ಕರ್ನಾಟಕ

karnataka

ETV Bharat / state

ದಿನಸಿ ಕಿಟ್​ ವಿತರಣೆಯಲ್ಲಿ ಸರ್ಕಾರದಿಂದ ತಾರತಮ್ಯ ನೀತಿ: ರಾಮಲಿಂಗಾ ರೆಡ್ಡಿ ಆರೋಪ

ರಾಜ್ಯ ಸರ್ಕಾರ ನೀಡಿರುವ ದಾಖಲೆಗಳ ಪ್ರಕಾರ ಪಾಲಿಕೆ ಹಾಗೂ ಕಾರ್ಮಿಕ ಇಲಾಖೆ ವತಿಯಿಂದ ಸುಮಾರು 7 ಲಕ್ಷ ಕಿಟ್ವಿ ತರಿಸಲಾಗಿದೆ. ಹಾಗಾದರೆ ಚಾಮರಾಜಪೇಟೆ ಹೊರತು ಪಡಿಸಿ ಉಳಿದ ಎಲ್ಲಾ ಕ್ಷೇತ್ರಗಳಿಗೂ ಅನ್ಯಾಯವಾಗಿದೆ ಎಂದು ರಾಮಲಿಂಗಾರೆಡ್ಡಿ ಅವರು ಆರೋಪಿಸಿದರು.

By

Published : Jun 6, 2020, 10:45 PM IST

mla-ramalngareddy
ಮಾಜಿ ಸಚಿವ ರಾಮಲಿಂಗಾರೆಡ್ಡಿ

ಬೆಂಗಳೂರು:ರಾಜ್ಯ ಸರ್ಕಾರವುಮಹಾನಗರ ವ್ಯಾಪ್ತಿಯಲ್ಲಿ ಕಾಂಗ್ರೆಸ್ ಶಾಸಕರು ಪ್ರತಿನಿಧಿಸುವ ಕ್ಷೇತ್ರಗಳಲ್ಲಿ ದಿನಸಿ ಕಿಟ್ ವಿತರಣೆಯಲ್ಲಿ ತಾರತಮ್ಯ ಎಸಗಿದೆ ಎಂದು ಮಾಜಿ ಸಚಿವ ರಾಮಲಿಂಗಾರೆಡ್ಡಿ ಆರೋಪಿಸಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯ ಸರ್ಕಾರದ ದಾಖಲೆಗಳ ಪ್ರಕಾರ ಪಾಲಿಕೆ ಹಾಗೂ ಕಾರ್ಮಿಕ ಇಲಾಖೆ ವತಿಯಿಂದ ಸುಮಾರು 7 ಲಕ್ಷ ಕಿಟ್ವಿ ತರಿಸಲಾಗಿದೆ. ಹಾಗಾದರೆ ಚಾಮರಾಜಪೇಟೆ ಹೊರತು ಪಡಿಸಿ ಉಳಿದ ಎಲ್ಲಾ ಕ್ಷೇತ್ರಗಳಿಗೂ ಅನ್ಯಾಯವಾಗಿದೆ. ಒಟ್ಟು ಏಳು ಲಕ್ಷ ಕಿಟ್​ಗಳ ಪೈಕಿ ಕೇವಲ 50 ಸಾವಿರ ಕಿಟ್​​ಗಳನ್ನು ಮಾತ್ರ ಕಾಂಗ್ರೆಸ್ ಶಾಸಕರ ಕ್ಷೇತ್ರಕ್ಕೆ ನೀಡಲಾಗಿದೆ. ಆಹಾರದ ಕಿಟ್ ಮಾತ್ರವಲ್ಲ ಎಲ್ಲಾ ವಿಚಾರಗಳಲ್ಲಿಯೂ 8 ಕ್ಷೇತ್ರಗಳನ್ನು ನಿರ್ಲಕ್ಷ್ಯ ಮಾಡಲಾಗಿದೆ ಎಂದು ಆಪಾದಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಸಚಿವ ರಾಮಲಿಂಗಾರೆಡ್ಡಿ

ಕೊರೊನಾದಿಂದಾಗಿ ಜನರಿಗೆ ಸಾಕಷ್ಟು ತೊಂದರೆಯಾಗಿದೆ. ಸರ್ಕಾರ ಕೂಡ ಸಾಕಷ್ಟು ತರಾತುರಿಯಲ್ಲಿ ಲಾಕ್​ಡೌನ್ ಘೋಷಣೆ ಮಾಡಿದ್ದರಿಂದ ಜನರು ತಮ್ಮ ತವರಿಗೆ ತೆರಳಲು ಸಮಸ್ಯೆ ಉಂಟಾಯಿತು. ಕಾಂಗ್ರೆಸ್ ಕಾರ್ಯಪಡೆ ವತಿಯಿಂದ ನಾವು ಬೆಂಗಳೂರಿನ ಎಲ್ಲಾ 28 ಕ್ಷೇತ್ರಗಳಿಗೆ ನೆರವು ಒದಗಿಸಿದ್ದೇವೆ. ನಿರ್ಗತಿಕರು, ಪೇಂಟರ್, ಕಾರ್ಮಿಕರಿಗೆ ಸರ್ಕಾರ ಸರಿಯಾಗಿ ಪರಿಹಾರ ನೀಡಿಲ್ಲ. ನನಗೆ ಬೆಂಗಳೂರಿನ ಸಂಪೂರ್ಣ ಜವಾಬ್ದಾರಿ ವಹಿಸಿದ್ದರು. ಹೀಗಾಗಿ ಎಲ್ಲಾ ಕಡೆ ಓಡಾಡಿ ಜನರ ಸಂಕಷ್ಟಕ್ಕೆ ನೆರವಾಗಿದ್ದೇನೆ. ಸರ್ಕಾರ ಸಭೆ ಕರೆದಾಗ ಸೂಕ್ತ ಸಲಹೆ ನೀಡಿದ್ದೇನೆ ಎಂದರು.

ಪಕ್ಷದ ರಾಷ್ಟ್ರೀಯ ಅಧ್ಯಕ್ಷೆ ಸೋನಿಯಾ ಗಾಂಧಿ ಸೂಚನೆ ಮೇರೆಗೆ ನಾವು ಸಾಕಷ್ಟು ಪರಿಹಾರ ಕ್ರಮ ಕೈಗೊಂಡಿದ್ದೇವೆ. ನಾವು ವೈಯಕ್ತಿಕವಾಗಿ ಕೈಗೊಂಡ ಪರಿಹಾರ ಕಾರ್ಯಗಳಷ್ಟು ರಾಜ್ಯ ಸರ್ಕಾರ ನಮ್ಮ ಕ್ಷೇತ್ರಗಳಲ್ಲಿ ಮಾಡಿಲ್ಲ. 5 ಕೆಜಿ ಅಕ್ಕಿ 2 ಕೆಜಿ ಗೋಧಿ ಕೊಟ್ಟಿದ್ದೆ ಸರ್ಕಾರದ ದೊಡ್ಡ ಸಾಧನೆ ಎಂದರು.

ಸೋನಿಯಾ ಗಾಂಧಿ ಅವರ ಸೂಚನೆಯಡಿ 10,14,480 ದಿನಸಿ ಕಿಟ್ ವಿತರಿಸಿದ್ದೇವೆ. 93,96,785 ಪಾಕೆಟ್ ಉಚಿತ ಆಹಾರ ಹಂಚಿದ್ದೇವೆ. 5,85,600 ಮಾಸ್ಕ್, ಸ್ಯಾನಿಟೈಸರ್ ನೀಡಲಾಗಿದೆ. 13,12,550 ಕುಟುಂಬಗಳಿಗೆ ತರಕಾರಿ ಹಂಚಿದ್ದೇವೆ ಎಂದು ಹೇಳಿದರು.

ABOUT THE AUTHOR

...view details