಪ್ರಕರಣದಲ್ಲಿ ಪ್ರಶಾಂತ್ ಮಾಡಾಳ್, ಅಲ್ಬರ್ಟ್ ನಿಕೋಲಸ್, ಗಂಗಾಧರ್ ಹೆಚ್, ದೀಪಕ್ ಜಾಧವ್, ಅರೋಮಸ್ ಕಂಪನಿ ಹಾಗೂ ಕೆಎಸ್​ಡಿಎಲ್ ಅಧಿಕಾರಿಗಳು ಮತ್ತು ಸಿಬ್ಬಂದಿಯ ಹೆಸರುಗಳನ್ನು ಉಲ್ಲೇಖಿಸಲಾಗಿದೆ. ಪ್ರಕರಣ ಸಂಬಂಧ ಆರೋಪಿಗಳ ವಿರುದ್ಧ ಲೋಕಾಯುಕ್ತ ಪೊಲೀಸರು ದೂರು ದಾಖಲಿಸಿದ್ದಾರೆ. ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಮತ್ತು ಅವರ ಮಗ ಪ್ರಶಾಂತ್​ ಮಾಡಾಳ್​ ವಿರುದ್ಧ ಲೋಕಾಯುಕ್ತ ಅಧಿಕಾರಿಗಳು ತನಿಖೆ ಚುರುಕುಗೊಳಿಸಿದ್ದಾರೆ.

ಲೋಕಾಯುಕ್ತರಿಂದ ಮೇಲ್ಮನವಿಗೆ ಸಿದ್ಧತೆ: ನಿರೀಕ್ಷಣಾ ಜಾಮೀನು ರದ್ದುಗೊಳಿಸುವಂತೆ ಕೋರಿ ಲೋಕಾಯುಕ್ತ ಪೊಲೀಸರು ಸುಪ್ರೀಕೋರ್ಟ್​ನಲ್ಲಿ‌ ಮೇಲ್ಮನವಿ ಅರ್ಜಿ ಸಲ್ಲಿಸಲು ಸಿದ್ದತೆ ನಡೆಸಿದ್ದು, ಇದಕ್ಕೆ ಬೇಕಾದ ಪೂರಕ ದಾಖಲಾತಿಗಳ ಪರಿಶೀಲನೆಯಲ್ಲಿ ತೊಡಗಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ :ಶಾಸಕ ಮಾಡಾಳ್ ಪುತ್ರನ ವಿರುದ್ಧ ಮತ್ತೆರಡು ಎಫ್ಐಆರ್ ದಾಖಲಿಸಿದ ಲೋಕಾಯುಕ್ತ..!

ABOUT THE AUTHOR

...view details