ಕರ್ನಾಟಕ

karnataka

ETV Bharat / state

ಯಾವುದೇ ಗುಟ್ಟನ್ನು ಹೇಳೋಕೆ ಆಗಲ್ಲ.. ಮ್ಯಾಜಿಕ್ ನಡೆಯುತ್ತದೆ: ಶಿವಲಿಂಗೇಗೌಡ - ಗುಟ್ಟನ್ನು ಹೇಳೋಕೆ ಆಗಲ್ಲ

ಅವಿಶ್ವಾಸ ನಿರ್ಣಯದ ಮೇಲಿನ ಚರ್ಚೇ ಮುಗಿಯುವವರೆಗೂ ಸದನ ನಡೆಯಬಹುದು ಎಂದು ಶಾಸಕ ಶಿವಲಿಂಗೇಗೌಡ ಹೇಳಿದ್ದಾರೆ.

ಶಿವಲಿಂಗೇಗೌಡ, ಶಾಸಕ

By

Published : Jul 18, 2019, 1:38 PM IST

ಬೆಂಗಳೂರು:ಯಾವುದೇ ಗುಟ್ಟು ಹೇಳುವುದಕ್ಕಾಗಲ್ಲ, ಗೇಮ್ ಪ್ಲಾನ್ ನಡೆಯುವುದರ ಬಗ್ಗೆ ಗೊತ್ತಿಲ್ಲ ಎಂದು ಶಾಸಕ ಶಿವಲಿಂಗೇಗೌಡ ಹೇಳಿದ್ದಾರೆ.

ಶಿವಲಿಂಗೇಗೌಡ, ಶಾಸಕ

ದೇವನಹಳ್ಳಿ ಗಾಲ್ಫ್​ ಶೈರ್ ರೆಸಾರ್ಟ್ ಬಳಿ ಅಧಿವೇಶನಕ್ಕೆ ತೆರಳುವ ಮುನ್ನ ಮಾತನಾಡಿದ ಅವರು, ಸುಪ್ರೀಂಕೋರ್ಟ್ ತೀರ್ಪು ಯಾರ ಪರವೂ ಅಲ್ಲ, ವಿರುದ್ದವೂ ಅಲ್ಲ. ಸುಪ್ರೀಂಕೋರ್ಟ್, ಸ್ಪೀಕರ್​ಗೆ ಯಾವುದೇ ಆದೇಶ ಕೊಟ್ಟಿಲ್ಲ, ಪರಮಾಧಿಕಾರ ನೀಡಿದೆ. ಮಾಧ್ಯಮಗಳ ಮೂಲಕ ಸುಪ್ರೀಂ ಕೋರ್ಟ್​​ನ ಆದೇಶದ ಮಾಹಿತಿ ನೋಡಿದ್ದೇನೆ. ಇಂತಿಷ್ಟೆ ದಿನದಲ್ಲಿ‌ ರಾಜೀನಾಮೆ ಇತ್ಯರ್ಥ ಮಾಡಿ ಅಂತ ಕೋರ್ಟ್ ಹೇಳಿಲ್ಲ ಎಂದಿದ್ದಾರೆ.

ಇಂದು ಸದನ ಅನಿರ್ದಿಷ್ಟವಧಿಯವರೆಗೂ ನಡೆಯುತ್ತದೆ. ವಿಶ್ವಾಸ ನಿರ್ಣಯದ ಮೇಲಿನ ಚರ್ಚೆ ಮುಗಿಯುವವರೆಗೂ ಸದನ ನಡೆಯಬಹುದು. ಅದು ಇಂದೇ ಮುಕ್ತಾಯ ವಾಗುತ್ತದೆ ಎಂದು ಹೇಳಲಾಗದು. ಕೋರ್ಟ್​ನ ತೀರ್ಪು ಪ್ರಜಾಪ್ರಭುತ್ವದ ಕಗ್ಗೊಲೆ ಎಂದರು ತಪ್ಪಾಗಲ್ಲ.‌ ಕೋರ್ಟ್ ತೀರ್ಪಿನ ವಿರುದ್ದ ಸಂವಿಧಾನ ಪೀಠದಲ್ಲಿ ಅಪೀಲ್ ಹೋಗುವುದಾಗಿ ಹೇಳಿದ್ದಾರೆ.

ನ್ಯಾಯಾಲಯ ಅತೃಪ್ತರಿಗೆ ವಿಪ್ ಜಾರಿ ಮಾಡಬೇಡಿ ಅಂತ ಹೇಳಿಲ್ಲ. ಹೀಗಾಗಿ ಅನರ್ಹತೆ ಮಾಡಬಾರದು ಅಂತ ಏನೂ ಇಲ್ಲ. ವಿಪ್ ಜಾರಿ ಮಾಡೋದು ಶಾಸಕರ ಮೇಲೆ ಒತ್ತಡ ಹೇರುವಂತದ್ದಲ್ಲ ಎಂದು ಸಮಜಾಯಿಷಿ ನೀಡಿದ್ರು.

ABOUT THE AUTHOR

...view details